ಇತ್ತಿಚಿನ ದಿನಗಳಲ್ಲಿ ಇಲ್ಲಾ ಜಾತಿಯವರು ಮಾಂಸಹಾರಿಗಳಾಗಿದ್ದಾರೆ. ಇದರಿಂದಾಗಿ ಮಂಸ ಸಿಗದ ಕಾರಣ ಪ್ರತಿಯೊಂದು ಪ್ರಾಣಿಯನ್ನು ಸಾಯಿಸಿ ತಮ್ಮ ಬಾಯಿಚಪಲ ತೀರಿಸಿಸಕೊಳ್ಳುತಿದ್ದಾರೆ. ಅದಲ್ಲದೆ ಹಿಂದೂ ಸಂಸ್ಕೃತಿಯಲ್ಲಿ ಹಸುವನ್ನು ದೇವರೆಂದು ಪೂಜಿಸುತ್ತೇವೆ ಗೋವು ಕಾಮದೇನು ಅವಳು ತಾಯಿ ಅವಳನ್ನು ಪೂಜಿಸಿದರೆ ಪುಣ್ಯ ಬರುತ್ತದೆ ಎಂದು ನಂಬಿರುವ ನಾವು ಅವಳನ್ನು ದೇವರೆಂದು ಪೂಜಿಸಯತ್ತೇವೆ.. ಆದರೆ ಈ ಮಾಂಸದ ವ್ಯಾಪರಿಗಳು ದುಡ್ಡಿನ ಆಸೆಗಾಗಿ ಆ ತಾಯಿಯನ್ನೇ ಕೊಂದು ಆಹಾರ ಮಾಡಿ ತಿನ್ನುತಿದ್ದಾರೆ.ಇದರಿಂದ ಗೋಹತ್ಯೆ ಮಾತ್ರ ಆಗುತ್ತಿಲ್ಲ ಅದರ ಜೊತೆಗೆ ನಮ್ಮ ಪರಿಸರದ ಮೇಲೂ ಹಾನಿಯಾಗುತ್ತಿದೆ.
ಗೋಹತ್ಯೆಯನ್ನು ನಿಲ್ಲಿಸಿದರೆ ಭೂಮಿಯ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ತಾಪಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಮೀರ್ ವಿನೋದ್ ಚಂದ್ರ ವ್ಯಾಸ್, ಧರ್ಮವು ಗೋವಿನಿಂದ ಹುಟ್ಟುತ್ತದೆ. ಗೋವಿನ ಸಗಣಿಯಿಂದ ಮಾಡಿದ ಮನೆಗಳ ಮೇಲೆ ಪರಮಾಣು ವಿಕಿರಣದ ಪ್ರಭಾವ ಬೀರುವುದಿಲ್ಲ ಎಂದು ವಿಜ್ಞಾನ ಸಾಬೀತು ಪಡಿಸಿದೆ. ಜೊತೆಗೆ ಗೋಮೂತ್ರವು ಅನೇಕ ಗುಣ ಪಡಿಸಲಾಗದ ರೋಗಗಳಿಗೆ ರಾಮಬಾಣ ಎಂದೂ ಅವರು ಹೇಳಿದ್ದಾರೆ. ವಿಪರ್ಯಾಸ ಅಂದರೆ ನ್ಯಾಯಾಧೀಶರು ಹೇಳಿರುವ ಈ ಹೇಳಿಕೆಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.
‘ಗೋವು ಕೇವಲ ಪ್ರಾಣಿಯಲ್ಲ, ತಾಯಿ’
ಗೋಸಂರಕ್ಷಣೆಯ ಕುರಿತು ಗುಜರಾತ್ ಸರ್ಕಾರ ಕಳೆದ ನವೆಂಬರ್‌ನಲ್ಲಿ ಅಂಗೀಕರಿಸಿದ ಕಾಯ್ದೆಯ ಅನುಷ್ಠಾನವನ್ನು ಸರಿಯಾಗಿ ಜಾರಿಗೆ ತರದಿರುವ ಬಗ್ಗೆ ಜಿಲ್ಲಾ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ಗೋವು ಕೇವಲ ಪ್ರಾಣಿ ಮಾತ್ರವಲ್ಲ, ಅದು ತಾಯಿ. ಗೋವು 68 ಕೋಟಿ ಪವಿತ್ರ ಸ್ಥಳಗಳು ಮತ್ತು 33 ಕೋಟಿ ದೇವರುಗಳು ವಾಸಿಸುವ ಜೀವಂತ ಗ್ರಹವಾಗಿದೆ. ಇಡೀ ಬ್ರಹ್ಮಾಂಡದ ಮೇಲೆ ಗೋವಿನ ಪ್ರಾಧಾನ್ಯತೆ ದೊಡ್ಡ ಸ್ಥಾನದಲ್ಲಿ ಇದೆ ಎಂದು ನ್ಯಾಯಾಧೀಶ ಸಮೀರ್ ವಿನೋದ್ ಚಂದ್ರ ವ್ಯಾಸ್ ಹೇಳಿದ್ದಾರೆ.
ಹವಾಮಾನ ಬದಲಾವಣೆಗೆ ಗೋಹತ್ಯೆ ಕಾರಣವಂತೆ!ಅಲ್ಲದೇ, ಕೆಲವೊಂದು ಸಂಸ್ಕೃತ ಶ್ಲೋಕಗಳನ್ನೂ ಉಲ್ಲೇಖಿಸಿರುವ ನ್ಯಾ. ವಿನೋದ್ ಚಂದ್ರ ವ್ಯಾಸ್, ನಾವು ಗೋವುಗಳನ್ನು ಅತೃಪ್ತಿಗೊಳಿಸಿದರೆ ನಮ್ಮ ಸಂಪತ್ತು, ಆಸ್ತಿಗಳು ಕಣ್ಮರೆಯಾಗುತ್ತವೆ ಎಂದು ಹೇಳಿರುವುದಲ್ಲದೇ, ಗೋಹತ್ಯೆಗೂ ಹವಾಮಾನ ಬದಲಾವಣೆಗೂ ಸಂಬಂಧ ಕಲ್ಪಿಸಿದ್ದಾರೆ. ಇಂದು ಸಮಾಜದಲ್ಲಿರುವ ಸಮಸ್ಯೆಗಳು ಉದ್ರಿಕ್ತಗೊಳ್ಳೋದು ಮತ್ತು ಕೋಪದ ಹೆಚ್ಚಳದ ಕಾರಣದಿಂದ ಆಗಿದೆ. ಇದಕ್ಕೆಲ್ಲ ಏಕೈಕ ಕಾರಣವೆಂದರೆ ಗೋಹತ್ಯೆ. ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವವರೆಗೆ ಸಾತ್ವಿಕ ಹವಾಮಾನವು ಬದಲಾವಣೆಯಾಗಿ ತನ್ನ ಪರಿಣಾಮವನ್ನು ಬೀರುವುದಿಲ್ಲೆ ಎಂದು ಹೇಳಿದ್ದಾರೆ.
ಚೌಬೆ ಭಾರತ ಫುಟ್ಬಾಲ್‍ನ ನೂತನ ಸಾರಥಿ : ಉಪಾಧ್ಯಕ್ಷರಾಗಿ ಹ್ಯಾರಿಸ್ ಆಯ್ಕೆ