Wednesday, December 11, 2024

Latest Posts

Film story: ಒಂದು ಶಿಕಾರಿಯ ಕಥೆ ಚಿತ್ರದ ನಿರ್ದೇಶಕರ ಹೊಸ ಸಿನಿಮಾ ‘ವಸಂತಕಾಲದ ಹೂಗಳು’

- Advertisement -

ಸಿನಿಮಾ ಸುದ್ದಿ: ಪ್ರಮೋದ್ ಶೆಟ್ಟಿ ನಟನೆಯ ಸಚಿನ್ ಶೆಟ್ಟಿ ರಚಿಸಿ, ನಿರ್ದೇಶಿಸಿದ ಒಂದು ಶಿಕಾರಿಯ ಕಥೆ ಚಿತ್ರ 2020 ರಲ್ಲಿ ಬಿಡುಗಡೆಯಾಗಿ ತನ್ನ ಸಸ್ಪೆನ್ಸ್ ಕಥಾನಿರೂಪಣೆಯಿಂದ ಜನರ ಮನಗೆದ್ದಿತ್ತು. ಈ ಚಿತ್ರದ ನಿರ್ದೇಶಕರ ಮುಂದಿನ ಚಿತ್ರ ಅನೌನ್ಸ್ ಆಗಿದ್ದು, ಸಂಪೂರ್ಣವಾಗಿ ಬೇರೆಯದೇ ಜಾನರ್ ಗೆ ಹೊರಳಿರುವ ನಿರ್ದೇಶಕ ಸಚಿನ್ ಶೆಟ್ಟಿ ಈ ಬಾರಿ ಟೀನೇಜ್ ಲವ್ ಸ್ಟೋರಿಯೊಂದನ್ನು ಕ್ಲಾಸ್ ಸ್ಟೈಲ್ ನಲ್ಲಿ ನಿರೂಪಿಸಲು ಹೊರಟಿದ್ದಾರೆ.

ಚಿತ್ರದ ನಾಯಕ ಸಚಿನ್ ರಾಠೋಡ್, ನಾಯಕಿ ರಾಧಾ ಭಗವತಿ ಮತ್ತು ನಿರ್ಮಾಪಕರೆಲ್ಲರೂ ಬಿಜಾಪುರದವರಾಗಿದ್ದು, ಅದೇ ಜಿಲ್ಲೆಯ ಕನಮಡಿ ಎಂಬ ಗ್ರಾಮದಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳು, ಆ ಭಾಗದ ಕಥೆಗಳು ಮುನ್ನೆಲೆಗೆ ಬರಬೇಕು ಎಂಬ ಈಗಿನ ಕೂಗಿಗೆ ಈ ಚಿತ್ರ ಒಂದು ಸಣ್ಣ ಉತ್ತರವಾಗಬಹುದು.

ಕರಾವಳಿಯ ನಿರ್ದೇಶಕರು ತಮ್ಮ ಕಥೆಯನ್ನು ಉತ್ತರ ಕರ್ನಾಟಕದ ಪರಿಸರದ ಹಿನ್ನೆಲೆಯ ಜೊತೆ ಹೇಳಲು ಹೊರಟಿರುವುದು ವಿಶೇಷವಾಗಿದೆ. ಇನ್ನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ನಿರತವಾಗಿರುವ ಚಿತ್ರತಂಡ ಇನ್ನು ಮುಂದೆ ಚಿತ್ರದ ಒಂದೊಂದೇ ವಿವರಗಳನ್ನು ಬಿಡುಗಡೆ ಮಾಡಲಿದೆ.

ಇನ್ನು ಈ ಚಿತ್ರಕ್ಕೆ ಅಶೋಕ್ ರಾಠೋಡ್ ಮತ್ತು ಸಿದ್ದು ರಾಸುರೆ  ಜಂಟಿಯಾಗಿ ಬಂಡವಾಳ ಹೂಡಿದ್ದು ಶಿವಶಂಕರ್ ನೂರಬಂಡಾ ಛಾಯಾಗ್ರಹಣವಿದೆ ,ಭರತ್ ಜನಾರ್ಧನ  ಸಂಗೀತಾ ಸಂಯೋಜನೆಯಿದ್ದು ಸಂಕಲನಕಾರರಾಗಿ ಬಿ ಎಸ್ ಕೆಂಪರಾಜು ಕಾರ್ಯ ನಿರ್ವಹಿಸಿದ್ದಾರೆ.

Jollywood Studio: ಬಿಡದಿ ಸಮೀಪ ಪ್ರಾರಂಭವಾದ ‘ಜಾಲಿವುಡ್ ಸ್ಟುಡಿಯೋಸ್:

Yathabava; ವರಮಹಾಲಕ್ಷ್ಮೀ ಹಬ್ಬದಂದು ಬರಲಿದೆ “ಯಥಾಭವ” ಚಿತ್ರದ ಟೀಸರ್ .

Sandalwood: ಆಗಸ್ಟ್ 23 ಕ್ಕೆ “ರಾನಿ ” ಚಿತ್ರದ ಹಿಂದಿ ಟೀಸರ್ ಬಿಡುಗಡೆ*

- Advertisement -

Latest Posts

Don't Miss