- Advertisement -
www.karnatakatv.net ಕರ್ನಾಟಕ : ದೇಶದಲ್ಲಿ ಕೊರೊನಾ ಅಲೆಗಳ ಅಟ್ಟಹಾಸ ಮುಂದುವರೆದಿದ್ದು ರಾಜ್ಯಕ್ಕೆ ಆಗಸ್ಟ್ ನಲ್ಲಿ3ನೇ ಅಲೆ ಅಪ್ಪಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿರುವುದಾಗಿ ತಜ್ಞರು ಎಚ್ಚರಿಸುತ್ತಿದ್ದಾರೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೋಂಕಿನ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು ಕರ್ನಾಟಕಕ್ಕೂ ಇದೇ ಮಾರ್ಗವಾಗಿ ಬರುವ ಸೂಚನೆಗಳಿವೆ. ಈ ಮೊದಲು ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ವೈರಸ್ ಗಳು ಇದೇ ದಾರಿಯಲ್ಲಿ ಬಂದಿದ್ದು, ಈಗ ಆ ರಾಜ್ಯಗಳಿಂದ ಬರುತ್ತಿದ್ದ ಜನರ ಜೊತೆಗೆ ವೈರಸ್ ಕೂಡ ಬರುತ್ತದೆ ಎಂದು ಹೇಳುತ್ತಿದ್ದಾರೆ. ಜನರ ಬೇಜವಾಬ್ದಾರಿ ತನದಿಂದಲೇ ಈ ಅವಾಂತರ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
- Advertisement -