ಸಿಎಂ ಎದುರು ತಲೆಬಾಗಿ ನಿಂತ ಕ್ರಿಕೇಟಿಗ ವೆಂಕಟೇಶ್ ಪ್ರಸಾದ್: ಬೇಸರ ವ್ಯಕ್ತಪಡಿಸಿದ ಸಂಸದ ತೇಜಸ್ವಿ ಸೂರ್ಯ

News: ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಶೇರ್ ಮಾಡಿದ್ದು, ಇದರಲ್ಲಿ ಸಿಎಂ ಸಿದ್ದರಾಮಯ್ಯ ಕುರ್ಚಿ ಮೇಲೆ ಕುಳಿತಿದ್ದು, ವೆಂಕಟೇಶ್ ಪ್ರಸಾದ್ ಅವರ ಎದುರು ನಿಂತು ಕೈ ಮುಗಿದಿದ್ದಾರೆ.

ಈ ಫೋಟೋ ಶೇರ್ ಮಾಡಿರುವ ತೇಜಸ್ವಿ ಸೂರ್ಯ, ನಮ್ಮ ದೇಶವನ್ನು ಪ್ರತಿನಿಧಿಸುವ ಕ್ರಿಕೇಟ್ ಆಟಗಾರನನ್ನು ನಡೆಸಿಕ“ಳ್ಳುವ ರೀತಿ ಹೀಗಾ ಎಂದು ಪ್ರಶ್ನಿಸಿದ್ದಾರೆ. 1 ಚೌಕಟ್ಟಿನಲ್ಲಿ ರಾಜಕೀಯ ಸಂಸ್ಕೃತಿಯನ್ನು ನಾವಿಲ್ಲಿ ನೋಡಬಹುದು. ನಮ್ಮ ಶತ್ರು ದೇಶ ಪಾಕಿಸ್ತಾನದ ವಿರುದ್ಧ ಸಮರ ಸಾರಿ, ಕ್ರಿಕೇಟ್ ಲೋಕದಲ್ಲಿ ಹೆಸರುವಾಸಿಯಾಗಿರುವ ವೆಂಕಟೇಶ್ ಪ್ರಸಾದ್ ಸಿಎಂ ಮುಂದೆ ಕೈ ಮುಗಿದು ನಿಂತಿದ್ದಾರೆ. ಯಾಕೆ..? ಯಾವುದೋ ತಪ್ಪಿಗಾಗಿ ಅಲ್ಲ, ಕರ್ತವ್ಯ ವೈಫಲ್ಯಕ್ಕಾಗಿ ಅಲ್ಲ. ಅವರು ಅವರ ಕೆಲಸ ಮಾಡಿ, ಸಂಸ್ಕಾರ ಮೆರೆದಿದ್ದಾರೆ.

ಏಕೆಂದರೆ ರಾಜಕೀಯ ವ್ಯಕ್ತಿಗಳ ಅಹಂಕಾರಗಳ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಏಕೆಂದರೆ ಅವರು ಫ್ರೀ ಟಿಕೇಟ್‌ಗಾಗಿ, ಫ್ರೀ ಚಿಕಿತ್ಸೆಗಳ ಬಗ್ಗೆ ಬೇಡಿಕೆ ಇಟ್ಟು ನಿಂತಿರಲಿಲ್ಲ. ಆದರೂ ಅವರಿಗೆ ಗೌರವ ಸಿಗದಿರುವುದು ದುರಂತ ಎಂದು ತೇಜಸ್ವಿ ಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಾನು ವೆಂಕಟೇಶ್ ಪ್ರಸಾದ್ ಅವರ ಜತೆ ನಿಲ್ಲುತ್ತೇನೆ. ಮತ್ತು ನನ್ನಂಥ ಲಕ್ಷಾಂತರ ಜನರೂ ಕೂಡ ನಿಲ್ಲುತ್ತಾರೆಂದು ಭಾವಿಸಿದ್ದೇನೆ ಎಂದಿದ್ದಾರೆ.

About The Author