Friday, November 22, 2024

Latest Posts

ಡಾರ್ಕ್ ಚಾಕೊಲೇಟ್ ಸೇವನೆ ಆರೋಗ್ಯಕ್ಕೆ ಉತ್ತಮ..?!

- Advertisement -

Health tips:

ಚಾಕೊಲೇಟ್ ಎಂದರೆ ಎಲ್ಲರಿಗೂ ಪ್ರಿಯ ಚಿಕ್ಕ ಮಕ್ಕಳಿಗಂತೂ ಪಂಚಪ್ರಾಣ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಚಾಕೊಲೇಟ್ ಎಂದರೆ ಇಷ್ಟ ಆದರೆ ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಚಾಕೊಲೇಟ್ ಹೇಗೆ ಬಂತು ಎಂದು ಆಶ್ಚರ್ಯವಾಗುತ್ತಿದೆಯೇ..? ಅದಕ್ಕೂ  ಕಾರಣವಿದೆ. ಚಾಕಲೇಟ್ ಉತ್ತಮವೋ ದೋಷವೋ  ಎಂಬುದಾಗಿ ಹೇಳ್ತೇವೆ.. ಮಿತವಾಗಿ ಸೇವಿಸುವುದರಿಂದ ಅರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ವಿರುತ್ತದೆ .

ಡಾರ್ಕ್ ಚಾಕಲೇಟಿನ ನಿಯಮಿತ ಸೇವನೆ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲವೊನಾಯಿಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸುತ್ತದೆ ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ .ಸಂಶೋಧನೆಯ ಪ್ರಕಾರ ಸೀಮಿತ ಪ್ರಮಾಣದ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.ಡಾರ್ಕ್ ಚಾಕಲೇಟ್ ಇತರ ಸಿಹಿ ತಿನಿಸುಗಳಂತೆ ನಿಮ್ಮ ಹಲ್ಲನ್ನು ಹಾಳುಗೆಡುವುದಿಲ್ಲ.ಹಲ್ಲುಗಳಿಗೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀಳುವುದಿಲ್ಲ .

ನಿಮಗೆ ತುಂಬಾ ಆಯಾಸವಾಗಿದ್ದರೆ ಒಂದು ತುಂಡು ಡಾರ್ಕ್ ಚಾಕಲೇಟ್ ಅನ್ನು ತಿಂದರೆ ನಿಮ್ಮ ಆಯಾಸ ಕಡಿಮೆ ಯಾಗುತ್ತದೆ. ಚರ್ಮಕ್ಕೆ ರಕ್ತ ಸಂಚಾರವನ್ನು ಉತ್ತಮಪಡಿಸುವುದು, ಹೀಗಾಗಿ ಚಾಕಲೇಟ್ ತಿಂದು ಚರ್ಮವನ್ನು ಆರೋಗ್ಯವಾಗಿಡಿ.ಚಾಕೊಲೇಟ್ನಲ್ಲಿ ಕೋಕಎಂಬ ಅಂಶವಿರುತ್ತದೆ ಅದು ಮೆದುಳನ್ನು ಉತ್ತೇಜಿಸುತ್ತದೆ ಹಾಗು ಕೆಫಿನ್ ಮತ್ತು ಥಿಯೋಬ್ರೊಮಿನ್ ಅಂಶ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ .ಇದರಲ್ಲಿ ಇರುವಂತಹ ಕಡಿಮೆ ಕ್ಯಾಲರಿಯು ದೇಹದ ತೂಕವನ್ನು ಸಮತೋಲನದಲ್ಲಿಡಲು ನೆರವಾಗುವುದು, ಆದರೆ ನೀವು ಇದನ್ನು ಅತಿಯಾಗಿ ಸೇವನೆ ಮಾಡಿದರೆ ತೂಕ ಇಳಿಯುವ ಬದಲು ಹೆಚ್ಚಾಗಬಹುದು ,ಡಾರ್ಕ್ ಚಾಕಲೇಟ್ ನಲ್ಲಿ ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿರುತ್ತದೆ.ಡಾರ್ಕ್ ಚಾಕಲೇಟ್ ನಲ್ಲಿ ಪೊಟ್ಯಾಶಿಯಂ,ಕಬ್ಬಿಣದ ಅಂಶ,ಮೆಗ್ನೀಷಿಯಂ ಮತ್ತು ತಾಮ್ರದ ಅಂಶವಿರುತ್ತದೆ.ತಾಮ್ರ ಮತ್ತು ಪೊಟಾಷಿಯಂ ಅಂಶ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ರೋಗಗಳಿಂದ ತಪ್ಪಿಸುತ್ತದೆ.ಕಬ್ಬಿಣದ ಅಂಶ ಅನೇಮಿಯ ಬರದಂತೆ ತಡೆಯುತ್ತದೆ ಮತ್ತು ಡಾರ್ಕ್ ಚಾಕಲೇಟ್ ನಲ್ಲಿರುವ ಮ್ಯಾಗ್ನಿಶಿಯಂ ಅಂಶ ಟೈಪ್ 2 ಮಧುಮೇಹ ,ರಕ್ತದ ಒತ್ತಡ ಹೆಚ್ಚಾಗದಂತೆ ಮತ್ತು ಹೃದಯ ತೊಂದರೆಗಳು ಬರದಂತೆ ಕಾಪಾಡುತ್ತವೆ.

ಎಷ್ಟೇ ಪ್ರಯತ್ನ ಪಟ್ಟರು ನಿಮ್ಮ ತೂಕ ಕಡಿಮೆಯಾಗುತ್ತಿಲ್ವಾ..?! ಹಾಗಾದ್ರೆ ಒಮ್ಮೆ ಈ ಟಿಪ್ಸ್ ಫಾಲೋ ಮಾಡಿ :

ಬರಿಗಾಲಿನಲ್ಲಿ ನಡೆದರೆ ಎಷ್ಟೊಂದು ಪ್ರಯೋಜನ ಗೊತ್ತಾ ?

ಸಕ್ಕರೆ ಸ್ಲೋ ಪಾಯಿಸನ್..?! ಸಕ್ಕರೆ ಬಳಸೋಕು ಮುನ್ನ ಈ ವಿಷಯದ ಬಗ್ಗೆ ತಿಳಿದುಕೊಳ್ಳಿ..!

 

 

- Advertisement -

Latest Posts

Don't Miss