Thursday, December 12, 2024

Latest Posts

ರಾಜ್ಯದಲ್ಲಿ ಕೊರೊನಾ ಕುಸಿತ

- Advertisement -

www.karnatakatv.net : ಇಂದು ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ ಇಂದು 266 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,22,455ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 6 ಮಂದಿ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಇಂದು 3,015 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,21,491ಕ್ಕೆ ಏರಿಕೆಯಾಗಿದೆ. ಇನ್ನು 27,527 ಸಕ್ರೀಯ ಪ್ರಕರಣಗಳಿವೆ.

ರಾಜ್ಯಾದ್ಯಂತ ಇಂದು 1,35,974 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 1,291 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 0.94ಕ್ಕೆ ಇಳಿದಿದೆ.

ರಾಜ್ಯದ ಇತರ ಜಿಲ್ಲೆಗಳಾದ ಬೆಳಗಾವಿ 38, ಚಿಕ್ಕಮಗಳೂರು 100, ದಕ್ಷಿಣ ಕನ್ನಡ 126, ಹಾಸನ 125, ಮೈಸೂರು 125, ಶಿವಮೊಗ್ಗ 51, ತುಮಕೂರು 70, ಉಡುಪಿ 85 ಪ್ರಕರಣಗಳು ವರದಿಯಾಗಿದೆ.

ಉಳಿದಂತೆ ಯಾದಗಿರಿ 2, ವಿಜಯಪುರ 7, ರಾಮನಗರ 5, ರಾಯಚೂರು 6. ಕಲಬುರ್ಗಿ 8, ಹಾವೇರಿ 1, ಗದಗ 1, ದಾವಣಗೆರೆ 8, ಚಿಕ್ಕಬಳ್ಳಾಪುರ 9, ಬೀದರ್ 1, ಬಳ್ಳಾರಿ 3, ಬಾಗಲಕೋಟೆ 1 ಪ್ರಕರಣ ಪತ್ತೆಯಾಗಿದೆ.

- Advertisement -

Latest Posts

Don't Miss