Saturday, July 5, 2025

Latest Posts

ದಿನನಿತ್ಯವು ಶಾಲೆಯ ಮಕ್ಕಳಿಗೆ ತಾಪಮಾನ ತಪಾಸನೆ ಅಗತ್ಯವಿಲ್ಲ..!

- Advertisement -

www.karnatakatv.net : ದೇಶಾದ್ಯಂತ ಕೊರೊನಾ ವೈರಸ್ ನಿಂದಾಗಿ ಎಲ್ಲಾ ಶಾಲೆಗಳು ಬಂದ್ ಆಗಿದ್ದವು ಆದ್ರೆ ಈಗ ಕೆಲವು ಶಾಲೆಗಳು ಪುನರಾರಂಬವಾಗಿವೆ. ಹಾಗೇ ಶಾಲೆಗಳಲ್ಲಿ ದಿನನಿತ್ಯ ತಾಪಮಾನ ತಪಾಸನೆಯನ್ನು ಮಾಡಲಾಗುವುದು. ಆದ್ರೆ ಈಗ ಅದರ ಅವಶ್ಯಕತೆ ಇಲ್ಲಾ.  

ಹೌದು, ಮೂರನೇ ಅಲೆ ಆತಂಕದ ಬೆನ್ನಲ್ಲೇ ತಜ್ಞರ ಸಲಹೆದಿಂದ ಕೊರೊನಾ ನಿಯಮವನ್ನು ಪಾಲಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ದಿನಾಲು ಮಕ್ಕಳ ದೈಹಿಕ ತಾಪಮಾನವನ್ನು ನೋಡಿ ತರಗತಿಗೆ ಹಾಜರಾಗಲು ಅವಕಾಶವನ್ನು ನೀಡಲಾಗುತ್ತಿದೆ. ಆದರೆ ದಿನನಿತ್ಯ ತಪಾಸನೆಯನ್ನು ಮಾಡುವ ಬದಲು ಮಕ್ಕಳಿಗೆ ಹಾಗೂ ಸಿಬ್ಬಂದಿಗೆ ಆಗಾಗ್ಗೆ ಕೊರೊನಾ ಪರೀಕ್ಷೆಯನ್ನು ಸಡೆಸುವುದು ಸೂಕ್ತ  ಎಂದು ಅಧ್ಯಯನವೊಂದು ಸಲಹೆಯನ್ನು ನೀಡಿದೆ.

ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ನಲ್ಲಿ ಪ್ರಕಟವಾದ ಅಧ್ಯಯನವು ಶಾಲೆಗಳಲ್ಲಿ ಪ್ರತಿದಿನವೂ ಮಕ್ಕಳಿಗೆ ತಾಪಮಾನ ತಪಾಸನೆ ಅಗತ್ಯವಿಲ್ಲ ಎಂದು ಹೇಳಿದೆ. ಕೊರೊನಾ ಸೋಂಕಿನ ಹರಡುವಿಕೆ ತಡೆಯಲು ಕೊರೊನಾ ಪರೀಕ್ಷಾ ತಂತ್ರಗಳನ್ನು ಅನುಸರಿಸುವುದು ಮುಖ್ಯವಾಗಿದ್ದು, ಇದು ಸೋಂಕು ಹರಡುವಿಕೆಯನ್ನು ತಡೆಯಲು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ಅಧ್ಯಯನವು ಹೇಳಿದೆ. ಎಲ್ಲಾ ಶಾಲೆಗಳಲ್ಲಿ ಕೊರೊನಾ ಸೋಂಕಿನ ಪರೀಕ್ಷಾ ತಂತ್ರಗಳನ್ನು ಪೂರಕವಾಗಿ ಅಳವಡಿಸಬೇಕು ಎಂದು ಐಸಿಎಂಆರ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಲರಾಂ ಭಾರ್ಗವ್, ಸಮೀರನ್ ಪಾಂಡಾ ಹಾಗೂ ತನು ಆನಂದ್ ವಿವರಿಸಿದ್ದಾರೆ.

- Advertisement -

Latest Posts

Don't Miss