Saturday, July 27, 2024

Latest Posts

ಕ್ರಾಂತಿ ಡಬ್ಬಿಂಗ್‌ಗೆ ಡಿ-ಬಾಸ್ ಎಂಟ್ರಿ..! ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..!

- Advertisement -

ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..!

ಕನ್ನಡ ಚಿತ್ರರಂಗದಲ್ಲಿ ಈ ವರ್ಷದಲ್ಲಿ ರಿಲೀಸಾಗೋಕೆ ಸಜ್ಜಾಗಿರೋ ಬಿಗ್‌ಬಜೆಟ್ ಹಾಗೂ ಬಿಗ್ ಸ್ಟಾರ್‌ಗಳ ಸಿನಿಮಾ ಪಟ್ಟಿಯಲ್ಲಿ ಕ್ರಾಂತಿ ಸಿನಿಮಾ ಕೂಡ ಒಂದು. ಇತ್ತೀಚಿಗಷ್ಟೇ ಪೋಲ್ಯಾಂಡ್‌ನಿAದ ಶೂಟಿಂಗ್ ಮುಗಿಸಿ ಬಂದಿರೋ ಕ್ರಾಂತಿ ಚಿತ್ರತಂಡ ಬಂದಾಗಿನಿAದಲೂ ಒಂದು ಅಪ್ಡೇಟ್ ಸಹ ಕೊಟ್ಟಿಲ್ಲ ಅಂತ ಅಭಿಮಾನಿಗಳು ಬೇಸರದಲ್ಲಿದ್ರು. ಆದ್ರೆ ಈಗ ಕೊಟ್ಟಿದ್ದಾರೆ ನೋಡಿ ಅಸಲಿ ಬರೇಕಿಂಗ್ ನ್ಯೂಸ್..

ಹೌದು, ಕ್ರಾಂತಿ ಚಿತ್ರದಲ್ಲಿ ಅಕ್ಷರ ಕ್ರಾಂತಿಯಿರುತ್ತೆ, ವಿ.ಹರಿಕೃಷ್ಣ ಡೈರೆಕ್ಷನ್ ಹೇಳ್ತಿರೋ ಈ ಚಿತ್ರದಲ್ಲಿ ನಟ ದರ್ಶನ್ ಜೊತೆಗೆ ಬುಲ್ ಬುಲ್ ಬ್ಯೂಟಿ ರಚಿತಾ ರಾಮ್ ನಟಿಸ್ತಿದ್ದು, ಈ ಜೋಡಿ ಮತ್ತೊಮ್ಮೆ ಒಟ್ಟಿಗೆ ನಟಿಸ್ತಿರೋ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಅದರಂತೆ ವಿ.ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.

ಕ್ರಾಂತಿ ಚಿತ್ರದ ಬಗ್ಗೆ ಚಿತ್ರತಂಡ ಕೊಟ್ಟಿರೋ ಹೊಸ ಸುದ್ದಿ ಏನಪ್ಪಾ ಅಂದ್ರೆ ನಟ ದರ್ಶನ್ ಡಬ್ಬಿಂಗ್ ಕಾರ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಡಿ-ಫ್ಯಾನ್ಸ್ ಗ್ರೂಪ್ಸ್ನಲ್ಲಿ ಈಗಾಗ್ಲೇ ಡಿ-ಬಾಸ್ ಕ್ರಾಂತಿ ಚಿತ್ರದ ತಮ್ಮ ಪೋರ್ಷನ್‌ನ ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿರೋ ಕೆಲ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಷ್ಟೇ ಅಲ್ಲ ಡಬ್ಬಿಂಗ್ ಮಾಡ್ತಿರೋ ವೇಳೆ ಫೋಟೋಗೆ ದರ್ಶನ್ ಪೋಸ್ ಕೂಡ ಕೊಟ್ಟಿದ್ದಾರೆ. ಅಭಿಮಾನಿಗಳಿಗೆ ಈ ಮೂಲಕ ಕ್ರಾಂತಿ ಚಿತ್ರದ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ ಚಾಲೆಂಜಿAಗ್ ಸ್ಟಾರ್.

ಮೂಲಗಳ ಮಾಹಿತಿ ಪ್ರಕಾರ ಕ್ರಾಂತಿಯ ಇನ್ನೊಂದು ಸಾಂಗ್ ಚಿತ್ರೀಕರಣ ಹಾಗೂ ಕೆಲ ಸಣ್ಣ ಪುಟ್ಟ ಪ್ಯಾಚ್ ವರ್ಕ್ ಮಾತ್ರ ಬಾಕಿಯಿದೆಯಂತೆ. ಒಟ್ನಲ್ಲಿ ಪ್ರತಿಯೊಬ್ಬ ದರ್ಶನ್ ಅಭಿಮಾನಿ ರಾಜ್ಯದ ಮೂಲೆ ಮೂಲೆಗಳಲ್ಲೂ ಕ್ರಾಂತಿ ಪ್ರಚಾರವನ್ನ ಅದ್ಧೂರಿಯಾಗಿ ಮಾಡ್ತಿದ್ದಾರೆ. ಅಲ್ಲದೇ ರೀಸೆಂಟಾಗಿ ದರ್ಶನ್ ಸ್ನೇಹಿತರಾದ ನಟ ಧರ್ಮಕೀರ್ತಿ ರಾಜ್, ಸೇರಿದಂತೆ ಹಲವರು ಬೈಕ್ ರ‍್ಯಾಲಿ ಮಾಡೋ ಮೂಲಕ ಕ್ರಾಂತಿ ಪ್ರಚಾರ ಮಾಡಿದ್ರು. ಸದ್ಯ ಎಲ್ರೂ ಕ್ರಾಂತಿ ಸಿನಿಮಾ ಯಾವಾಗ ಬೆಳ್ಳಿ ಪರದೆ ಮೇಲೆ ಬರುತ್ತೆ ಅಂತ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ.

- Advertisement -

Latest Posts

Don't Miss