www.karnatakatv.net: ರಾಯಚೂರು: ಶಾಲೆಯಲ್ಲಿ ಕುರಿಯ ಹಿಕ್ಕೆ ಗಳು..ಥೇಟ್ ಗೌಡೌನ್ ನಂತಾಗಿರೋ ಶಾಲಾ ಕೊಠಡಿಗಳಲ್ಲಿ ಮಕ್ಕಳು ಕೂತು ಪಾಠ ಮಾಡೋ ವಾತಾವರಣವೇ ಇಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಬೇಕು ಅನ್ನೋ ನಿಟ್ಟಿನಲ್ಲಿ ಸರ್ಕಾರ ಕೊಡ್ತಿರೋ ಸೌಲಭ್ಯ ಈ ಗ್ರಾಮದ ಮಕ್ಕಳಿಗೆ ಲಭ್ಯವಾಗ್ತಿಲ್ಲ. ಯಾಕಂದ್ರೆ ಇಲ್ಲಿ ಪಾಠ ಮಾಡೋದಕ್ಕೆ ಶಿಕ್ಷಕರೇ ಇಲ್ಲ.
ಹೌದು.. ರಾಯಚೂರು ಜಿಲ್ಲೆಯ ಅಮರಾವತಿ ಪೋತಗಲ್ ಗ್ರಾಮದ ಈ ಶಾಲೆಗೆ ನಿಯೋಜನೆಗೊಂಡಿದ್ದು ಕೇವಲ ಇಬ್ಬರೇ ಶಿಕ್ಷಕರು. ಈ ಪೈಕಿ ಒಬ್ಬರು ಪ್ರಮೋಷನ್ ಪಡೆದು ಬೇರೆಡೆ ಟ್ರಾನ್ಸ್ ಫರ್ ಆಗಿದ್ದಾರೆ. ಆದ್ರೆ ಮತ್ತೊಬ್ಬ ಶಿಕ್ಷಕಿ ಸುನೀತಾ ಜೋಶಿ ಯರವಲು ಸೇವೆಗಾಗಿ ಪಕ್ಕದ ಗ್ರಾಮದ ಶಾಲೆಗೆ ತೆರಳಿದ್ದಾರೆ. ಹೀಗಾಗಿ ಇಲ್ಲಿ ನ ಮಕ್ಕಳಿಗೆ ಕಲಿಸೋದಕ್ಕೆ ಶಿಕ್ಷಕೇ ಇಲ್ಲದಂತಾಗಿದೆ. ಇನ್ನು ಯರವಲು ಸೇವೆಗೆ ಹೋದ ಶಿಕ್ಷಕಿ ಸುನೀತಾ ಮತ್ತೆ ವಾಪಸ್ ಈ ಶಾಲೆಗೆ ಬಂದು ಕಾರ್ಯ ನಿರ್ವಹಿಸಬೇಕು ಅಂತ ಶಿಕ್ಷಣ ಇಲಾಖೆ ಆದೇಶಿಸಿದೆ. ಆದ್ರೂ ಕೂಡ ಶಿಕ್ಷಕಿ ಸುನೀತಾ ಈ ಗ್ರಾಮದ ಶಾಲೆಗೆ ಪಾಠ ಹೇಳಿಕೊಡೋದಕ್ಕೆ ಬರ್ತಿಲ್ಲವಂತೆ. ಯಾಕಂದ್ರೆ, ಇಲ್ಲಿಗೆ ಬರೋದು ದಲಿತ ಮಕ್ಕಳು ಅಂತ ಈ ಶಿಕ್ಷಕಿ ಹೀಗೆ ಮಾಡ್ತಿದ್ದಾರೆ ಅನ್ನೋದು ಗ್ರಾಮಸ್ಥರ ಆರೋಪವಾಗಿದೆ.
ಇನ್ನು ಶಿಕ್ಷಕರೇ ಇಲ್ಲದ ಕಾರಣ ಈ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಹಾಗಾದ್ರೆ ದಲಿತ ಸಮುದಾಯದವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬೇಕಾ, ಅವರ ಮುಂದಿನ ಭವಿಷ್ಯ ಏನು ಅಂತ ಪೋಷಕರು ಕಳವಳ ವ್ಯಕ್ತಪಡಿಸ್ತಿದ್ದಾರೆ.
ಒಟ್ನಲ್ಲಿ ಸರ್ವ ಶಿಕ್ಷಣ ಅಭಿಯಾನ, ಮರಳಿ ಬಾ ಶಾಲೆಗೆ, ಅಕ್ಷರ ದಾಸೋಹದಂತಹ ಯಶಸ್ವಿ ಯೋಜನೆಗಳನ್ನ ಸರ್ಕಾರ ಜಾರಿಗೆ ತಂದು ಮಕ್ಕಳನ್ನ ಸೆಳೆಯೋದ್ರಲ್ಲೇನೋ ಯಶಸ್ವಿಯಾಗಿದೆ ನಿಜ. ಆದ್ರೆ ರಾಜ್ಯಾದ್ಯಂತ ಇಂಥಹ ಅನೇಕ ಶಾಲೆಗಳಲ್ಲಿ ಪಾಠ ಹೇಳಿಕೊಡೋದಕ್ಕೆ ಶಿಕ್ಷಕರೇ ಇಲ್ಲದ ಮೇಲೆ ಯಾವ ಯೋಜನೆ ಜಾರಿ ಮಾಡಿ ಏನೂ ಪ್ರಯೋಜನವಾಗೋದಿಲ್ಲ. ಹೀಗಾಗಿ ಸಂಬoಧಪಟ್ಟ ಅಧಿಕಾರಿಗಳು ಅಮರಾವತಿ ಪೋತಗಲ್ ಗ್ರಾಮದ ಈ ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಡಲೇಬೇಕಾಗಿರೋದು ಅನಿವಾರ್ಯತೆ ಇದೆ.
ಅನಿಲ್ ಕುಮಾರ್, ಕರ್ನಾಟಕ ಟಿ.ವಿ.- ರಾಯಚೂರು