Special Story:
ಪೊಲೀಸ್ ಕೆಲಸ ಎಂದ ಮೇಲೆ ಹಗಲು ರಾತ್ರಿ ಕೆಲಸ. ಈ ಕ್ಷೇತ್ರದಲ್ಲಿ ರಜೆ ಸಿಗುವುದೇ ಕಷ್ಟ. ಹೀಗಿರುವಾಗ ಹೊಸದಾಗಿ ಮದುವೆಯಾದ ಕಾನ್ಸ್ಟೇಬಲ್ವೊಬ್ಬರು ಮದುವೆಯಾದ ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಪತ್ನಿಯ ಸಂಬಂಧಿಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಪತ್ನಿಗೆ ಭರವಸೆ ನೀಡಿದ್ದ ಕಾನ್ಸ್ಟೇಬಲ್ ಕೆಲಸದ ಅತಿಯಾದ ಒತ್ತಡದಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ರಜೆ ಸಿಗುವುದಿಲ್ಲ ಎಂಬುದಾಗಿ ಪತ್ನಿಗೆ ಹೇಳಿದ್ದಾರೆ. ಆದರೆ ಇದರಿಂದ ಪತ್ನಿ ಕೋಪಗೊಂಡಿದ್ದು, ಪತಿಯಲ್ಲಿ ಮಾತು ಬಿಟ್ಟಿದ್ದಾರೆ ಎನ್ನಲಾಗಿದೆ.http://ವಿಪತ್ತು ನಿರ್ವಹಣೆ ಹಾಗೂ ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ
ಪತ್ನಿ ಮಾತು ಬಿಟ್ಟಿದ್ದರಿಂದ ನೊಂದ ಕಾನ್ಸ್ಟೇಬಲ್ ಮೇಲಧಿಕಾರಿಗೆ ಪತ್ರ ಬರೆದು, ನನಗೆ ರಜೆ ಬೇಕು, ರಜೆ ಇಲ್ಲವೆಂದು ನನ್ನ ಪತ್ನಿ ಮುನಿಸಿಕೊಂಡಿದ್ದಾಳೆ. ನನ್ನ ಫೋನ್ಗೂ ಪ್ರತಿಕ್ರಿಯಿಸುತ್ತಿಲ್ಲ ಎಂದು ತನ್ನ ಸಮಸ್ಯೆ ತೋಡಿಕೊಂಡಿದ್ದಾರೆ. ಪತ್ರ ನೋಡಿದ ಮೇಲಧಿಕಾರಿಗಳು ಜನವರಿ 10ರಿಂದ ಐದು ದಿನಗಳ ಕಾಲ ರಜೆಯನ್ನು ಮಂಜೂರು ಮಾಡಿದ್ದಾರೆ. ಸದ್ಯ ಕಾನ್ಸ್ಟೇಬಲ್ ಮೇಲಧಿಕಾರಿಗಳಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
ಹುಟ್ಟಿದ ವರ್ಷ ಬೇರೆಯಾದ್ರೂ ಇವರು ಅವಳಿಗಳು..?! ವಿಶೇಷವೆನಿಸೋ ಸತ್ಯ ಏನು ಗೊತ್ತಾ..?!
ಅಮೇರಿಕಾದಲ್ಲಿ ವಿಶೇಷವೊಂದು ನಡೆದಿದೆ. ಹೌದು ಅವರಿಬ್ಬರು ಹುಟ್ಟಿದ್ದು ಅವಳಿಗಳಾಗಿ ಆದರೆ ಅವರ ಜನನ ಇಸವಿ ಮಾತ್ರ ಬೇರೆ ಬೇರೆ ಇನ್ನು ಹಸುಗೂಸಾಗಿರೋ ಕಂದಮ್ಮಗಳ ಬದುಕಲ್ಲಿ ಇಂತಹ ಅಚ್ಚರಿ ನಡೆದಿದೆ. ಅವಳಿ ಮಕ್ಕಳು 2022, ಡಿಸೆಂಬರ್ 31ರ ರಾತ್ರಿ 55ಕ್ಕೆ ಜನಿಸಿದರೆ, ಮತ್ತೊಂದು ಮಗು ಜನವರಿ 1, 2023 ರಂದು 12:01 ಕ್ಕೆ ರಾತ್ರಿ 12 ಗಂಟೆಗೆ ಜನಿಸಿದೆ. ಈ ಮೂಲಕ ಎರಡು ಮಕ್ಕಳು ಬೇರೆ ಬೇರೆ ವರ್ಷದಲ್ಲಿ ಜನಿಸಿ ಅಚ್ಚರಿ ಮೂಡಿಸಿವೆ ಎನ್ನಲಾಗಿದೆ
ಅಮೇರಿಕಾದ ದಂಪತಿಗಳು ಅವಳಿ ಹೆಣ್ಣುಮಕ್ಕಳು, 202 ಮತ್ತು 2023 ರಲ್ಲಿ ಯುಎಸ್ ನಲ್ಲಿ ಜನ್ಮದಿನಾಂಕ ಪಡೆದಿದ್ದಾರೆ. ತನ್ನ ಮೊದಲ ಮಗಳು ಅನ್ನಿ ಜೋ ಹಾಗೂ ಎರಡನೇ ಮಗಳು ಎಫಿ ರೋಸ್ ಎಂದು ನಾಮಕರಣ ಮಾಡಿದ್ದಾರೆ. ಮಕ್ಕಳ ತಾಯಿ ಕಾಲಿ ಅವರು , ಅವರು ತಮ್ಮ ಇಬ್ಬರು ಮಕ್ಕಳು ವಿಶಿಷ್ಟ ಜನ್ಮದಿನಗಳನ್ನು ಹೊಂದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ರೀತಿ ಇಬ್ಬರು ಬೇರೆ ಬೇರೆ ವರ್ಷಗಳಲ್ಲಿ ಜನಿಸುತ್ತಿರುವುದು ಅಚ್ಚರಿ ಮೂಡಿಸಿದೆ
“ಮುಸ್ಲಿಮರಿಗೆ ಅಧಿಕಾರ ಸಿಕ್ಕಿದಾಗಲೆಲ್ಲ ಸಮರ್ಥವಾಗಿ ಮುನ್ನೆಡೆಸಿರುವ ಇತಿಹಾಸ ಈ ನೆಲಕ್ಕಿದೆ “:ಅಬ್ದುಲ್ ಸಮದ್
“ಚಡ್ಡಿ ಹಾಕಿ ಕೊಂಡವರೂ ನನ್ನನ್ನು ಭೇಟಿ ಮಾಡಬಹುದು”… RSS ಗೆ ಟಾಂಗ್ ಕೊಟ್ರಾ ಸಿದ್ದು..?!