ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ‘ಅವತಾರ ಪುರುಷ’ ಸಿನಿಮಾವು ಇದೇ ಮೇ ೬ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ. ಈವರೆಗೂ ಟೀಸರ್, ಪೋಸ್ಟರ್, ಹಾಡುಗಳು ಹಾಗೂ ವಿಭಿನ್ನ ಪ್ರಮೋಷನಲ್ ವಿಡಿಯೋಗಳಿಂದ ಅಭಿಮಾನಿಗಳ ಗಮನ ಸೆಳೆದಿದ್ದ ‘ಅವತಾರ ಪುರುಷ’ ಈಗ ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರ ಸಾಥ್ ಜೊತೆಗೆ ಚಿತ್ರದ ಟ್ರೇಲರ್ ಅನ್ನು ರಿಲೀಸ್ ಮಾಡಿದ್ದಾರೆ.
ಎರಡು ಪಾರ್ಟ್ಗಳಲ್ಲಿ ಸಿದ್ಧವಾಗಿರುವ ಈ ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದು, ಈ ಬಾರಿ ಡಿಫರೆಂಟ್ ಕಥೆಯೊಂದಿಗೆ ‘ಸಿಂಪಲ್’ ಸುನಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು, ಸಿನಿಮಾವನ್ನು ವಿವಿಧ ರೀತಿಯ ವಿಡಿಯೋಗಳ ಮೂಲಕ ಸಿಂಪಲ್ ಸುನಿ ಡಿಫರೆಂಟ್ ಆಗಿ ಪ್ರಮೋಷನ್ ಮಾಡುತ್ತಿದ್ದು, ‘ಐಪಿಎಲ್ ನಮ್ಮ ಸಿನಿಮಾಗಳಿಗೆ ಮಾರಕ. ನಾನು ಸಿಂಪಲ್ಲಾಗೊoದ್ ಲವ್ ಸ್ಟೋರಿ’ ಸಿನಿಮಾದ ಸಮಯದಿಂದಲೂ ಇದನ್ನು ಅನುಭವಿಸಿದ್ದೇನೆ. ಆ ಸಿನಿಮಾ ರಿಲೀಸ್ ಆದಾಗ ಮಾರ್ನಿಂಗ್ ಮತ್ತು ಮ್ಯಾಟ್ನಿ ಶೋಗಳು ಹೌಸ್‌ಫುಲ್ ಆಗಿ ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಅದೇ ದಿನದ ಫಸ್ಟ್ ಶೋ ಮತ್ತು ನೈಟ್ ಶೋಗಳು ಶೇ.೫೦ರಷ್ಟೆ? ತುಂಬಿರುತ್ತಿದ್ದವು. ಅದಕ್ಕೆ ಕಾರಣ, ಆ ವೇಳೆ ಐಪಿಎಲ್ ನಡೆಯುತ್ತಿತ್ತು. ಅದರಲ್ಲೂ ಆರ್‌ಸಿಬಿ ಮ್ಯಾಚ್ ಇದ್ದ ಸಮಯದಲ್ಲಂತೂ ಭಾರಿ ಹೊಡೆತ ಬೀಳುತ್ತಿತ್ತು. ಆದರೂ ಜನ ಅಷ್ಟು ಇಷ್ಟಪಟ್ಟು ಮ್ಯಾಚ್ ನೋಡುತ್ತಿದ್ದರು. ಈಗ ಅದಕ್ಕೆ ಅದನ್ನೇ ಬಳಸಿಕೊಂಡು ನಮ್ಮ ಸಿನಿಮಾದ ಬಗ್ಗೆ ಮಾತಾಡೋಣ ಎಂದು ಈ ವಿಡಿಯೋ ಮಾಡಿದೆವು’ ಎಂದು ಸುನಿ ಹೇಳಿಕೊಂಡಿದ್ದಾರೆ.
ಇನ್ನು, ಈ ಸಿನಿಮಾದಲ್ಲಿ ಶರಣ್, ಆಶಿಕಾ ರಂಗನಾಥ್ ಜೊತೆಗೆ ಭವ್ಯಾ, ಸಾಯಿಕುಮಾರ್, ಬಿ. ಸುರೇಶ, ಶ್ರೀನಗರ ಕಿಟ್ಟಿ, ವಿಜಯ್ ಚೆಂಡೂರು, ಆಶುತೋಷ್ ರಾಣಾ, ಸಾಧುಕೋಕಿಲಾ, ಬಾಲಾಜಿ ಮನೋಹರ್ ಸೇರಿದಂತೆ ಸಾಕಷ್ಟು ಅನುಭವಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಹಾಗೂ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ.
ಪ್ರಕೃತಿ ಪ್ರಭಾಕರ್, ರ‍್ನಾಟಕ ಟಿವಿ, ಸಿನಿಮಾ ಬ್ಯುರೋ