Hubli News: ಹುಬ್ಬಳ್ಳಿ: ಕೆ ರಾಜಣ್ಣ ಅವರನ್ನ ವಜಾ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ, ದಲಿತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅವಕಾಶ ಇಲ್ಲಾ ಅನ್ನೋ ಸಂದೇಶ ಕೊಟ್ಟಿದೆ. ರಾಜಣ್ಣ ಅವರನ್ನ ಕಿತ್ತು ಹಾಕುವ ಕೆಲಸ ಕಾಂಗ್ರೆಸ್ ಮಾಡಿದೆ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲಾ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜಣ್ಣ ಕಾಂಗ್ರೆಸ್ ನ ಹಿರಿಯ ನಾಯಕರು, ಆದ್ರೆ ಕಾಂಗ್ರೆಸ್ ಅವರನ್ನ ಯಾವ ರೀತಿ ನಡೆಸಿಕೊಂಡಿದೆ ಗೊತ್ತಾಗಿದೆ. ಮತಗಳ್ಳತನದ ಬಗ್ಗೆ ಇದ್ದದ್ದನ್ನ ಹೇಳಿದ್ದಾರೆ. ಮುಖ್ಯಮಂತ್ರಿಗಳು ರಾಜಣ್ಣ ಅವರಿಗೆ ರಾಜೀನಾಮೆ ಕೂಡ ಕೊಡೋಕೆ ಬಿಡಲಿಲ್ಲ, ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಸ್ಪಷ್ಟವಾಗಿ ಸಂದೇಶ ಕೊಡ್ತಿದೆ ಎಂದರು.
ಇನ್ನು ಯಡಿಯೂರಪ್ಪ ಅವರನ್ನ ಬಿಜೆಪಿ ಸರ್ಕಾರ ವಜಾ ಮಾಡಿಲ್ಲ, ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಜಗಜಾಂತರ ವ್ಯತ್ಯಾಸ ಇದೆ. ಯಡಿಯೂರಪ್ಪ ಎರಡನೇ ಲೈನ್ ನಾಯಕರಿಗೆ ಬೆಳೆಯುವ ಅವಕಾಶ ಕೊಟ್ಟಿದ್ದಾರೆ. ಯಡಿಯೂರಪ್ಪ ಸ್ವಂತ ನಿರ್ಧಾರ ತಗೊಂಡಿದ್ದು, ನೀವು ರಾಜಣ್ಣ ಅವರಿಗೆ ಏನು ಮಾಡಿದ್ರಿ..? ರಾಜೀನಾಮೆ ಕೊಡೋಕು ಅವಕಾಶ ಕೊಡದೆ ಕಿತ್ತು ಒಗೆಯುವ ಆದೇಶ ಕೊಟ್ರಿ, ರಾಜೀನಾಮೆ ಕೊಡದೆ ಸಂಪುಟದಿಂದ ತೆಗೆದು ಹಾಕಿದ್ರಿ, ಇಂತಹ ನೀಚ ಕೆಲಸ ಕಾಂಗ್ರೆಸ್ ಪಕ್ಷ ಮಾಡಿದೆ ಎಂದರು.