Health Tips: ಕರ್ನಾಟಕ ಟಿವಿ ಜತೆ ಮಾತನಾಡಿರುವ ಜಿಮ್ ಟ್ರೇನರ್ ಅಂಜನ್ ಅವರು, ಜನರು ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಹಳೆಯ ಕಾಲದಲ್ಲಿ ಜನ ರಾಶಿ ರಾಶಿ ಅನ್ನ- ಸಾಂಬಾರ್ ತಿಂತಿದ್ರು. ಆದರೂ ಅವರು ಚೆನ್ನಾಗಿಯೇ ಇದ್ದರು. ಗಟ್ಟಿಮುಟ್ಟಾಗಿ ಇದ್ದರು. ಆದರೆ ಈಗಿನ ಕಾಲದಲ್ಲಿ ನಾವು ಹೆಚ್ಚು ಊಟ ಮಾಡಬಾರದು ಅನ್ನೋದಕ್ಕೆ ಕಾರಣವೇನು..? ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅಂಜನ್, ಏಕೆಂದರೆ ಹಳೆಯ ಕಾಲದಲ್ಲಿ ಜನ ಅದೇ ರೀತಿ ಮೈ ಬಗ್ಗಿಸಿ ಕೆಲಸ ಮಾಡುತ್ತಿದ್ದರು. ಅವರಿಗೆ ಜಿಮ್ ಸೇರಿ ಬೇರೆ ಬೇರೆ ವ್ಯಾಯಾಮಗಳ ಅವಶ್ಯಕತೆ ಇರಲಿಲ್ಲ. ಅವರು ಹೇಗೆ ತಿನ್ನುತ್ತಿದ್ದರೋ, ಅದೇ ರೀತಿ ತೋಟ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಇನ್ನು ಎರಡನೇಯದಾಗಿ ನಾವು ತೂಕ ಇಳಿಸಿಕ“ಳ್ಳಲೇಬೇಕು, ಸಣ್ಣಗಾಗಲೇ ಬೇಕು ಅಥವಾ ಫಿಟ್ ಆಗಿರಲೇಬೇಕು ಅಂದ್ರೆ, ನಾವು ಮನೆಯಲ್ಲಿ ಮಾಡೋಕ್ಕಾಗಲ್ಲ. ಜಿಮ್‌ಗೇ ಹೋಗಬೇಕಾ..? ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅಂಜನ್. ಹಾಗೇನಿಲ್ಲ. ನಾವು ಮನಸ್ಸು ಮಾಡಿದ್ರೆ, ಹೇಗೆ ಬೇಕಾದ್ರೂ ತೂಕ ಇಳಿಸಬಹುದು. ಅದು ನಮ್ಮ ಮನಸ್ಥಿತಿಯ ಮೇಲೆ ಬಿಟ್ಟಿದ್ದು. ಕೆಲವರು ಮ್ಯೂಸಿಕ್ ಇದ್ದರಷ್ಟೇ ಜಿಮ್ ಮಾಡುತ್ತಾರೆ. ಆದರೆ ನಾನು ಹಾಗಲ್ಲ, ಸುತ್ತಮುತ್ತ ಬೆಳಕಿಲ್ಲದಿದ್ದರೂ, ಮ್ಯೂಸಿಕ್ ಇಲ್ಲದಿದ್ದರೂ ಜಿಮ್ ಮಾಡುತ್ತೇನೆ ಅಂತಾರೆ ಅಂಜನ್.
ಇತ್ತೀಚೆಗೆ ಜಿಮ್‌ನಲ್ಲಿ ಕಪಲ್ ಗೋಲ್ ಹೆಚ್ಚಾಗಿದ್ದು, ಪತಿ-ಪತ್ನಿ ಇಬ್ಬರೂ ಸೇರಿ, ಜಿಮ್‌ಗೆ ಬಂದು ತೂಕ ಇಳಿಸುವ ಚಾಲೆಂಜ್ ತೆಗೆದುಕ“ಳ್ಳುತ್ತಿದ್ದಾರೆ. ಇದರ ಬಗ್ಗೆ ಏನಂತೀರಿ ಎಂದು ಕೇಳಿದ್ದಕ್ಕೆ, ಉತ್ತರಿಸಿದ ಅಂಜನ್, ಹೆಣ್ಣು ಮಕ್ಕಳು ಜಿಮ್ ಸೇರೋದು ಉತ್ತಮವೇ. ಆದರೆ ಅವರು ಕಡಿಮೆ ತೂಕ ಎತ್ತಿ, ಬಳಿಕ ಅದನ್ನೇ ಇನ್ನಷ್ಟು ಇಂಪ್ರೂವ್ ಮಾಡಿದರೆ ಉತ್ತಮ ಅಂತಾರೆ ಅಂಜನ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.