Sunday, September 8, 2024

Latest Posts

ಪಂಜಾಬ್ ಎದುರು ಚೆನ್ನೈಗೆ ಸೇಡಿನ ಕದನ 

- Advertisement -

ಮುಂಬೈ: ಐಪಿಎಲ್‍ನ ಇಂದಿನ ಪಂದ್ಯದಲ್ಲಿ  ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ವಾಂಖೆಡೆಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಈ ಎರಡೂ ತಂಡಗಳಿಗೆ ಗೆಲುವು ಬಹಳ ಮುಖ್ಯವಾಗಿದೆ. ಚೆನ್ನೈ ಹಾಗೂ ಪಂಜಾಬ್ ನೀರಾಸ ಆರಂಣದ ನಂತರ ಇದೀಗ ಮಿಂಚಿನ ಪ್ರದರ್ಶನ ನೀಡಲು ಪಣತೊಟ್ಟಿವೆ.

ಪಂಜಾಬ್ ತಂಡ  7 ಪಂದ್ಯಗಳಿಂದ 3ರಲ್ಲಿ ಗೆದ್ದು 4ರಲ್ಲಿ ಸೋತು 6ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಚೆನ್ನೈ ತಂಡ 7ಪಂದ್ಯಗಳಿಂದ 2ರಲ್ಲಿ ಗೆದ್ದು 5ರಲ್ಲಿ ಸೋತು 4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯದಲ್ಲಿ ಎರಡೂ ತಂಡಗಳು ಅತ್ಯುತ್ತಮ ಹನ್ನೊಂದರ ಬಳಗವನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿವೆ.

ಇತ್ತೀಚೆಗೆ ಲೀಗ್‍ನ 8ನೇ ಪಂದ್ಯದಲ್ಲಿ ಪಂಜಾಬ್ ಚೆನ್ನೈ ತಂಡವನ್ನು ಸೋಲಿಸಿತ್ತು. ನಂತರ ಪಂಜಾಬ್ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯವನ್ನು ಗೆದ್ದಿದೆ.  ಚೆನ್ನೈ ತಂಡ ನಾಲ್ಕರಲ್ಲಿ  ಎರಡನ್ನು ಗೆದ್ದಿದೆ.

ಚೆನ್ನೈ, ಪಂಜಾಬ್ ವಿರುದ್ಧ ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿವೆ.ಕಳೆದ ಪಂದ್ಯದಲ್ಲಿ ಧೋನಿ ಕೊನೆಯ ಎಸೆತದಲ್ಲಿ ಗೆಲುವು ತಂದುಕೊಟ್ಟಿದ್ದರು.

ಪಂಜಾಬ್ ಹಾಗೂ ಸೂಪರ್ ಕಿಂಗ್ಸ್ ನಡುವಿನ ಪವರ್ ಪ್ಲೇ ಕುತೂಹಲಕಾರಿಯಾಗಿದೆ.  ಕಳೆದ ಮೂರು ಪಂದ್ಯಗಳಿಂದ ಚೆನ್ನೈ ತಂಡದ ಪವರ್ ಪ್ಲೇಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಇನ್ನು ಪಂಜಾಬ್ ತಂಡ ಪವರ್‍ಪ್ಲೇಯಲ್ಲಿ  ಸಾಕಷ್ಟು ವಿಕೆಟ್‍ಗಳನ್ನು ಕಳೆದುಕೊಂಡಿದೆ. ಪಂಜಾಬ್ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ

ಆಗುವ ಸಾಧ್ಯತೆಯಿದೆ. ಇಡೀ ತಂಡ ಲಿಯಾಮ್ ಲಿವೀಂಗ್‍ಸ್ಟೋನ್ ಅವರನ್ನು ನೆಚ್ಚಿಕೊಂಡಿದೆ.  ಚೆನ್ನೈ ತಂಡ ಆಡುವ ಹನ್ನೊಂದರ ಬಳಗದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮೊಯಿನ್ ಅಲಿಗೆ ಅವಕಾಶ ಕೊಡುವ ಸಾಧ್ಯತೆ ಇದೆ.

ಇನ್ನು ಪಂಜಾಬ್ ತಂಡದಲ್ಲಿ  ರಾಜಪಕ್ಸಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಚೆನ್ನೈ ತಂಡ:  ಋತುರಾಜ್  ಗಾಯಕ್ವಾಡ್, ರಾಬಿನ್ ಉತ್ತಪ್ಪ, ಅಂಬಾಟಿ ರಾಯ್ಡು, ಶಿವಂ ದುಬೆ, ಎಂ.ಎಸ್.ಧೋನಿ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ನಾಯಕ), ಡ್ವೇನ್ ಬ್ರಾವೋ, ಮಿಚೆಲ್ ಸ್ಟಾಂಟ್ನರ್,  ಡ್ವೇನ್ ಪ್ರಿಟೋರಿಯಸ್, ಮಹೇಶ್ ತೀಕ್ಷ್ಣ, ಮುಖೇಶ್ ಚೌಧರಿ. 

ಪಂಜಾಬ್ ತಂಡ: ಮಯಾಂಕ್ ಅಗರ್‍ವಾಲ್ (ನಾಯಕ), ಶಿಖರ್ ಧವನ್, 

ಜಾನಿ ಭೈರ್‍ಸ್ಟೊ,  ಲಿಯಾಮ್ ಲಿವಿಂಗ್‍ಸ್ಟೋನ್,  ಜಿತೇಶ್ ಶರ್ಮಾ(ವಿಕೆಟ್‍ಕೀಪರ್), ಶಾರುಖ್ ಖಾನ್,  ಒಡಿಯನ್ ಸ್ಮಿತ್, 

ಕಗಿಸೊ ರಬಾಡ, ರಾಹುಲ್ ಚಾಹರ್,  ವೈಭವ್ ಅರೋರಾ,  ಅರ್ಷದೀಪ್ ಸಾಗರ್.   

- Advertisement -

Latest Posts

Don't Miss