Kolar News: ಕೋಲಾರದ ಡ್ಯಾಂ ವಿಚಾರವಾಗಿ ಅಕ್ರಮ ಎಸಗಿರುವ ಬಗ್ಗೆ ಮನವಿ ಬಂದಿದ್ದ ಕಾರಣ ಸಿಎಂ ಸಿದ್ದರಾಮಯ್ಯ ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದಾರೆ.
ಯರಗೋಳ ಡ್ಯಾಂ ಯೋಜನೆಯಲ್ಲಿ ಕೋಟ್ಯಂತರ ರೂ. ಅಕ್ರಮವಾಗಿದ್ದು ಯೋಜನೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಲಾಗಿದೆ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದಾರೆ.
ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಈ ಆರೋಪ ಮಾಡಿದ್ದಾರೆ. ಸೂಕ್ತ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಸುಮಾರು 160 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಇನ್ನೂ ನೀರು ಪೂರೈಕೆಗೆ 79 ಕೋಟಿ ರೂ. ಹಣ ಮಂಜೂರು ಮಾಡಲಾಗಿದೆ. ಒಟ್ಟು 249 ಕೋಟಿ ರೂ. ಯೋಜನೆಗೆ ಹಣ ಮಂಜೂರು ಪ್ರಕ್ರಿಯೆ ನಡೆದಿದೆ. ಆದರೆ ಡ್ಯಾಂ ನಿರ್ಮಾಣ, ಪೈಪ್ ಲೈನ್ ಅಳವಡಿಕೆ, ಓವರ್ ಹೆಡ್ ಟ್ಯಾಂಕ್ ನಿರ್ಮಾಣದಲ್ಲಿ ನಿಗದಿಗಿಂತಲೂ ಹೆಚ್ಚುವರಿಯಾಗಿ ಹಣ ಮಂಜೂರು ಮಾಡಿರುವ ಆರೋಪ ಮಾಡಲಾಗಿದೆ ಎಂದು ಹೇಳಲಾಗಿದೆ.
Police_ ಬೆತ್ತಲೆ ಮಾಡಿ ಹಲ್ಲೆ ಪ್ರಕರಣದ ಬೆನ್ನಲ್ಲೇ: ಬೆಂಡಿಗೇರಿ ಠಾಣೆ ಪಿಐ ಮಹಿಳಾ ಠಾಣೆಗೆ..!
Police ಕ್ಷುಲ್ಲಕ ಕಾರಣಕ್ಕೆ ಹರಿಯುತ್ತಿದೆ ನೆತ್ತರು: ಆತಂಕದಲ್ಲಿಯೇ ಜೀವಿಸುತ್ತಿದ್ದಾರೆ ಹುಬ್ಬಳ್ಳಿ ಜನರು