- Advertisement -
www.karnatakatv.net: ಯೂರೋಪ್ ನಲ್ಲಿ ಕೊರೊನಾ ಸೋಂಕು ಮತ್ತು ಕೊರೊನಾ ದಿಂದ ಸಾವುಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಹೌದು.. ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಿಸಿದ್ದು ನಂತರ ಕ್ರಮೇಣ ಕಡಿಮೆಯಾಗುತ್ತಿತ್ತು ಆದರೆ ಈಗ ಮತ್ತೆ ಯೂರೋಪ್ ನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. 53-ದೇಶಗಳ ಯುರೋಪ್‌ನಲ್ಲಿ ಕಳೆದ ವಾರ ಕೋವಿಡ್ ಪ್ರಕರಣಗಳಲ್ಲಿ ಶೇ 18 ರಷ್ಟು ಹೆಚ್ಚಳ ಕಂಡು ಬಂದಿದೆ. ಅಷ್ಟೇ ಅಲ್ಲ. ಸತತ ನಾಲ್ಕನೇ ವಾರವೂ ಸೋಂಕು ಹೆಚ್ಚಳವಾಗಿದೆ ಎಂದು ಆರೋಗ್ಯ ಸಂಸ್ಥೆ ತಿಳಿಸಿದೆ. ಯುರೋಪ್‌ನಲ್ಲಿ ಕೋವಿಡ್ ಸಂಬoಧಿತ ಸಾವು ಪ್ರಕರಣಗಳಲ್ಲಿಯೂ ಶೇ 14ರಷ್ಟು ಹೆಚ್ಚಳವಾಗಿದೆ. ಕಳೆದ ವಾರ 16 ಲಕ್ಷ ಪ್ರಕರಣಗಳು ಪತ್ತೆಯಾದರೆ, 21,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಕೋವಿಡ್ ಕುರಿತ ಡಬ್ಲ್ಯುಎಚ್‌ಒದ ಸಾಂಕ್ರಾಮಿಕ ರೋಗಶಾಸ್ತ್ರದ ಸಾಪ್ತಾಹಿಕದಲ್ಲಿ ದಾಖಲಿಸಲಾಗಿದೆ.
- Advertisement -