ಹುಬ್ಬಳ್ಳಿ: ವಾಣಿಜ್ಯ ನಗರಿ ಬೆಳೆಯುತ್ತಿರುವಂತೆಯೇ ಅಪರಾಧಗಳ ಸಂಖ್ಯೆಯೂ ಹೆಚ್ಚಾಗಿವೆ. ಅದರಲ್ಲಿಯೂ ಸೈಬರ್ ಅಪರಾಧಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಕೇವಲ 2 ಸಾವಿರ ಸಾಲ ಪಡೆದ ವ್ಯಕ್ತಿಯಿಂದ ಖದೀಮರು ಲಕ್ಷಾಂತರ ರೂಪಾಯಿ ಪೀಕಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಆನ್ ಲೈನ್ ಅಪ್ಲಿಕೇಷನ್ ಮೂಲಕ 2 ಸಾವಿರ ಸಾಲ ಪಡೆದಿದ್ದ ವ್ಯಕ್ತಿಯಿಂದ ಖದೀಮರು ಬರೋಬ್ಬರಿ 14 ಲಕ್ಷ ಪೀಕಿದ್ದಾರೆ. ಹೀಗೆ ವಂಚನೆಗೆ ಒಳಗಾದ ವ್ಯಕ್ತಿಯನ್ನು ಧಾರವಾಡದ ನಿಖಿಲ್ ಪಾಟೀಲ್ ಎಂದು ಗುರುತಿಸಲಾಗಿದೆ. ಆನ್ ಲೈನ್ ಲೋನ್ ಆಪ್ಲಿಕೇಷನ್ ಮೂಲಕ ನಿಖಿಲ್ 2 ಸಾವಿರ ಸಾಲ ಪಡೆದಿದ್ದ. ಈತ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 14 ಲಕ್ಷ ಕಳೆದುಕೊಂಡಿದ್ದಾನೆ.
ನಿಖಿಲ್ ಇನ್ಸ್ಟಂಟ್ ಲೋನ್ ಆಪ್ಲಿಕೇಷನ್ ಮೂಲಕ ಸಾಲ ಪಡೆದಿದ್ದ. ಅದನ್ನು ಮರುಪಾವತಿಸುವಂತೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಪ್ಗೆ ಲಿಂಕ್ ಕಳಿಸಿದ್ದ. ಮತ್ತೊಂದು ಅಪ್ಲಿಕೇಷನ್ ಅಳವಡಿಸಿಕೊಳ್ಳಲು ಸೂಚಿಸಿದ್ದ.
ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ್ ಮೇಲ್
ಈ ವೇಳೆ ಮೊಬೈಲ್ ನಲ್ಲಿರುವ ಕಾಂಟೆಕ್ಟ್ ನಂಬರ್ಸ್ ಹಾಗೂ ಫೋಟೊ ಗ್ಯಾಲರಿ ಎಕ್ಸಸ್ ಪಡೆದುಕೊಂಡಿದ್ದ ವ್ಯಕ್ತಿ, ನಂತರ ನಿಖಿಲ್ ಸ್ನೇಹಿತೆಯರ ಫೋಟೋಗಳನ್ನು ಅಶ್ಲೀಲ ಚಿತ್ರಗಳಿಗೆ ಅಂಟಿಸಿದ್ದ.
ಅಶ್ಲೀಲ ಚಿತ್ರಗಳನ್ನು ವಾಟ್ಸಪ್ಗೆ ಆರೋಪಿ ಕಳುಹಿಸಿದ್ದ. ಕೇಳಿದಷ್ಟು ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮರ್ಯಾದೆ ಕಳೆಯೋದಾಗಿ ಹೆದರಿಸಿದ್ದ. ಹೆದರಿದ ನಿಖಿಲ್ ಆನ್ಲೈನ್ ಮೂಲಕ ಹಂತ ಹಂತವಾಗಿ ಹಣ ವರ್ಗಾಯಿಸಿದ್ದ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Film story: ಒಂದು ಶಿಕಾರಿಯ ಕಥೆ ಚಿತ್ರದ ನಿರ್ದೇಶಕರ ಹೊಸ ಸಿನಿಮಾ ‘ವಸಂತಕಾಲದ ಹೂಗಳು’