‘777 ಚಾರ್ಲಿ’ ತೆಲುಗು ಬಿಡುಗಡೆಗೆ ಕೈ ಜೋಡಿಸಿದ ದಗ್ಗುಬಾಟಿ..!!!

ರಕ್ಷಿತ್ ಶೆಟ್ಟಿ ನಟನೆಯ ‘೭೭೭ ಚಾರ್ಲಿ’ ಚಿತ್ರ ಜೂನ್ ೧೦ ರಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಳಂ ಭಾಷೆಯಲ್ಲಿ ತೆರೆಕಾಣಲಿದೆ. ಕೆಜಿಎಫ್-೨ ಚಿತ್ರದ ನಂತರ ‘೭೭೭ ಚಾರ್ಲಿ’ ಕನ್ನಡ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗಿದೆ.

ರಕ್ಷಿತ್ ಶೆಟ್ಟಿ ನಟನೆಯ, ಕಿರಣ್ ರಾಜ್ ಕೆ ನಿರ್ದೇಶನದ ಈ ಚಿತ್ರಕ್ಕೆ ತೆಲುಗಿನ ರಾಣಾ ದಗ್ಗುಬಾಟಿ ಸಾಥ್ ನೀಡಲಿದ್ದಾರೆ. ಬಹು ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು ಪ್ರಸ್ತುತ ಪಡಿಸುತ್ತಿದ್ದು, ತಮ್ಮ ಸುರೇಶ್ ಪ್ರೊಡಕ್ಷನ್ ಮೂಲಕ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ಈ ಮೂಲಕ ರಕ್ಷಿತ್ ಶೆಟ್ಟಿ ಅವರ ಈ ಚಿತ್ರವನ್ನ ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇನ್ನು ಈ ಕುರಿತು ಸ್ವತಃ ರಕ್ಷಿತ್ ಶೆಟ್ಟಿ ಅವರೇ ಟ್ವೀಟ್ ಮಾಡಿದ್ದಾರೆ.

ಇನ್ನು ಈ ಬಗ್ಗೆ ನಿರ್ದೇಶಕ ಕಿರಣ್ ರಾಜ್ ಮಾತನಾಡಿದ್ದು, ‘ತೆಲುಗಿನಲ್ಲಿ ನಮ್ಮ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು ಸಿನಿಮಾ ನೋಡಿದ ನಂತರ ಸಿನಿಮಾವನ್ನು ವಿತರಣೆ ಮಾಡಲು ಒಪ್ಪಿರುವುದು ನಮ್ಮ ಚಿತ್ರಕ್ಕೆ ಸಿಕ್ಕಿರುವ ಬಹು ದೊಡ್ಡ ಮೆಚ್ಚುಗೆ. ಸಿನಿಮಾ ನೋಡಿದ ಕೂಡಲೇ ರಾಣಾ ಅವರೇ ಟ್ವೀಟ್ ಮಾಡಿ ಚಿತ್ರದ ಬಗ್ಗೆ ಎರಡೇ ಸಾಲಿನಲ್ಲಿ ರಿವ್ಯೂ ಕೂಡ ಕೊಟ್ಟಿದ್ದಾರೆ. ಹೀಗಾಗಿ ಚಿತ್ರವನ್ನು ಅವರೇ ಪ್ರಸೆಂಟ್ ಮಾಡುವ ಜತೆಗೆ ಇದರ ತೆಲುಗು ವರ್ಷನ್ ಅನ್ನು ಸುರೇಶ್ ಪ್ರೊಡಕ್ಷನ್‌ನಿಂದ ಬಿಡುಗಡೆ ಮಾಡುತ್ತಿದ್ದಾರೆ. ಎಷ್ಟು ಚಿತ್ರಮಂದಿರಗಳು, ಎಷ್ಟು ಸ್ಕ್ರೀನ್‌ಗಳು ಎಂಬುದರ ಬಗ್ಗೆ ಸದ್ಯದಲ್ಲೆ ಹೇಳುತ್ತಾರೆ. ಕನ್ನಡ ಚಿತ್ರಕ್ಕೆ ಟಾಲಿವುಡ್‌ನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜತೆಯಾಗಿದೆ ಎಂಬುದು ಈ ಕ್ಷಣದ ಸಂಭ್ರಮ ಎಂದು ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಸಂಗೀತ ಶೃಂಗೇರಿ ನಾಯಕಿಯಾಗಿ ನಟಿಸಿದ್ದು, ತಮಿಳಿನ ಬಾಬಿ ಸಿಂಹ, ಡ್ಯಾನಿಶ್ ಸೇಠ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಕೃತಿ ಪ್ರಭಾಕರ್, ರ‍್ನಾಟಕ ಟಿವಿ, ಸಿನಿಮಾ ಬ್ಯುರೋ

About The Author