Wednesday, February 5, 2025

Latest Posts

ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ದರ್ಶನ್ ‘ರಾಬರ್ಟ್’ ಆಡಿಯೋ ಲಾಂಚ್….ಯಾರೆಲ್ಲಾ ಬರ್ತಾರೆ ಗೊತ್ತಾ ಗೆಸ್ಟ್….?

- Advertisement -

ಡಿಬಾಸ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ರಾಬರ್ಟ್ ಸಿನಿಮಾದ ಆಡಿಯೋ ಲಾಂಚ್ ಇವತ್ತು ಅದ್ಧೂರಿಯಾಗಿ ಗಡ್ಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಸಂಜೆ 6 ಗಂಟೆಗೆ ಆಡಿಯೋ ಲಾಂಚ್ ಕಾರ್ಯಕ್ರಮ ಶುರುವಾಗಲಿದ್ದು, ಅದಕ್ಕಾಗಿ ಬೃಹತ್ ಸ್ಟೇಜ್‌ ರೆಡಿಯಾಗಿದೆ.

ಆಫ್ಟರ್ ಲಾಂಗ್ ಟೈಮ್ ಬಳಿಕ ದರ್ಶನ್ ಸಿನಿಮಾವೊಂದರ ಆಡಿಯೋ ಲಾಂಚ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು, ದಚ್ಚು‌ ನೋಡೋದಿಕ್ಕೆ ಫ್ಯಾನ್ಸ್ ಎಕ್ಸೈಟ್ ನಿಂದ ಕಾಯ್ತಿದ್ದಾರೆ.

ಇನ್ನು, ಕಾರ್ಯಕ್ರಮದಲ್ಲಿ‌ ದರ್ಶನ್‌, ಆಶಾ ಭಟ್‌, ವಿಲನ್ ಪಾತ್ರ ನಿರ್ವಹಿಸಿರುವ ತೆಲುಗು ಸ್ಟಾರ್‌ ಜಗಪತಿ ಬಾಬು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಅಭಿಷೇಕ್ ಅಂಬರೀಶ್, ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ‌ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಅಂದಹಾಗೇ ಮಾರ್ಚ್ 11ಕ್ಕೆ ರಾಬರ್ಟ್ ಸಿನಿಮಾ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ರಿಲೀಸ್ ಆಗ್ತಿದೆ. ಮೊನ್ನೆಯಷ್ಟೇ ರಾಬರ್ಟ್ ಪ್ರೀ-ರಿಲೀಸ್ ಇವೆಂಟ್ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಇದೀಗ ಹುಬ್ಬಳ್ಳಿಯಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯುತ್ತಿದೆ.

- Advertisement -

Latest Posts

Don't Miss