Friday, July 4, 2025

Latest Posts

ಕೋವಿಡ್ ಸೋಂಕಿತ ಮಹಿಳೆಯಲ್ಲಿ ಪತ್ತೆಯಾದ ಸೈಟೋಮೆಗಲೋ ವೈರಸ್

- Advertisement -

www.karnatakatv.net : ಕಳೆದ‌ ಎರಡು ವರ್ಷದಿಂದ ಮಹಾಮಾರಿ ಕರೋನಾದಿಂದ ದೇಶ ಹಾಗೂ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ.‌ ಎರಡನೇ ಅಲೆ ಬಳಿಕ ಇದೀಗ ಮೂರನೇ ಅಲೆ ಎದುರಾಗುತ್ತಿದ್ದು, ಕರೋನಾ ರೂಪಾಂತರಿ ಡೆಲ್ಟಾ ವೈರಸ್ ಭಯದ ವಾತಾವರಣ ನಿರ್ಮಾಣ‌ ಮಾಡಿರೋ ಬೆನ್ನಲ್ಲೇ ಇದೀಗ ಕರೋನಾ ಸೋಂಕಿತ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದ್ದ ಸೈಟೋಮೆಗಲೋ ವೈರಸ್ ಗೆ ಆ ವೈದ್ಯರ ತಂಡ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಏನದು ವೈರಸ್ ಅಂತಾ ಹೇಳ್ತೀವಿ ನೋಡಿ…

ಹೌದು ಮಹಾಮಾರಿ ಕರೋನಾ ಒಂದನೇ, ಎರಡನೇ ಅಲೆ ಬೆನ್ನಲ್ಲೇ ಇದೀಗ ಮೂರನೇ ಅಲೆಯ ಭೀತಿ ಎದುರಾಗಿದೆ. ಆದ್ರೆ ಈ ಮೂರನೇ ಅಲೆಯ ಭೀತಿಯ ನಡುವೆಯೇ ಇದೀಗ ಸೈಟೋಮೆಗಲೋ ಎಂಬ ವೈರಸ್ ಕೋವಿಡ್ ಸೋಂಕಿತ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದ್ದು, ಆ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಿ ಮಹಿಳೆಯ ಪ್ರಾಣ ಉಳಿಸುವಲ್ಲಿ ಹುಬ್ಬಳ್ಳಿಯ ವೈದ್ಯರ ತಂಡ ಯಶಸ್ವಿಯಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ 39 ವಯಸ್ಸಿನ ಮಹಿಳೆಯೊಬ್ಬರು ಕೋವಿಡ್ ಸೋಂಕು ತಗುಲಿದ  ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕೆಎಲ್ ಇ ಶುಚಿರಾಯು ಆಸ್ಪತ್ರೆಗೆ ಜೂನ್ ತಿಂಗಳಲ್ಲಿ ದಾಖಲಾಗಿದ್ದರು. ಹೀಗೆ ದಾಖಲಾದ ಮಹಿಳೆಯಲ್ಲಿ ನ್ಯೂಮೋನಿಯಾ, ರಕ್ತಸ್ರಾವ ಕಂಡುಬರಲಾರಂಭಿಸಿತ್ತು.‌ ಈ ವೇಳೆ ಚಿಕಿತ್ಸೆ ನಡೆಸುತ್ತಿದ್ದ ಡಾ.ನವೀನಕುಮಾರ ಹೊಸಳ್ಳಿ ಹಾಗೂ ವೈದ್ಯರ ತಂಡಕ್ಕೆ ಆ ಮಹಿಳೆಯಲ್ಲಿ ಕರೋನಾ ಸೋಂಕು ಗುಣವಾದರೂ ಸೈಟೋಮೆಗಲೋ ಎಂಬ ವೈರಸ್ ತಗುಲಿರುವುದು ಪತ್ತೆಯಾಗಿರೋದು ಗೊತ್ತಾಗಿದೆ. ಕರೋನಾ‌ ನಂತರ ರಾಜ್ಯದಲ್ಲೇ ಇದೇ ಮೊದಲ ಬಾರಿ ರೋಗಿಯಲ್ಲಿ ಇಂತಹ ವೈರಸ್ ಪತ್ತೆಯಾಗಿದ್ದು, ಈ ವೈರಸ್ ಗೆ ಬರೋಬ್ಬರಿ 49 ದಿನಗಳ ಕಾಲ ಚಿಕಿತ್ಸೆ ನೀಡುವ ಮೂಲಕ ರೋಗಿಯ ಪ್ರಾಣ ಉಳಿಸುವಲ್ಲಿ ಶುಚಿರಾಯು ವೈದ್ಯರು ಯಶಸ್ವಿಯಾಗಿದ್ದಾರೆ.

