ಮಂಗಳೂರು: ನೋಂದಣಿದಾರರ ಬ್ಯಾಂಕ್ ಖಾತೆಯಿಂದ ಆಧಾರ್ ಎನೆಬಲ್ಡ್ ಪೇಮೆಂಟ್ ಸಿಸ್ಟಮ್ ಮೂಲಕ ಹಣ ಲಪಟಾಯಿಸುತ್ತಿದ್ದ ಬಿಹಾರ ಮೂಲದ ಮೂವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದೀಪಕ್ ಕುಮಾರ್ ಹೆಂಬ್ರಮ್, ವಿವೇಕ್ ಕುಮಾರ್ ಬಿಶ್ವಾಸ್, ಮದನ್ ಕುಮಾರ್ ಬಂಧಿತರು.
ಮಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯ ನೋಂದಣಿದಾರರ ಬ್ಯಾಂಕ್ ಖಾತೆಯ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಮಂಗಳೂರು ನಗರ ಸೈಬರ್ ಕ್ರೈಂ ಠಾಣೆಯಲ್ಲಿ ಹಲವು ದೂರು ಬಂದಿದ್ದು, ಒಟ್ಟು 10 ಪ್ರಕರಣಗಳನ್ನು ಮಂಗಳೂರು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಕಳೆದ 6 ತಿಂಗಳ ಅವಧಿಯಲ್ಲಿ ಜನರು ಆಸ್ತಿ ಹಾಗೂ ಇತರ ನೋಂದಣಿ ಮಾಡಿದ್ದರು. ವಿವಿಧ ಬ್ಯಾಂಕ್ ಖಾತೆಗಳಿಂದ AEPS ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಕಾವೇರಿ-2.0 ವೆಬ್ ಸೈಟ್ ಮೂವರು ಆರೋಪಿಗಳು ಹ್ಯಾಕ್ ಮಾಡಿದ್ದಾರೆ. ವೆಬ್ ಸೈಟ್ ನಿಂದ ದಾಖಲಾತಿಗಳನ್ನು ಅಕ್ರಮವಾಗಿ ಪಡೆದಿದ್ದರು.
ನೋಂದಣಿದಾರರ ಆಧಾರ್ ಸಂಖ್ಯೆ ಹೆಬ್ಬೆರಳ ಗುರುತು ಕೂಡ ಸಂಗ್ರಹಿಸಿದ್ದು, ಸ್ಕ್ಯಾನರ್ ಮೂಲಕ ಬೆರಳುಮುದ್ರೆ ಸ್ಕ್ಯಾನ್ ಮಾಡುತ್ತಿದ್ದರು. ಸದ್ಯ ಆರೋಪಿಗಳಿಗೆ ಸಂಬಂಧಿಸಿದ 10 ಬ್ಯಾಂಕ್ ಖಾತೆಗಳ ವಹಿವಾಟು ಸ್ಥಗಿತಗೊಳಿಸಲಾಗಿದೆ.
ಬ್ಯಾಂಕ್ ಖಾತೆಯಲ್ಲಿ ಒಟ್ಟು 3ಲಕ್ಷ 60ಸಾವಿರ 242 ರೂ. ಪತ್ತೆಯಾಗಿದ್ದು, ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ರಾಜ್ಯಕ್ಕೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ನೋಂದಣಿ ಪತ್ರಗಳ PDF ಪ್ರತಿ, ಇತರೆ ರಾಜ್ಯಗಳ 300ಕ್ಕೂ ಹೆಚ್ಚು ಪತ್ರಗಳ PDF ಪ್ರತಿ ಸಂಗ್ರಹಿಸಿಟ್ಟಿದ್ದು ಪತ್ತೆಯಾಗಿದೆ. ಬಂಧಿತ ಮೂವರು ಆರೋಪಿಗಳನ್ನು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ
ಚುನಾವಣೆ ಮೊದಲು ರಮೇಶ್ ಜಾರಕಿಹೊಳಿ ಡಿಕೆಶಿ ಕಾಲು ಹಿಡಿಯಲು ಬಂದಿದ್ದರು. ರವಿ ಗಣಿಗ..!
ಕನ್ನಡ ಅಧ್ಯಯನದಲ್ಲಿ 9 ಚಿನ್ನದ ಪದಕ: ಚಿನ್ನದ ನಗೆ ಬೀರಿದ ವಿದ್ಯಾರ್ಥಿಗಳು.!
ಕರ್ನಾಟಕದಲ್ಲಿ ಏಕಕಾಲಕ್ಕೆ 75 ಕಡೆ ಲೋಕಾಯುಕ್ತ ದಾಳಿ: ಯಾವೆಲ್ಲಾ ಇಲಾಖೆ ಅಧಿಕಾರಿಗಳ ಮೇಲೆ ರೇಡ್? ಇಲ್ಲಿದೆ ಪಟ್ಟಿ