Saturday, July 20, 2024

Latest Posts

ಡಿ-56 ಮುಹೂರ್ತಕ್ಕೆ ಕೌಂಟ್ ಡೌನ್ ಶುರು..!

- Advertisement -

ಡಿ-56 ಮುಹೂರ್ತಕ್ಕೆ ಕೌಂಟ್ ಡೌನ್ ಶುರು..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ ರಿಲೀಸ್ ಯಆವಾಗ ಅನ್ನೋದೆ ಸದ್ಯ ಡಿ-ಭಕ್ತಗಣದ ತಲೆಯಲ್ಲಿರೋ ಪ್ರಶ್ನೆ. ಇದೀಗ ಅದಕ್ಕೂ ಮುಂಚೆ ಡಿ-ಬಾಸ್ ತಮ್ಮ ಸೆಲೆಬ್ರೆಟಿಗಳಿಗೆ ಬಿಗ್ ನ್ಯೂಸ್‌ನ ಕೊಡೋದಕ್ಕೆ ಸಜ್ಜಾಗಿದ್ದಾರೆ. ಅದೇ ಡಿ ಬಾಸ್‌ರ 56ನೇ ಸಿನಿಮಾ.

ಹೌದು. ಈಗಾಗ್ಲೇ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ದರ್ಶನ್‌ರ 56ನೇ ಚಿತ್ರದ ಬಗ್ಗೆ ಅಧಿಕೃತ ಮಾಹಿತಿಯನ್ನ ಮಾಧ್ಯಮಗಳಿಗೆ ಕೊಟ್ಟಿದ್ರು. ಅದರಂತೆಯೇ ಡಿ-56 ಸಿನಿಮಾದ ಮುಹೂರ್ತವನ್ನ ವರಮಹಾ ಲಕ್ಷ್ಮಿ ಹಬ್ಬದ ದಿನ ಅಂದ್ರೆ ಆಗಸ್ಟ್ 5ನೇ ತಾರೀಖಿನಂದು ಮಾಡಲಾಗುತ್ತೆ ಎಂದಿದ್ರು.

ಇದೀಗ ಆ ದಿನ ಹತ್ತಿರ ಬಂದಿದೆ, ಎಲ್ಲಾ ಡಿಬಾಸ್ ಅಭಿಮಾನಿಗಳಿಗೂ ದರ್ಶನ್‌ರ ಹೊಸ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಗರಿಗೆದರಿದೆ. ನಾಳೆ ಹಬ್ಬದ ದಿನ ಏನೆಲ್ಲಾ ಅಪ್ಡೇಟ್ಸ್ ನ ಡಿಬಾಸ್ ಕೊಡ್ತಾರೆ ಅಂತ ಫ್ಯಾನ್ಸ್ ಅತೀ ನಿರೀಕ್ಷೆಯಿಂದ ಕಾಯ್ತಿದ್ದಾರೆ.

ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ನಾಯಿಯೊಂದು ಕುರಿಮಂದೆಯನ್ನು ಕಾಯುತ್ತಿರುವ ಪೋಸ್ಟರ್‌ ನ್ನು ಬಿಡುಗಡೆ ಮಾಡಲಾಗಿದೆ. ”ನಾಯಿ, ಕುರಿಗಳನ್ನು ಕಾಯುವುದು ಅದರ ಜೀವನದ ಧ್ಯೇಯ ಎಂದುಕೊಂಡಿರುತ್ತದೆ. ತನ್ನ ಜೀವನವನ್ನು ಅದು ತ್ಯಾಗ ಮಾಡಿ ಆ ಕುರಿ ಮಂದೆಯನ್ನು ಕಾಯುತ್ತದೆ” ಅದೇ ಅಂಶವನ್ನಿಟ್ಟುಕೊಂಡು ನಾವು ಸಿನಿಮಾ ಮಾಡುತ್ತಿದ್ದೇವೆ ಎಂದು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಹೇಳಿದ್ದಾರೆ.

ಈಗಾಗ್ಲೇ ತಿಳಿದಿರೋ ಮಾಹಿತಿ ಪ್ರಕಾರ ಡಿ-56 ಚಿತ್ರಕ್ಕೆ ತರುಣ್ ಸುಧೀರ್ ಡೈರೆಕ್ಷನ್ ಹೇಳಲಿದ್ದು, ರಾಕ್‌ಲೈನ್ ವೆಂಕಟೇಶ್ ಅದ್ಧೂರಿಯಾಗಿ ನಿರ್ಮಾಣ ಮಾಡಲಿದ್ದಾರೆ. ಈ ಹೊಸ ಚಿತ್ರದಲ್ಲಿ ದರ್ಶನ್‌ಗೆ ನಟಿಯಾಗಿ ಯಾರಿರಲಿದ್ದಾರೆ, ಉಳಿದ ತಾರಾಗಣ ಏನಿರುತ್ತೆ ಅನ್ನೋದರ ಕಂಪ್ಲೀಟ್ ಮಾಹಿತಿಯನ್ನ ಚಿತ್ರತಂಡವೇ ಅಧಿಕೃತವಾಗಿ ತಿಳಿಸಲಿದೆ. ಒಟ್ಟಿನಲ್ಲಿ ವರಮಹಾ ಲಕ್ಷ್ಮಿ ಹಬ್ಬಕ್ಕೆ ಎಲ್ಲೆಡೆ ತಯಾರಿ ಜೋರಾಗಿದೆ, ಈ ಸಂಭ್ರದ ನಡುವೆ ಡಿಬಾಸ್ ಪ್ಯಾನ್ಸ್ಗೂ ದೊಡ್ಡ ಗಿಫ್ಟ್ ದರ್ಶನ್ ಕೊಡಲಿದ್ದಾರೆ.

- Advertisement -

Latest Posts

Don't Miss