ಪ್ರಮುಖವಾಗಿ ಈ ಸೋಂಕು ಕೋವಿಡ್ ಸೋಂಕು ತಗುಲಿರುವ ಅತ್ಯಂತ ವಿರಳ ವ್ಯಕ್ತಿಗಳಲ್ಲಿ ತಗುಲಲಿದ್ದು, ದೆಹಲಿ ಬಿಟ್ಟರೆ ರಾಜ್ಯದಲ್ಲಿ‌ಇದೇ ಮೊದಲ ಪ್ರಕರಣವಾಗಿದೆ. ಅಲ್ಲದೇ ಈ ವೈರಸ್ ಪ್ರಮುಖವಾಗಿ ಮೆದುಳು, ಹೃದಯ, ಶ್ವಾಸಕೋಶ ಹಾಗೂ ಕರುಳಿಗೆ ತಾಗುತ್ತದೆ. ಅಲ್ದೆ ಬ್ಲ್ಯಾಕ್ ಫಂಗಸ್ ಒಂದೆಡೆಯಾದರೆ, ಈ ರೀತಿಯ ಸೋಂಕು ಮತ್ತೊಂದೆಡೆ ಕಾಣಿಸಿಕೊಳ್ಳಲಾರಂಭಿಸಿರುವುದು ವೈದ್ಯಕೀಯ ಲೋಕದಲ್ಲಿ ಮತ್ತಷ್ಟು ಆತಂಕ ಸೃಷ್ಠಿಮಾಡಿದೆ.‌ ಹೀಗಿರುವಾಗ ಈ ಮಹಿಳೆಯಲ್ಲಿ ಈ ವೈರಸ್ ದೃಢಪಟ್ಟ ಬೆನ್ನಲ್ಲೇ ಡಾ.ನವೀನಕುಮಾರ ಹೊಸಳ್ಳಿ ಹಾಗೂ ತಂಡ ಇದೀಗ ಮಹಿಳೆಗೆ ಸಂಪೂರ್ಣ ಚಿಕಿತ್ಸೆ ನೀಡುವ ಮೂಲಕ ಯಶಸ್ವಿಯಾಗಿದ್ದು, ವೈದ್ಯರ ಈ ಕಾರ್ಯಕ್ಕೆ ಮಹಿಳೆಯ ಕುಟುಂಬಸ್ಥರು ಹಾಗೂ ಸಾರ್ವಜನಿಕ ವಲಯದೆಲ್ಲೆಡೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಒಟ್ಟಾರೆ ಮಹಾಮಾರಿ ಕರೋನಾ ಮೂರನೇ ಅಲೆಯ ಭೀತಿಯ ಬೆನ್ನಲ್ಲೇ ಕರೋನಾ ಸೋಂಕಿತರಲ್ಲಿ ಇಂತಹ ಸೈಟೋಮೆಗಲೋ ಎಂಬ ಮತ್ತೊಂದು ವೈರಸ್ ಪತ್ತೆಯಾಗಿರೋದು ಒಂದೆಡೆ ಆತಂಕಕ್ಕೀಡು ಮಾಡಿದ್ರೆ, ಈ ವೈರಸ್ ಗೆ ಸಮರ್ಪಕ ಚಿಕಿತ್ಸೆ ನೀಡಿ ಮಹಿಳೆಯ ಪ್ರಾಣ ಉಳಿಸಿರುವ ಈ ವೈದ್ಯರ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ..

- Advertisement -

Latest Posts

Don't Miss