Wednesday, July 2, 2025

Latest Posts

D K SHIVAKUMAR : ನಾನು ಪಾದಯಾತ್ರೆ ಮಾಡಲ್ಲ, ನೀರಿಗಾಗಿ ನಡಿಯುತ್ತೇನೆ..!

- Advertisement -

ಪಾದಯಾತ್ರೆಗೆ ನಿಗದಿಯಾಗಿರುವ ದಿನಾಂಕವನ್ನು ಬದಲಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Sivakumar)ಹೇಳಿದ್ದಾರೆ. ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಪಾದಯಾತ್ರೆ ಮಾಡುತ್ತೇವೆ. ಇವರಿಗೆ ನಾವು ಮಾತ್ರ ಓಡಾಡುವುದು ಕಾಣಿಸುತ್ತಾ, ಬೇರೆ ಯಾರೂ ಓಡಾಡೋದು ಇವರಿಗೆ ಕಾಣುವುದಿಲ್ಲವೆಂದು ಸರ್ಕಾರಕ್ಕೆ ಟಾಂಗ್ ನೀಡಿದ್ದು, ಇದನ್ನು ಯಾಕೆ ಪಾದಯಾತ್ರೆ ಎಂದು ಕರೆಯುತ್ತೀರಾ?, ನಾವು ನೀರಿಗಾಗಿ ನಡೆಯುತ್ತಿದ್ದೇವೆ, ಕಾವೇರಿ ತಾಯಿಯ ನೀರನ್ನು ಬೆಂಗಳೂರಿಗೆ ತರಲು ನಡೆಯುತ್ತಿದ್ದೇವೆ, ನೀರನ್ನು ತರಬೇಕು ಅನ್ನೋದು ನಮ್ಮ ಉದ್ದೇಶ.

ಆ ನೀರನ್ನು ಇವರಿಗೂ ಸಹ ಕುಡಿಸುತ್ತೇವೆ., ನಾನು ಮೆರವಣಿಗೆ ಮತ್ತು ಧರಣಿಯನ್ನು ಮಾಡುವುದಿಲ್ಲ ನೀರಿಗಾಗಿ ನಡೆಯುತ್ತೇನೆ ಎಂದು ಹೇಳಿದ್ದು, ವೀಕೆಂಡ್ ಕರ್ಫ್ಯೂ ನೋಟಿಸ್ ನಮಗೂ ಬಂದಿದೆ ಅದನ್ನು ನಾವು ಗಮನಿಸಿದ್ದೇವೆ. ಬೆಂಗಳೂರಿನ ನಡಿಗೆ ಉಸ್ತುವಾರಿ ಮಾಜಿ ಸಚಿವ ರಾಮಲಿಂಗಾರೆಡ್ಡಿ (voice Minister Ramalingareddy)ಅವರು ತೆಗೆದುಕೊಂಡಿದ್ದಾರೆ, ನಾನು ಅವರ ಜೊತೆ ಕೂತು ಮಾತನಾಡುತ್ತೇನೆ ಎಂದು ಹೇಳಿದರು. ಬಿಜೆಪಿಯವರಿಗೆ ಪಕ್ಷ ಮುಖ್ಯವೆ ಹೊರತು ಜನರ ಪ್ರಾಣ ಅಲ್ಲ, ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಅವರು ದೊಡ್ಡ ಸಮಾವೇಶ ಮಾಡುತ್ತಿದ್ದಾರೆ ಅಲ್ಲಿ ಕರೋನ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದು, ನಮ್ಮನ್ನು ತಡೆಯಲು ಬಿಜೆಪಿ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಕಿಡಿಕಾರಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ(CM Basavaraj Bommai) ಮತ್ತು ಯಡಿಯೂರಪ್ಪ(Yeddyurappa)ನವರು ನಿರಂತರವಾಗಿ ಮದುವೆಗಳಲ್ಲಿ ಭಾಗಿಯಾಗಿದ್ದಾರೆ ಮೊದಲು ಅವರ ಮೇಲೆ ಕೇಸ್ ಆಕಲಿ ಎಂದು ಆಗ್ರಹಿಸಿದರು. ವರ್ತಕರು, ಡ್ರೈವರ್ ಗಳು, ಬೀದಿ ವ್ಯಾಪಾರಿಗಳನ್ನು ಬಿಜೆಪಿ ಸರ್ಕಾರ ಕೊಲೆ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

- Advertisement -

Latest Posts

Don't Miss