ದೇಶದ ಬಂಗಾರ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆ ದಾಖಲಿಸಿವೆ. ನಿನ್ನೆ 15 ರೂ. ಇಳಿಕೆಯಾಗಿದ್ದ ಚಿನ್ನದ ಬೆಲೆ, ಇಂದು ಮತ್ತೆ 65 ರೂ. ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಕೂಡ 3 ರೂ. ಹೆಚ್ಚಳವಾಗಿ ದಾಖಲಾಗಿದೆ.
ಇಂದಿನ ಚಿನ್ನ–ಬೆಳ್ಳಿ ದರಗಳನ್ನ ನೋಡೋದಾದ್ರೆ ಆಭರಣ ಚಿನ್ನದ ಬೆಲೆ 11,710 ರೂನಿಂದ 11,775 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,846 ರೂ ಆಗಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 173 ರೂನಿಂದ 176 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 183 ರೂ ಆಗಿದೆ.
ಕಳೆದ ಎರಡು ದಿನಗಳಲ್ಲಿ 6 ರೂ. ಏರಿಕೆಯಾದ ಬೆಳ್ಳಿ, ಇಂದೂ 3 ರೂ. ಏರಿಕೆ ಕಂಡಿದ್ದು, ಒಟ್ಟು ಮೂರು ದಿನಗಳಲ್ಲಿ 9 ರೂ. ಏರಿಕೆ ದಾಖಲಿಸಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 1,17,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,28,460 ರುಪಾಯಿ ಆಗಿದೆ.
100 ಗ್ರಾಂ ಬೆಳ್ಳಿ ಬೆಲೆ 17,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,17,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಂಗೆ 17,600 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 18,300 ರೂ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ನೋಡೋದಾದ್ರೆ 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ 12,846 ರೂ. 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ 11,775 ರೂ
ಬೆಳ್ಳಿ ಬೆಲೆ 1 ಗ್ರಾಂಗೆ 173 ರೂ ಆಗಿದೆ.
ವರದಿ : ಲಾವಣ್ಯ ಅನಿಗೋಳ

