ಬೆಂಗಳೂರಿನಲ್ಲಿ ತಮ್ಮ ಖರ್ಚುವೆಚ್ಚ ಹೇಳಿ, ಇದು ಕಾಸ್ಟ್ಲಿ ಸಿಟಿ ಎಂದ ದಂಪತಿ: ಪರ-ವಿರೋಧ ಚರ್ಚೆ

Bengaluru: ಬೆೆಂಗಳೂರು ಅಂದ್ರೆ ಕಾಸ್ಟ್ಲಿ ದುನಿಯಾ ಅನ್ನೋದು ಹಲವರ ಅಭಿಪ್ರಾಯ. ಕರ್ನಾಟಕದವರಿಗೆ ಇದು ಸತ್ಯವಾದ ಮಾತು ಅಲ್ಲ ಅಂತಾನೇ ಅನ್ನಿಸುತ್ತೆ. ಏಕೆಂದರೆ ಬೆಂಗಳೂರಿನಲ್ಲಿ ಬರೀ 10 ಸಾವಿರ ರೂಪಾಯಿ ದುಡಿಮೆ ಮಾಡಿ, ಜೀವನ ದೂಡುವವರಿದ್ದಾರೆ. ಎರಡು ಸಮಯ ಊಟ, ತಿಂಡಿ, ರೂಮ್ ಬಾಡಿಗೆ. 1ರಿಂದ 2 ಸಾವಿರ ರೂಪಾಯಿ ಉಳಿತಾಯ. ಈ ರೀತಿ ಬದುಕುವವರಿದ್ದಾರೆ.

ಆದರೆ ಐಷಾರಾಮಿ ಜೀವನಾನೇ ಬೇಕು ಅನ್ನೋರಿಗೆ ಬರೀ ಬೆಂಗಳೂರಲ್ಲ. ಎಲ್ಲೇ ಹೋದ್ರೂ ಆ ಸಿಟಿ ಕಾಸ್ಟ್ಲಿ ಅನ್ಸತ್ತೆ. ಅದೇ ರೀತಿ ಇಲ್ಲಿ 1 ದಂಪತಿಗೆ ಬೆಂಗಳೂರು ಹೆಚ್ಚು ಕಾಸ್ಟ್ಲಿ ಸಿಟಿ ಅಂತಾ ಅನ್ನಿಸಿದೆ. ಇವರ ತಿಂಗಳ ಖರ್ಚು 1.3 ಲಕ್ಷ ಅಂತೆ.

ಈ ದಂಪತಿಯ ಹೆಸರು ರಾಧಿಕಾ-ಏಕಾಂಶ. ಅವರು ಇರುವ ಮನೆ ಬಾಡಿಗೆ 56 ಸಾವಿರ. ದಿನಸಿ ಖರ್ಚು 15 ಸಾವಿರ. ಇಂಟರ್ನೆಟ್ ಬೇರೆ ಬಿಲ್ ಎಲ್ಲಾ ಸೇರಿ 15 ಸಾವಿರ. ಮನೆಗೆಲಸದವರಿಗೆ 10 ಸಾವಿರ. ತಿಂಗಳಿಗೆ ಶಾಪಿಂಗ್, ವೈಯಕ್ತಿಕ ಖರ್ಚು 15 ಸಾವಿರ. ಪೆಟ್ರೋಲ್, ಟ್ರಾವೆಲಿಂಗ್ ಖರ್ಚು 6 ಸಾವಿರ. ಫುಡ್ ಆರ್ಡರ್ ಮಾಡಿದ್ರೆ 2 ಸಾವಿರ. ಓಟಿಟಿ ಚಂದಾದಾರರಾಗಲು 3 ಸಾವಿರ. ಹೀಗೆ ತಿಂಗಳಿಗೆ 1.3 ಲಕ್ಷ ಖರ್ಚಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೇ, ಬೆಂಗಳೂರು ಚೆನ್ನಾಗಿ ಹಣ ಗಳಿಸಬಹುದಾದ ಸ್ಥಳವಾದರೂ, ತಿಂಗಳ ಕಳೆಯುವ ವೇಳೆಗೆ ದಿವಾಳಿ ಆದಂತೆ ಭಾಸವಾಗುತ್ತದೆ ಎಂದು ಇವರು ಹೇಳಿದ್ದಾರೆ. ಇನ್ನು ಬಂದ ಕಾಮೆಂಟ್ಸ್‌ಗಳಲ್ಲಿರುವ ಸಾಮ್ಯತೆ ಅಂದ್ರೆ, ಖರ್ಚು ಕಡಿಮೆ ಮಾಡಿದ್ರೆ, ಜೀವನ ಸುಲಭವಾಗಿರುತ್ತದೆ ಎಂದೇ ಆಗಿದೆ.

About The Author