Sunday, April 13, 2025

Latest Posts

ಸೆ.30 ಕ್ಕೆ ಬರಲಿರುವ ಶಾಹೀನ್ ಚಂಡಮಾರುತ ..!

- Advertisement -

www.karnatakatv.net : ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತ ಇನ್ನೇರಡು ದಿನಗಳಲ್ಲಿ  ಶಾಹೀನ್ ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿದೆ.

ಹೌದು, ಒಡಿಶಾ ಮತ್ತು ಆಂಧ್ರ ಪ್ರದೇಶಕ್ಕೆ ಬಂದ ಗುಲಾಬ್ ಚಂಡಮಾರುತ ಸದ್ಯ ದುರ್ಬಲಗೊಂಡ ಬೆನ್ನಲ್ಲೇ ಸೆ.30 ರಂದು ದೇಶದ ಕರಾವಳಿ ಪ್ರದೇಶಕ್ಕೆ ಮತ್ತೊಂದು ಚಂಡಮಾರುತ ಬಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಹಾಗೇ ಈ ಚಂಡಮಾರುತಕ್ಕೆ ಕತಾರ್, ‘ ಶಾಹೀನ್’ ಎಂದು ಹೆಸರಿಸಲಾಗಿದೆ.  

ಇದೀಗ ಒಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ಬಿಸಿದ ಗುಲಾಬ್ ಚಂಡಮಾರುತ, ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ತೀರಕ್ಕೆ ಹೋಗುತ್ತಿದ್ದಂತೆ ದುರ್ಬಲಗೊಳ್ಳಲಿದೆ. ತದನಂತರ ಸೆ.30 ಕ್ಕೆ ಮತ್ತೆ ಪ್ರಬಲ ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ ಹಾಗೂ ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಸೂಚಿಸಿದ್ದಾರೆ.

- Advertisement -

Latest Posts

Don't Miss