ದರ್ಶನ್ “ಕ್ರಾಂತಿ”ಗೆ ಸಾಥ್ ಕೊಟ್ಟ ಅಪ್ಪು..!
ಮತ್ತೆ ಒಂದಾಯ್ತು ಅರಸು ಕಾಂಬೋ..ಹೌದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರದಲ್ಲಿ ನಟಿಸಲು ಬಹುತೇಕ ನಟರು ತುದಿಗಾಲಲ್ಲಿ ನಿಂತಿದ್ದರು. ಅದರೆ ಯಾರಿಗೂ ಸಿಗದ ಅವಕಾಶ ನಟ ದರ್ಶನ್‌ಗೆ ಸಿಕ್ಕಿತು. ಅರಸು ಚಿತ್ರದಲ್ಲಿ ದರ್ಶನ್‌ಗೆ ನಟಿಸುವ ಅವಕಾಶ ಕಲ್ಪಿಸಿಕೊಡಲಾಯಿತು. ಈ ಚಿತ್ರದಲ್ಲಿ ದರ್ಶನ್ ಹೊರತು ಮತ್ಯಾವ ನಟರಿಗೂ ಪುನೀತ್ ಜೊತೆ ನಟಿಸುವ ಅವಕಾಶ ಸಿಗಲಿಲ್ಲ. ಇದೀಗ ದರ್ಶನ್ ನಟನೆಯ ಕ್ರಾಂತಿ ಚಿತ್ರಕ್ಕೆ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಾಥ್ ಕೊಟ್ಟಿದ್ದಾರೆ.
ಶಾಕ್ ಆದ್ರಾ.. ಹೌದು, ಈ ಸುದ್ದಿಯನ್ನ ನೀವು ನಂಬಲು ಹಿಂದೇಟಾಕಿದ್ರೂ ಈ ಸುದ್ದಿ ನಿಜಾನೆ. ಸೋಶಿಯಲ್ ಮೀಡಿಯಾದಲ್ಲಿ, ಅಭಿಮಾನಿಗಳ ವಲಯದಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿ ಸದ್ಯ ಕ್ರಾಂತಿ ಅಬ್ಬರ್ ಜೋರೋ ಜೋರು. ಅಕ್ಷರ ಕ್ರಾಂತಿಯ ಕಥೆಯಿರೋ ಈ ಚಿತ್ರದಲ್ಲಿಡಿ-ಬಾಸ್ ಬೇರೆಯದ್ದೇ ಲುಕ್ಕು, ಗೆಟಪ್‌ನಲ್ಲಿ ಅಭಿಮಾನಿಗಳ ಮುಂದೆ ಹಾಜರಾಗಲು ಸಜ್ಜಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಈಗಾಗಲೇ ಹಲವರು ಸ್ಟಾರ್ಸ್ ಕ್ರಾಂತಿ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರಕ್ಕೆ ಶುಭಹಾರೈಸುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ನಮ್ಮೆಲ್ಲರ ಪ್ರೀತಿಯ ಅಪ್ಪು ಸಹ ಕ್ರಾಂತಿ ಚಿತ್ರದ ಪೋಸ್ಟರ್‌ನ ಸ್ವತಃ ಗೆಳೆಯ ನಟ ದರ್ಶನ್ ಜೊತೆ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಅರೇ ಇದು ಅಪ್ಪು ಸರ್ ಇದ್ದಾಗ ತೆಗೆಸಿರೋ ಫೋಟೋ ಅಂತ ನೀವು ಅಂದುಕೊಳ್ತಿರ್ತೀರಾ ಅಲ್ವಾ..ಅಲ್ಲ, ಬದಲಿಗೆ ಈ ಫೋಟೋವನ್ನ ಕನ್ನಡ ಚಿತ್ರಾಭಿಮಾನಿಗಳೇ ಕ್ರಿಯೇಟ್ ಮಾಡಿರೋದು. ಎಲ್ರಿಗೂ ಗೊತ್ತಿರುವಂತೆ ನಮ್ಮ ಅಪ್ಪು ನಮ್ಮೆಲ್ಲರನ್ನ ಅಗಲಿ ೮ ತಿಂಗಳುಗಳೇ ಕಳೆದೋಗಿದೆ. ಆದರೂ ಪ್ರತೀ ದಿನ ಪ್ರತೀ ಕ್ಷಣ ಅಪ್ಪು ಸರ್ ನಮ್ಮೊಂದಿಗೆ ಇದ್ದಾರೆ ಅಂತ ಜೀವಿಸುತ್ತಿರೋ ಅಭಿಮಾನಿಗಳೇ ದಾಸನಿಗೆ ಈ ರ‍್ಪೆöÊಸ್ ಕೊಟ್ಟಿದ್ದಾರೆ. ಸದ್ಯ ಸೊಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಈ ಫೋಟೋಗೆ ಅಭಿಮಾನಿಗಳು ತುಂಬು ಹೃದಯದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.