ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿರುವ ದರ್ಶನ್, ಮಾನಸಿಕ ಒತ್ತಡದಿಂದ ಕುಸಿದು ಹೋಗಿದ್ದಾರೆಂದು ವರದಿಯಾಗಿದೆ. ವಿಚಾರಣೆಯ ವೇಳೆ, ಜಡ್ಜ್ ಎದುರು ತಮ್ಮ ಸ್ಥಿತಿಯನ್ನು ವಿವರಿಸಿದ ದರ್ಶನ್, ವಿಷ ಕೊಡ ಎಂದು ಕೇಳಿಕೊಂಡಿದ್ದರು.
ಅದರ ಬೆನ್ನಲ್ಲೇ, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬೇಕೆಂಬ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. A2 ಆರೋಪಿ ದರ್ಶನ್ ಅನ್ನು ಬಳ್ಳಾರಿಗೆ ಕಳುಹಿಸಲು ಯಾವುದೇ ಸೂಕ್ತ ಕಾರಣವಿಲ್ಲವೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಆದರೆ, ನಟ ದರ್ಶನ್ ಮಾಡಿದ ಕೆಲವು ಬೇಡಿಕೆಗಳನ್ನು ನ್ಯಾಯಾಲಯ ಪರಿಗಣಿಸಿದೆ. ಹೆಚ್ಚುವರಿ ಹಾಸಿಗೆ ಮತ್ತು ದಿಂಬಿಗಾಗಿ ಸಲ್ಲಿಸಿದ ಮನವಿಗೆ ಅನುಮತಿ ದೊರಕಿದೆ. ದರ್ಶನ್ಗೆ ಜೈಲಿನೊಳಗೆ ನಿಗದಿತ ನಿಯಮಾವಳಿಗಳ ಪ್ರಕಾರ ಓಡಾಡುವಂತೆಯೂ ಅವಕಾಶ ನೀಡಲಾಗಿದೆ.
ಆದ್ರೆ, ಜೈಲು ಕೈಪಿಡಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ. ನಿಯಮ ಉಲ್ಲಂಘನೆಯಾದರೆ, ಜೈಲು ಐಜಿಯಿಂದ ತಕ್ಷಣ ಕ್ರಮ ಕೈಗೊಳ್ಳಲು ಕೋರ್ಟ್ ಆದೇಶಿಸಿದೆ. ಅಗತ್ಯವಿದ್ದಲ್ಲಿ, ಬೇರೆ ಜೈಲಿಗೆ ಸ್ಥಳಾಂತರಿಸುವ ಅಧಿಕಾರ ಕೂಡ ಐಜಿಗೆ ಇದೆ ಎಂದು ಕೋರ್ಟ್ ತಿಳಿಸಿದೆ. ಹೀಗಾಗಿ, ದರ್ಶನ್ಗೆ ಬಳ್ಳಾರಿ ಜೈಲು ಸ್ಥಳಾಂತರ ಸಾಧ್ಯವಾಗದಿದ್ದರೂ, ಕೆಲವು ಸೌಲಭ್ಯಗಳು ದೊರೆತಿರುವುದರಿಂದ ಇದು ದೊಡ್ಡ ರಿಲೀಫ್ ಎಂದೇ ಹೇಳಬಹುದು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

