“ಕ್ರಾಂತಿ”ಮೇಲಿನ ನಿರೀಕ್ಷೆ ಹೆಚ್ಚಿಸಿದ ನಟ ದರ್ಶನ್..!
ಬಾಕ್ಸಾಫೀಸ್ ಸುಲ್ತಾನ್, ಚಾಲೆಂಜಿAಗ್ ಸ್ಟಾರ್ ದರ್ಶನ್ ಪೋಲ್ಯಾಂಡ್‌ನಲ್ಲಿ ಶೂಟಿಂಗ್ ಮುಗಿಸಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ವಿದೇಶದಲ್ಲಿ ಕ್ರಾಂತಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಯಾವಾಗ ಬರ್ತಾರೆ ಅಂತ ನೆಚ್ಚಿನ ನಟನನನ್ ನೋಡಲು ಎದುರು ನೋಡ್ತಿದ್ದ ಅಭಿಮಾನಿಗಳಿಗೀಗ ಡಬಲ್ ಖುಷಿ ಕೊಟ್ಟಿದೆ. ಹೌದು, ಕ್ರಾಂತಿ ಸಿನಿಮಾದ ಅಪ್ಡೇಟ್ಸ್ಗಾಗಿ ಡಿ-ಭಕ್ತಗಣ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ.
ಅದ್ರಲ್ಲೂಕ್ರಾಂತಿ ಚಿತ್ರದ ಟ್ರೆöÊಲರ್, ಸಾಂಗ್ಸ್, ಹಾಗೂ ರಿಲೀಸ್ ಡೇಟ್ ಯಾವಾಗ ಅನ್ನೋ ಕುತೂಹಲವೂ ಅಭಿಮಾನಿಗಳಲ್ಲಿದೆ. ಇದಕ್ಕೆಲ್ಲಾ ಚಿತ್ರತಂಡವೇ ಅಧಿಕೃತವಾಗಿ ಅಭಿಮಾನಿಗಳಿಗೆ ಉತ್ತರ ನೀಡಬೇಕಿದೆ. ಹೀಗಾಗಿ ವಿದೇಶದಿಂದ ಇಡೀ ಕ್ರಾಂತಿ ಚಿತ್ರತಂಡ ಬೆಂಗಳೂರಿಗೆ ಬರೋದನ್ನ ಕಾಯ್ತಿದ್ರು ಡಿ-ಫ್ಯಾನ್ಸ್. ಫೈನಲೀ ದಿ ವೇಟ್ ಈಸ್ ಓವರ್ ಅನ್ನುವಂತೆ ಇಡೀ ಕ್ರಾಂತಿ ಚಿತ್ರತಂಡ ಸಿಲಿಕಾನ್ ಸಿಟಿಗೆ ಕಳೆದ ಶನಿವಾರವೇ ಬಂದಿದೆ. ವಿಶೇಷ ಅಂದ್ರೆ ಅಭಿಮಾನಿಗಳನ್ನ ಭೇಟಿ ಮಾಡಿರೋ ಚಾಲೆಂಜಿAಗ್ ಸ್ಟಾರ್ ದರ್ಶನ್ ವಿಶೇಷ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕ್ರಾಂತಿ ಚಿತ್ರದ ಪೋಸ್ಟರ್‌ನ ಶೇರ್ ಮಾಡೋ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲಿ ಅಲ್ಲದೇ, ಸೋಶಿಯಲ್ ಮೀಡಿಯಾದಲ್ಲೂ ಕೂಡ ದೊಡ್ಡ ಮಟ್ಟಿಗೆ ಪ್ರಚಾರ ನಡೆಸ್ತಿದ್ದಾರೆ. ದರ್ಶನ್ ಟ್ರೆಂಡೀ ಹೇರ್ ಸ್ಟೆöÊಲ್‌ಗೆ ಫಿದಾ ಆಗಿರೋ ಫ್ಯಾನ್ಸ್, ಇದೀಗ ಡಿಬಾಸ್‌ರ ಹೊಸ ಹೇರ್ ಸ್ಟೆöÊಲ್‌ನ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡ್ತಿದ್ದಾರೆ.
ಈಗಾಗಲೇ ಚಕ್ರವ್ಯೂಹ, ತಾರಕ್, ರಾಬರ್ಟ್ ಸೇರಿದಂತೆ ಹಲವು ಚಿತ್ರಗಳಲ್ಲಿ ಡಿಬಾಸ್ ದರ್ಶನ್ ವಿಭಿನ್ನ ಹೇರ್ ಸ್ಟೆöÊಲ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಇದೀಗ ಕ್ರಾಂತಿ ಚಿತ್ರದಲ್ಲೂ ಬೇರೆ ಗೆಟಪ್‌ನಲ್ಲಿ ಇರಲಿದ್ದಾರೆ ಎಂಬ ಸುಳಿವು ನೀಡಿರೋ ದರ್ಶನ್, ಕ್ರಾಂತಿ ಚಿತ್ರದ ಮೇಲಿನ ನಿರೀಕ್ಷೆ ಅಭಿಮಾನಿಗಳಿಗೆ ಮತ್ತಷ್ಟು ಹೆಚ್ಚಿಸಿದ್ದಾರೆ. ವಿ.ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು, ರಚಿತಾ ರಾಮ್ ಸೇರಿದಂತೆ ದೊಡ್ಡ ತಾರಾಗಣವೇ ಕ್ರಾಂತಿ ಚಿತ್ರದಲ್ಲಿದೆ. ವಿ.ಹರಿಕೃಷ್ಣ ಡೈರೆಕ್ಷನ್ ಹೇಳ್ತಿರೋ ಈ ಚಿತ್ರಕ್ಕೆ ಶೈಲಜಾ ನಾಗ್, ಬಿ,ಸುರೇಶ್ ನಿರ್ಮಾಣ ಮಾಡ್ತಿದ್ದಾರೆ. ಇನ್ನೂ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ರಾಜ್ಯೋತ್ಸವಕ್ಕೆ ಕ್ರಾಂತಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡ್ತಿದೆಯಂತೆ.