Saturday, July 20, 2024

Latest Posts

ಟಿ20 ವಿಶ್ವಕಪ್: ಆಸ್ಟ್ರೇಲಿಯಾ ತಂಡ ಪ್ರಕಟ 

- Advertisement -

ಸಿಡ್ನಿ:  ಮುಂಬರುವ ಪ್ರತಿಷ್ಠಿತ ಟಿ20 ವಿಶ್ವಕಪ್ ಹಾಗೂ ಭಾರತ ಪ್ರವಾಸಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 15 ಆಟಗಾರರನ್ನೊಳಗೊಂಡ ತಂಡದಲ್ಲಿ ಸಿಂಗಾಪುರ ಮೂಲದ  ಟಿಮ್  ಡೇವಿಡ್‍ಗೂ ಸ್ಥಾನ ನೀಡಲಾಗಿದೆ.

ಗುರುವಾರ ಪ್ರಕಟಿಸಲಾಗಿರುವ ತಂಡದಲ್ಲಿ  26 ವರ್ಷದ ಸೋಟಕ ಬ್ಯಾಟರ್ ಟಿಮ್ ಡೇವಿಡ್ 2019ರಿಂದ 2020ರವರೆಗೆ ಸಿಂಗಾಪುರ ತಂಡದ ಪರ 14 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಐಸಿಸಿ ನಿಯಮಗಳ ಪ್ರಕಾರ ಟಿಮ್ ಡೇವಿಡ್ ಆಸ್ಟ್ರೇಲಿಯಾ ಪರ ಆಡುವ ಅರ್ಹತೆ ಪಡೆದಿದ್ದಾರೆ.

ಭಾರತ ಪ್ರವಾಸ ನಂತರ ಆಸ್ಟ್ರೇಲಿಯಾ ತಂಡ ಅಕ್ಟೋಬರ್‍ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸರಣಿಗಳನ್ನು ಆಡಲಿದೆ.

ಭಾರತದ ಪ್ರವಾಸದಲ್ಲಿ  ಡೇವಿಡ್ ವಾರ್ನರ್‍ಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲು ಕ್ಯಾಮಾರಾನ್ ವೈಟ್‍ಗೆ ಅವಕಾಶ ನೀಡಲಾಗಿದೆ.

ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ: ಆ್ಯರಾನ್ ಫಿಂಚ್ (ನಾಯಕ), ಪ್ಯಾಟ್ ಕಮಿನ್ಸ್ (ಉಪನಾಯಕ), ಆಶ್ಟನ್ ಆಗಾರ್, ಟಿಮ್ ಡೇವಿಡ್, ಜೋಶ್ ಹೇಜ್ಲವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೇನ್ ಮ್ಯಾಕ್ಸ್‍ವೆಲ್, ಕೇನ್ ರಿಚಡ್ರ್ಸ್‍ನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮ್ಯಾಥೀವ್ ವೇಡ್, ಡೇವಿಡ್ ವಾರ್ನರ್, ಆ್ಯಡಾಮ್ ಜಾಂಪಾ.   

 

 

 

 

- Advertisement -

Latest Posts

Don't Miss