Sunday, September 8, 2024

Latest Posts

ಇನ್ಮುಂದೆ ಕನ್ನಡದಲ್ಲಿ ಬರಿಬಹುದು ಇಂಜಿನಿಯರಿoಗ್ ಎಕ್ಸಾಮ್..!

- Advertisement -

www.karnatakatv.net : ಬೆಂಗಳೂರು: ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿoಗ್ ಶಿಕ್ಷಣಕ್ಕೆ ಒಪ್ಪಿಗೆಯನ್ನು ಸೂಚಿಸಲಾಗಿತ್ತು, ಆದಕಾರಣ 4 ಕಾಲೇಜುಗಳಿಗೆ ಅನುಮತಿ ಪತ್ರವನ್ನು ನೀಡಲಾಗಿದೆ. ಹಾಗೇ ಕನ್ನಡ ಭಾಷೆಯಲ್ಲಿ ಇಂಜಿನಿಯರಿoಗ್ ಸಿಲೆಬಸ್ ನ್ನು ಬಿಡುಗಡೆ ಮಾಡಿರುವುದು ನೂತನ ಅಧ್ಯಾಯವಾಗಿದೆ. ಇದೊಂದು ಐತಿಹಾಸಿಕ ದಿನ,” ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಂತಸವನ್ನು ಹಂಚಿಕೊoಡರು.

“ಇoಜಿನಿಯರಿoಗ್ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಸಿಲೆಬಸ್ ಕೊಡುವುದಾಗಿ ಸೂಚಿಸಿದ್ರು ಅದು ಇಂದು ಬಿಡುಗಡೆಗೊಂಡಿದೆ. ನೂತನ ಶಿಕ್ಷಣ ಪದ್ಧತಿ ಅನುಸಾರ ಇಂಜಿನಿಯರಿoಗ್ ಶಿಕ್ಷಣ ಅನುಷ್ಠಾನ ಮಾಡಲಾಗುವುದು,” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮಯೊಂದರಲ್ಲಿ ತಿಳಿಸಿದ್ದಾರೆ.

“ಉನ್ನತ ಶಿಕ್ಷಣದಲ್ಲಿ ದೊಡ್ಡ ಪ್ರಮಾಣದಲ್ಲಿ ತಯಾರಿ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿಗೊಳಪಡಿಸಲಾಗುತ್ತಿದೆ. ನಾನು ಕೂಡ ಇಂಜಿನಿಯರಿoಗ್ ವಿದ್ಯಾರ್ಥಿ ಆಗಿದ್ದೆ. ನನ್ನ ವಿಷಯದ ಬಗ್ಗೆ ಹೊಸತನ ಕೊಡುವ ಪ್ರಯತ್ನ ಮಾಡಲಾಗಿದೆ. ಹೊಸತನ ಕೊಡುವ ಪ್ರಯತ್ನವನ್ನು ನಾನು ಉದ್ಘಾಟಿಸಿದ್ದೇನೆ. ನಾನೇ ಉದ್ಘಾಟನೆ ಮಾಡಿದ್ದು ನನಗೆ ತುಂಬಾ ಖುಷಿ ತಂದಿದೆ. ಬದಲಾವಣೆಗೆ ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳಬೇಕು,” ಎಂದು ಹೇಳಿದರು.

ವಿನುತಾ ಹವಾಲ್ದಾರ್, ಕರ್ನಾಟಕ ಟಿವಿ- ಬೆಂಗಳೂರು


- Advertisement -

Latest Posts

Don't Miss