Friday, July 11, 2025

Latest Posts

ಕೊವಾಕ್ಸಿನ್ ಲಸಿಕೆ ಪಡೆದರೆ ಒಮಾನ್ ಗೆ ಹೋಗಬಹುದು..!

- Advertisement -

www.karnatakatv.net: ಭಾರತೀಯರು ಕೊವಾಕ್ಸಿನ್ ಲಸಿಕೆ ಪಡೆದರೆ ಒಮಾನ್ ಗೆ ತೆರಳಬಹುದು ಎಂದು ಒಮಾನ್ ಸರ್ಕಾರವು ಅನುಮತಿ ನೀಡಿದೆ.

ಹೌದು..ಒಮಾನ್ ಸರ್ಕಾರವು ಬುಧವಾರ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆ ಪಡೆದ ಪ್ರಯಾಣಿಕರು ದೇಶಕ್ಕೆ ಪ್ರಯಾಣಿಸಲು ಅನುಮತಿಸಿದೆ. ಅಂದಾಜು ಆಗಮನದ ದಿನಾಂಕಕ್ಕಿoತ ಕನಿಷ್ಠ 14 ದಿನಗಳ ಮೊದಲು ಕೊವಾಕ್ಸಿನ್‌ನ ಎರಡು ಡೋಸ್‌ಗಳನ್ನು ಪಡೆದ ಎಲ್ಲಾ ಪ್ರಯಾಣಿಕರು ಈಗ ಕ್ವಾರಂಟೈನ್‌ನ ಅಗತ್ಯವಿಲ್ಲದೆ ಒಮಾನ್‌ಗೆ ಪ್ರಯಾಣಿಸಬಹುದಾಗಿದೆ. ಭಾರತೀಯ ರಾಯಭಾರ ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, “ಅಂದಾಜು ಆಗಮನದ ದಿನಾಂಕಕ್ಕಿoತ ಕನಿಷ್ಠ 14 ದಿನಗಳ ಮೊದಲು ಎರಡು ಡೋಸ್ ಕೋವಾಕ್ಸಿನ್ ಅನ್ನು ಸ್ವೀಕರಿಸಿದ ಭಾರತದ ಎಲ್ಲಾ ಪ್ರಯಾಣಿಕರು ಈಗ ಕ್ವಾರಂಟೈನ್ ಅಗತ್ಯವಿಲ್ಲದೇ ಒಮಾನ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ. ಆಗಮನಕ್ಕೆ ಮುನ್ನ RT-PCR ಪರೀಕ್ಷೆಯಂತಹ ಅವಶ್ಯಕತೆಗಳು/ಷರತ್ತುಗಳು ಅಂತಹ ಪ್ರಯಾಣಿಕರಿಗೆ ಅನ್ವಯಿಸುತ್ತವೆ.”

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ಕೋವಾಕ್ಸಿನ್‌ಗಾಗಿ ತುರ್ತು ಬಳಕೆಯ ಪಟ್ಟಿಯನ್ನು ಪರಿಗಣಿಸಲು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಗುಂಪು ಅಕ್ಟೋಬರ್ 26 ರಂದು ಸಭೆಯನ್ನು ಆಯೋಜಿಸುತ್ತದೆ ಎಂದು ಹೇಳಿದ್ದರು.

- Advertisement -

Latest Posts

Don't Miss