Sandalwood: ಮಾಜಿ ಬಿಗ್ಬಾಸ್ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಸ್ಪರ್ಧಿಗಳು ಸುದೀಪ್ ಸರ್ ಹೇಳುವ ಮಾತುಗಳನ್ನು ಕೇಳಬೇಕು ಎಂದಿದ್ದಾರೆ.
ಬಿಗ್ಬಾಸ್ ನಂತರ ಸ್ಪರ್ಧಿಸಿದ್ದ ಹಲವರಿಗೆ ಸಿನಿಮಾದಲ್ಲಿ, ಸಿರಿಯಲ್ನಲ್ಲಿ ಅಥವಾ ಯಾವುದೇ ಕೆಲಸದಲ್ಲಿ ಹೆಚ್ಚು ಅವಕಾಶ ಸಿಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೇ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ ಉತ್ತರಿಸಿದ ರೂಪೇಶ್ ರಾಜಣ್ಣ, ಬಿಗ್ಬಾಸ್ ಸ್ಪರ್ಧಿಗಳಿಗೆ ಎಲ್ಲೇ ಆಗಲಿ ಅವಕಾಶ ನೀಡಬೇಕು ಅಥವಾ ನೀಡಬಾರದು ಎನ್ನುವುದಕ್ಕೆ ಬಿಗ್ಬಾಸ್ ಕಾರಣವಲ್ಲ.
ಏಕೆಂದರೆ ಮತ್ತೆ ಸಾಲು ಸಾಲು ಅವಕಾಶ ನೀಡಲಿದ್ದೇವೆ ಬಿಗ್ಬಾಸ್ಗೆ ಬನ್ನಿ ಅಂತಾ ಯಾರೂ ಕರೆಯೋದಿಲ್ಲ. ಶೋ ಮಾಡಲಿದ್ದೇವೆ ಎಂದು ಕರೆಯುತ್ತಾರೆ. ಆದರೆ ಯಾರಿಗೂ ಇಲ್ಲಿ ಫೋರ್ಸ್ ಮಾಡುವುದಿಲ್ಲ. ಅವಕಾಶ ನೀಡುತ್ತಾರೆ. ಬರುವುದು ಬಿಡುವುದು ಅವರವರ ಇಚ್ಛೆ. ಶೋ ಮಾಡಿದ ಬಳಿಕ ಅವರವರ ಜೀವನ ರೂಪಿಸಿಕ“ಳ್ಳುವುದು ಅವರ ಜವಾಬ್ದಾರಿ ಅಂತಾರೆ ರೂಪೇಶ್.
ಕಲರ್ಸ್ ಕನ್ನಡದವರು ಇಡೀ ರಾಜ್ಯಕ್ಕೆ ತಮ್ಮನ್ನು ತಾವು ಪರಿಚಯ ಮಾಡಿಕ“ಳ್ಳಲು ಅವಕಾಶ ನೀಡುತ್ತಾರೆ. ಅದಕ್ಕೆ ನಾವು ಅವರಿಗೆ ಋಣಿಯಾಗಿರಬೇಕು. ಅವಕಾಶ ಪಡೆಯುವುದು ನಮ್ಮ ಪ್ರಯತ್ನವಾಗಿರಬೇಕು. ಅವಕಾಶ ಸಿಗದಿದ್ದರೆ, ಅದು ನಿಮ್ಮ ಹಣೆಬರಹ. ಅದಕ್ಕೆ ಬಿಗ್ಬಾಸ್ ಜವಾಬ್ದಾರಿ ಅಲ್ಲ ಅಂತಾರೆ ರೂಪೇಶ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




