ಶಿವಮೊಗ್ಗದಲ್ಲಿ ಕಾಮುಕರ ಕೀಚಕ ಕೃತ್ಯ: ವಿವಾಹಿತ ದಲಿತ ಮಹಿಳೆ ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನ

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆಸ್ಪತ್ರೆಗೆ ತೆರಳಿ, ರಾತ್ರಿ ವೇಳೆ ತಮ್ಮೂರಿಗೆ ತೆರಳುತ್ತಿದ್ದಂತ ದಲಿತ ವಿವಾಹಿತೆಯನ್ನು, ನಾಲ್ವರು ಅಡ್ಡಗಟ್ಟಿ, ರಬ್ಬರ್ ತೋಟಕ್ಕೆ ಹೊತ್ತೊಯ್ದು ಬೆತ್ತಲೆಗೊಳಿಸಿ, ಅತ್ಯಾಚಾರಕ್ಕೆ ಯತ್ನಿಸಿರೋ ಘಟನೆ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದಂತ ಪತ್ನಿಯನ್ನು, ತೀರ್ಥಹಳ್ಳಿ ಆಸ್ಪತ್ರೆಗೆ ಪತಿ ಕರೆದೊಯ್ದು, ತೋರಿಸಿಕೊಂಡು ತಮ್ಮೂರಿಗೆ ರಾತ್ರಿ ಹಿಂದಿರುಗುತ್ತಿದ್ದರು. ಈ ವೇಳೆ ದಿಢೀರ್ ಅಡ್ಡಬಂದ ನಾಲ್ವರು ಯುವಕರು, ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪರಿಣಾಮ ಮೂರ್ಛೆತಪ್ಪಿ ಅವರು ಬಿದ್ದಿದ್ದಾರೆ.

ಈ ವೇಳೆ ಪಕ್ಕದಲ್ಲೇ ಇದ್ದಂತ ರಬ್ಬರ್ ತೋಟಕ್ಕೆ ದಲಿತ ವಿವಾಹಿತ ಮಹಿಳೆಯನ್ನು ಹೊತ್ತೊಯ್ದು ಬೆತ್ತಲೆಗೊಳಿಸಿ, ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಈ ಸಂದರ್ಭದಲ್ಲಿ ರಕ್ಷಣಗೆಗಾಗಿ ಕೂಗಿಕೊಂಡಾಗ ಗ್ರಾಮಸ್ಥರು ಧಾವಿಸಿದ್ಧಾರೆ. ಆಗ ಕೀಚಕರು ಅಲ್ಲಿಂದ ಪರಾರಿಯಾಗಿದ್ದಾರೆ. ಆ ಇಬ್ಬರು ಗಂಡ-ಹೆಂಡತಿಯನ್ನು ಗ್ರಾಮಸ್ಥರು ಆಟೋದಲ್ಲಿ ಊರಿಗೆ ಕಳುಹಿಸಿದ್ದಾರೆ. ಈ ಬಳಿಕ ಬೆಳಿಗ್ಗೆ ಗಾಯಗೊಂಡಿದ್ದ ಅವರು, ತೀರ್ಥಹಳ್ಳಿಗೆ ತೆರಳಿ, ಚಿಕಿತ್ಸೆ ಪಡೆದ ಬಳಿಕ, ಠಾಣೆಗೆ ದೂರು ನೀಡಿದ್ದಾರೆ. ಈಗ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

About The Author