Sandalwood: ನಟಿ ಭೀಮಪ್ರಿಯಾ ಅವರು ಸಿನಿಮಾ ಆಯ್ಕೆ ಮಾಡುವಾಗ ಯಾವ ರೀತಿ ಆಯ್ಕೆ ಮಾಡುತ್ತಾರೆ ಅನ್ನೋ ಬಗ್ಗೆ ಮಾತನಾಡಿದ್ದಾರೆ.
ಸದ್ಯ ಕನ್ನಡದಲ್ಲಿ ಸಖತ್ ಸೌಂಡ್ ಮಾಡ್ತಿರೋ ಸಿನಿಮಾ ಅಂದ್ರೆ ಅದು ಡೆವಿಲ್ ಸಿನಿಮಾ. ಆದರೆ ಪ್ರಿಯಾ ಅವರನ್ನು ಈ ಮುಂಚೆಯೇ ಡೆವಿಲ್ ಎಂದು ಕರೆಯಲಾಗುತ್ತಿತ್ತು. ಹಾಗಾದ್ರೆ ಯಾಕೆ ಅವರನ್ನು ಹಾಗೆ ಕರೆಯಲಾಗುತ್ತಿತ್ತು ಅಂತಾ ಹೇಳಿದ್ರೆ, ಕನ್ನಡ ಸಿರಿಯಲ್ ಲಕ್ಷಣದಲ್ಲಿ ಪ್ರಿಯಾ ಅವರನ್ನು ಡೆವಿಲ್ ಅಂತಾ ತೋರಿಸಲಾಗಿತ್ತು.
ಇನ್ನು ಪ್ರಿಯಾ ಅವರು ಮನೆಯಲ್ಲಿ ಇದ್ದಾಗ, ಸಿನಿಮಾದಲ್ಲಿ ಮಾಡಿದ ಪಾತ್ರದ ಪರಕಾಯ ಪ್ರವೇಶ ಮಾಡ್ತಾರಂತೆ. ಪತಿಯ ಜತೆ ಜಗಳ ಮಾಡುವಾಗ ಗಿರಿಜಾ ರೀತಿ ಆಡಿದ್ರಂತೆ. ಆಗ ಅವರ ಪತಿ ನಿನ್ನ ಗಿರಿಜಾ ರೋಲ್‌ನಾ ಆಚೆ ಬಿಟ್ಟು ಬಾ ಎಂದಿದ್ದರಂತೆ. ಆಗ ಪ್ರಿಯಾ ಅವರಿಗೆ ಹೌದಲಾ, ನಾನು ಪ್ರಿಯಾಗಿಂತ ಗಿರಿಜಾ ರೀತಿಯೇ ಆಡಿದ್ದೆ ಎಂದೆನ್ನಿಸಿತ್ತಂತೆ.
ಇನ್ನು ಪ್ರಿಯಾ ಅವರಿಗೆ ಡ್ರೀಮ್ ರೋಲ್ ಅನ್ನೋದು ಯಾವ್ದು ಅನ್ನೋ ಪ್ರಶ್ನೆಗೆ ಉತ್ತರಿಸಿದ ಪ್ರಿಯಾ, ನಾನು ಕಲಾವಿದೆಯಾಗಿ ನಿಭಾಯಿಸಿದ ಪಾತ್ರವನ್ನು ನೋಡಿ ಜನ, ಪ್ರಿಯಾ ಬಿಟ್ಟು ಬೇರೆಯವರನ್ನು ಈ ಜಾಗದಲ್ಲಿ ಊಹಿಸಿಕ“ಳ್ಳಲು ಸಾಧ್ಯವೇ ಇಲ್ಲ ಅನ್ನೋ ರೀತಿಯ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದಿದ್ದಾರೆ ಪ್ರಿಯಾ.

