specia news
ಯೆಸ್ ವಿಕ್ಷಕರೆ :
ಕಳೆದ ಎರಡು ವರ್ಷಗಳ ಹಿಂದೆ ವಿಶ್ವದಲ್ಲೆಲ್ಲ ವ್ಯಾಪಿಸಿದ್ದ ಕೊರೋನಾ ಸಾಂಕ್ರಾಮಿಕ ರೋಗ ಹಲವಾರು ಜನರು ಕೇವಲ ಹೆಸರಿನಿಂದಲೆ ಕುಗ್ಗಿ ಹೊಗಿದ್ದಾರೆ. ಇನ್ನು ಕೆಲವು ಜನಗಳು ಈ ಕೊರೋನಾ ಹರಡುವಿಕೆಯಿಂದಾಗಿ ಮರಣಹೊಂದಿದ್ದಾರೆ. ಇವೆಲ್ಲ ನಿಮಗೆ ಗೊತ್ತಿರುವ ಸಂಗತಿಗಳು ಆದರೆ ಈಗ ವೈದ್ಯಕಿಯ ಲೋಕದಿಂದ ಮತ್ತೊಂದು ಭಯಾನಕ ವಿಷಯ ಹೊರಬಿದ್ದಿದೆ.
ಅದೇನೆಂದರೆ ಕೊರೊನಾ ಸಮಯದಲ್ಲಿ ಸಾಕಷ್ಟು ಜನ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿನ್ನತೆಗೆ ಒಳಗಾಗಿದ್ದಾರೆ. ನಮಗೆಲ್ಲಿ ರೋಗ ಹರಡಿಬಿಡುತ್ತದೆಯೋ ಎನ್ನುವ ಭಯ ಒಂದು ಕಡೆಯಾದರೆ ಇನ್ನು ಸಾಮಾನ್ಯ ಜನರು ಕೊರೊನಾ ಸಮಯದಲ್ಲಿ ಎದುರಿಸಿದ ಆರ್ಥಿಕ ಸಮಸ್ಯೆಯಿಂದಾಗಿ ಈಗಲೂ ಸಹ ಆ ಆಲೋಚನೆಯಿಂದ ಹೊರಬರಲು ಒದ್ದಾಡುತಿದ್ದಾರೆ.ಹಾಗಾಗಿ ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿರುವ ಪುರುಷರು ಇನ್ನೊಂದು ಸಮಸ್ಯೆಯನ್ನು ಎದುರಿಸುತಿದ್ದಾರೆ. ಅದೇನೆಂದರೆ ಪುರುಷರಲ್ಲಿ ಬತ್ತಿಹೋಗಿರುವ ಲೈಂಗಿಕ ಆಸಕ್ತಿ
ಹೌದು ಸ್ನೇಹಿತರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನರು ಕೊರೋನಾ ಸಮಯದಲ್ಲಿ ಹೆದರಿಸಿದಂತಹ ಆರ್ಥಿಕ ಸಮಸ್ಯೆಯನ್ನು ಇನ್ನ ಮೆಲುಕುಹಾಕುತ್ತಿರುವುದರ ಪರಿಣಾಮ ಹಾಗೂ ಹಣದ ಅಭಾವ ಮತ್ತು ಬೆಲೆ ಏರಿಕೆಯಂತಹ ಸಮಸ್ಯೆಯಿಂದಾಗಿ ಮನೆಯನ್ನು ಮುನ್ನಡೆಸುವ ಪುರುಷರು ಚಿಂತೆಯಲ್ಲಿ ಮುಳುಗಿರುವ ಕಾರಣ ಲೈಂಗಿಕ ಕ್ರಿಯೆಯ ಕಡೆಗೆ ಗಮನ ಹರಿಸುವುದನ್ನು ಮರೆಯುತಿದ್ದಾನೆ.
ಕೋವಿಡ್ ಸಮಯದಲ್ಲಿ ಪುರುಷರಲ್ಲಿ ಹೆಚ್ಚಾಗಿರುವ ಈ ನಿಮಿರುವಿಕೆ ಸಮಸ್ಯೆಗೆ ಮುಖ್ಯ ಕಾರಣವೆಂದರೆ ಎಂಡೋಥೀಲಿಯಲ್ ಅಪಸಾಮಾನ್ಯ ಕ್ರಿಯೆ (ರಕ್ತನಾಳಗಳ ಕಿರಿದಾಗುವಿಕೆ) ಮತ್ತು ಕೋವಿಡ್ ಸಮಯದಲ್ಲಿ ಮಾನಸಿಕ ಯಾತನೆಯ ನಡುವಿನ ಸಂಬಂಧಗಳು ಎಂದು ತಜ್ಞರು ಹೇಳಿದ್ದಾರೆ. ಸ್ಪರ್ಶ್ ಆಸ್ಪತ್ರೆಯ ಸಮಾಲೋಚಕ ಮೂತ್ರಶಾಸ್ತ್ರಜ್ಞ ಡಾ ಅವಿನಾಶ್ ಟಿಎಸ್ ಅವರು, ಸಾಂಕ್ರಾಮಿಕ ರೋಗದ ನಂತರ ಇಡಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ ಎನ್ನುತ್ತಾರೆ.
ಕೊನೆಯದಾಗಿ ನಾವು ಹೇಳುವ ವಿಚಾರವೆನೆಂದರೆ ಪ್ರತಿಯೊಂದು ಸಮಸ್ಯೆಗೋ ಪರಿಹಾರ ಇದ್ದೇ ಇರುತ್ತದೆ. ಸಮಸ್ಯೆಗಳು ಮನುಷ್ಯನಿಗೆ ಬರದೆ ಮತ್ಯಾರಿಗೆ ಬರುತ್ತವೆ. ಮೇಧಾವಿಯಾಗಿರುವ ಮಾನವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ದೈರ್ಯವಾಗಿ ಅವನ್ನು ಎದುರಿಸಬೇಕೆ ಹೊರತು ಅದೇ ಚಿಂತೆಯಲ್ಲಿ ಮುಳುಗಿ ಆರೋಗ್ಯವನ್ನು ಹಾಳುಮಾಡಿಕೊಂಡು ನಿಮ್ಮ ಮನೆಯವರಿಗೆ ಸಮಸ್ಯೆ ಆಗದೆ ತರಹ ನೋಡಿಕೊಳ್ಳಬೇಕು.
ಒಂದರ ಬಗ್ಗೆ ಚಿಂತೆ ಮಾಡುವುದರಿಂದ ಮತ್ತೊಂದು ಸಮಸ್ಯೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಯಲ್ಲಿ ನಾ ಮುಂದು, ತಾ ಮುಂದು ಎನ್ನುತ್ತಿರುವ ಸಂಸ್ಥೆಗಳು