‘ನನಗೆ ಒಬ್ಬಳೇ ಹೆಂಡತಿ, ನನಗೆ ಒಂದೇ ಸಂಸಾರ’

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಶುರುವಾದಾಗಿನಿಂದ ಹಲವು ಶಾಸಕರು ಸಿಎಂ ಯಡಿಯೂರಪ್ಪ ಜೊತೆ ಬ್ಯಾಕ್‌ ಟೂ ಬ್ಯಾಕ್‌ ಸಭೆ ನಡೆಸುತ್ತಲೇ ಇದ್ದಾರೆ. ಅಲ್ಲದೇ ಕಾಂಗ್ರೆಸ್‌ನಿಂದ ಬಿಜೆಪಿಗೆ ಜಂಪ್ ಆಗಿದ್ದ ಹಲವು ಶಾಸಕರು ಕೋರ್ಟ್ ಮೊರೆ ಕೂಡ ಹೋಗಿದ್ದರು. ಇದೀಗ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯುತ್ತಿರುವುದನ್ನ ನೋಡಿ, ಸಚಿವ ಸುಧಾಕರ್ ಯಾವ ಶಾಸಕರು ಏಕಪತ್ನಿ ವೃತಸ್ಥರಲ್ಲ, ಎಲ್ಲಾ ಶಾಸಕರ ಬಗ್ಗೆ ತನಿಖೆ ನಡೆಯಬೇಕು ಅಂತಾ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು ಏಕಪತ್ನಿ ವೃತಸ್ಥ, ನನಗೆ ಒಬ್ಬಳೇ ಹೆಂಡತಿ, ನನಗೆ ಒಂದೇ ಸಂಸಾರ ಅಂತಾ ಹೇಳಿದ್ದಾರೆ. ಅಲ್ಲದೇ, ಸುಧಾಕರ್ ಮಾತಿನಂತೆ ತನಿಖೆ ನಡೆಯಲಿ ಬಿಡಿ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯಲೇಬೇಕು ಅಂತಾ ಡಿಕೆಶಿ ತಿರುಗೇಟು ನೀಡಿದ್ದಾರೆ.
ಇನ್ನು ಸಿಡಿ ಪ್ರಕರಣ ಶುರುವಾದಾಗಿನಿಂದ ಡಿಕೆಶಿ ಸೇರಿ ಕಾಂಗ್ರೆಸ್ ನಾಯಕರು ಹೇಗಾದರೂ ಮಾಡಿ ಜಾಾರಕಿಹೊಳಿ ರಾಜೀನಾಮೆ ಕೊಡಿಸಬೇಕು ಅಂತಾ ನಿರ್ಧರಿಸಿ, ಸಚಿವ ಸ್ಥಾನದಿಂದ ಜಾರಕಿಹೊಳಿಯನ್ನು ಕೆಳಗೆ ಇಳಿಸಿದ್ದರು. ಇದೀಗ ವಿಧಾನ ಸಭೆಯಲ್ಲಿ ಆ ವಿಷಯವನ್ನು ಚರ್ಚೆ ಮಾಡಿ, ಸಂತೃಸ್ತೆ ಪರ ಕಾಂಗ್ರೆಸ್ ನಾಯಕರು ಬ್ಯಾಟ್ ಬೀಸುತ್ತಿದ್ದಾರೆ.

ಗೃಹ ಇಲಾಖೆ, ಮೊದಲು ಸೈಬರ್ ಕ್ರೈಂ ವಿಭಾಗದ ಮೂಲಕ ‘ಸಿಡಿ’ ಅಸಲಿಯೋ, ನಕಲಿಯೋ, ಮಾರ್ಪ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಪಡೆಯಲಿ. ಕರ್ನಾಟಕ ಪೊಲೀಸ್ ಇಲಾಖೆಗೆ ದೇಶದಲ್ಲೇ ಗೌರವವಿದೆ, ಏಕಪಕ್ಷೀಯ ತನಿಖೆಗೆ ಒತ್ತಡ ಹೇರಿ ಅದನ್ನು ಕೆಡಿಸಬೇಡಿ. ಸಂತ್ರಸ್ತ ಯುವತಿಯ ಆರೋಪದ ದೃಷ್ಟಿಕೋನದಿಂದಲೂ ತನಿಖೆ ನಡೆಸಬೇಕು ಎಂದು ಡಿಕೆಶಿ ಈ ಮೊದಲು ಹೇಳಿದ್ದರು.

ರಮೇಶ್ ಜಾರಕಿಹೊಳಿ ಅವರ ಮನೆ ರೇಡ್ ಮಾಡಿದ್ದಾರಾ? ಅವರ ಮತ್ತು ಸಂತ್ರಸ್ತ ಯುವತಿಯ ಮಧ್ಯೆ ಯಾವ ರೀತಿಯ ಸಂಬಂಧ ಇತ್ತು ಎಂಬ ಬಗ್ಗೆ ತನಿಖೆ ನಡೆದಿದೆಯಾ? ಸಿಡಿ ಹೆಸರಿನಲ್ಲಿ ಕೋಟಿಗಟ್ಟಲೆ ವ್ಯವಹಾರ ನಡೆದಿದೆ, ಬ್ಲಾಕ್ ಮೇಲ್ ಮಾಡಲಾಗಿದೆ ಎಂಬ ಆರೋಪಗಳಿವೆ. ಹಾಗಾಗಿ ಈ ಪ್ರಕರಣವನ್ನು ಐಟಿ, ಇಡಿ, ಸಿಬಿಐ ತನಿಖೆಗೆ ವಹಿಸಬೇಕಲ್ಲವೇ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

About The Author