Monday, October 6, 2025

Latest Posts

ಅಭಿಮಾನಿಯ ಉತ್ತರಕ್ರಿಯೆಗೆ ಹೋಗ್ತಾರಾ ಡಿ-ಬಾಸ್…?

- Advertisement -

www.karnatakatv.net :ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬರು ಕೆಲದಿನಗಳ ಹಿಂದಷ್ಟೆ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ  ದರ್ಶನ್ ಅಭಿಮಾನಿಗಳ ಸಂಘ ಉತ್ತರಕ್ರಿಯಾ ಕಾರ್ಯಕ್ರಮಕ್ಕೆ  ಬರುವಂತೆ ಡಿಬಾಸ್ ಗೆ  ಮನವಿ ಮಾಡಿದೆ.

ಹೌದು, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ರಾಂಪುರ ನಿವಾಸಿ ಪ್ರಜ್ವಲ್(30) ಆಗಸ್ಟ್ 31 ರಂದು ಬೆಂಗಳೂರು ಏರ್ಪೋರ್ಟ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ  ಪ್ರಜ್ವಲ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪ್ಪಟ ಅಭಿಮಾನಿಯಾಗಿದ್ರು. ಪ್ರಜ್ವಲ್ ತಮ್ಮ ಅಭಿಮಾನದ ಸಂಕೇತವಾಗಿ ನಟ ದರ್ಶನ್ ಫೋಟೋವನ್ನು ತಮ್ಮ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ರು. ಇನ್ನು ಅಂತ್ಯಕ್ರಿಯೆಗೆ ನಟ ದರ್ಶನ್ ರನ್ನು ಹಾಜರಾಗುವಂತೆ ಕೇಳಿಕೊಳ್ಳಲು ಮೃತನ ಸ್ನೇಹಿತರು ಮತ್ತು  ಕುಟುಂಬಸ್ಥರು ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ. ಆದರೆ ಸೆ.10ರಂದು ಪ್ರಜ್ವಲ್ ಉತ್ತರಕ್ರಿಯಾದಿ ಕಾರ್ಯಗಳು ನೆರವೇರಲಿದ್ದು, ಆ ಕಾರ್ಯಕ್ರಮಕ್ಕಾದ್ರೂ ನಟ ದರ್ಶನ್ ಬರಬೇಕು ಅಂತ ದರ್ಶನ್ ಅಭಿಮಾನಿಗಳ ಸಂಘ ಕರ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ. ಹೀಗಾಗಿ ಅಭಿಮಾನಿಗಳೇ ದೇವ್ರು ಅಂತ ನಂಬಿರೋ ದರ್ಶನ್ ಪ್ರಜ್ವಲ್ ಉತ್ತರಕ್ರಿಯೆಗೆ ಆಗಮಿಸೋ ವಿಶ್ವಾಸ ನಮಗಿದೆ ಅಂತ ಸಂಘ ತಿಳಿಸಿದೆ.

ಇನ್ನು ಮೃತ ಪ್ರಜ್ವಲ್ ಮನೆಯ ಆಧಾರ ಸ್ತಂಭವಾಗಿದ್ರು. ಕಳೆದ  ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದು, ಆತನ ಪತ್ನಿ ಇದೀಗ 5 ತಿಂಗಳ ಗರ್ಭಿಣಿಯಾಗಿದ್ದಾರೆ ಎನ್ನಲಾಗಿದೆ.

- Advertisement -

Latest Posts

Don't Miss