ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ತಂದೆ ಶಿವನಗೌಡರ್ ಕಣ್ಣೀರು ಹಾಕಿದ್ದಾರೆ.
ಜೈಲಿನಲ್ಲಿ ದರ್ಶನ್ ಫೋಟೋ ನೋಡಿ ನಮಗೆ ಶಾಕ್ ಆಗಿದೆ. ಈ ಕುರಿತು ತನಿಖೆ ಆಗಲಿ ಎಂದಿದ್ದಾರೆ. ನ್ಯಾಯಾಂಗ ಊಟ ಕೊಟ್ಟಿಲ್ಲ, ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಈ ಘಟನೆ ನೋಡಿ ನನಗೆ ಪರಮಾಶ್ವರ್ಯ ಆಗಿದೆ. ಜೈಲು ಜೈಲು ಆಗಿರ್ಬೇಕು. ಮತ್ತೊಂದು ಆಗಿರಬಾರ್ದು ಎಂದು ರೇಣುಕಾಸ್ವಾಮಿ ತಂದೆ ಹೇಳಿದ್ದಾರೆ.
ಜೈಲಿನಲ್ಲಿ ಕುರ್ಚಿ ಮೇಲೆ ಕುಳಿತು ಚಹ , ಸಿಗರೇಟ್ ಹಿಡಿದು ಕೂತಿದ್ದಾರೆ. ರೆಸಾರ್ಟ್ನಲ್ಲಿ ಕುಳಿತಂತೆ ಕುಳಿತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ. ಪೊಲೀಸರ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ. ನನ್ನ ಮಗನ ಕಳೆದುಕೊಂಡ ಸಂಕಟ ನನಗೆ ಗೊತ್ತಿದೆ. ನನ್ನ ಮಗನಿಗೆ ಶಾಂತಿ ಸಿಗಬೇಕು, ಅವರಿಗೆ ಶಿಕ್ಷೆಯಾಗಬೇಕು. ಸರ್ಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಬೇಕು. ಕೈಮುಗಿದು ಸರ್ಕಾರವನ್ನ ನಾನು ಕೇಳುತ್ತೇನೆ.
ಸರ್ಕಾರ, ಪೊಲೀಸರು, ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನನ್ನ ಮಗನ ಸಾವಿಗೆ ಈಡೀ ರಾಜ್ಯ ದುಃಖ ಪಟ್ಟಿದೆ. ನಮ್ಮ ಮನೆತನ ಕಣ್ಣಿರಲ್ಲಿ ಕೈತೊಳೆದಿದ್ದೇವೆ. ಇಂಥವರಿಗೆ ಮನುಷ್ಯತ್ವ ಇದಿಯಾ? ದಿನ ಬೆಳಕಾದ್ರೆ ಸೊಸೆ ಜೀವನದ ಬಗ್ಗೆ ಸಂಕಟ ಆಗುತ್ತದೆ. ದಯವಿಟ್ಟು ಅರ್ಥ ಮಾಡಿಕೊಂಡು ಸಮಗ್ರ ತನಿಖೆ ಆಗಬೇಕು ಎಂದು ಶಿವನಗೌಡರ್ ಒತ್ತಾಯಿಸಿದ್ದಾರೆ.