Film News:
ಸಂಕಷ್ಟದಲ್ಲಿದ್ದ ದರ್ಶನ್ ಗೆ ಸಾಥ್ ಕೊಟ್ಟ ಸೂಪರ್ ಹಿಟ್ ಸಿನಿಮಾವದು ಸಹೋದರರು ಒಟ್ಟಾಗಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಮಾಸ್ಟರ್ ಪೀಸ್ ಸಿನಿಮಾ ಅದು. ಅಷ್ಟೇ ಏಕೆ ಆಟೋ ಡ್ರೈವರ್ ಗಳು ಅಪ್ಪಿಕೊಂಡ ವಿಭಿನ್ನ ಸಿನಿಮಾವದು.ದಚ್ಚು ದಾಖಲೆ ಬರೆದ ಈ ಸಿನಿಮಾಕ್ಕೆ ಇದೀಗ 11 ವರ್ಷಗಳ ಸಂಭ್ರಮ.ಹಾಗಿದ್ರೆ ದರ್ಶನ್ ಸಿನಿ ಜೀವನಕ್ಕೆ ತಿರುವು ಕೊಟ್ಟ ಆ ಫಿಲ್ಮ್ ಯಾವುದು ಇಲ್ಲಿದೆ ಆ ರೋಚಕ ಕಹಾನಿ.
ಸಂಕಷ್ಟದಲ್ಲಿದ್ದ ದರ್ಶನ್ ಸಿನಿ ಜೀವನಕ್ಕೆ ತಿರುವು ಕೊಟ್ಟ ಸಿನಿಮಾಗೆ 11ವರುಷಗಳ ಸಂಭ್ರಮ..! ಹೌದುತೆರೆ ಮೇಲೆ ಆಟೋ ಚಾಲಕನಾಗಿ ಮಿಂಚಿದ್ದ ದರ್ಶನ್ ಗೆ ಸಾಥ್ ಕೊಟ್ಟ ಸಿನಿಮಾ ಸಾರಥಿ ಪ್ರದರ್ಶನಗೊಂಡು ಇದೀಗ 11 ವರ್ಷಗಳಾಗುತ್ತಿವೆ. ತೆರೆ ಮೇಲೆ ಆಟೋ ಚಾಲಕನಾಗಿ ಮಿಂಚಿದ್ದ ದರ್ಶನ್ ಅವರ ಜೊತೆ ನಾಯಕಿಯಾಗಿ ಮಿಂಚಿದ್ದು ದೀಪಾ ಸನ್ನಿಧಿ. ಈ ಒಂದು ಸಿನಿಮಾ ದರ್ಶನ್ ಬದುಕನ್ನೇ ಬದಲಾಯಿಸಿತ್ತು.
ಲೈಟ್ ಬಾಯ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ದರ್ಶನ್ ಸಿನಿ ಬದುಕು ಹೇಳುವಷ್ಟು ಸುಲಭವಾಗಿರಲಿಲ್ಲ. ಅವಮಾನ ಕಷ್ಟಗಳ ಮದ್ಯೆ ಡಿ ಬಾಸ್ ಆಗಿ ಈಗ ಬೆಳೆದು ನಿಂತಿದ್ದಾರೆ ಎಂದರೆ ಅದಕ್ಕೆ ಅವರ ಛಲವೇ ಕಾರಣ.
ಸ್ಯಾಂಡಲ್‌ವುಡ್ ಸಾರಥಿ ದರ್ಶನ್ ಬಾಕ್ಸಾಫೀಸ್ ಸುಲ್ತಾನನಾಗಿ ಮೆರೆಯುತ್ತಿದ್ದಾರೆ. ಇವರಿಗೆ ಈ ಯಶಸ್ಸು ಏಕಾಏಕಿ ಸಿಕ್ಕಿಲ್ಲ. ಇದರ ಹಿಂದೆ ಸಾಕಷ್ಟು ಶ್ರಮವಿದೆ. ಕಷ್ಟದ ದಿನಗಳಿವೆ. ಅಪ್ಪನಿಗೆ ಮಗ ಓದಬೇಕೆಂಬ ಆಸೆ. ಆದರೆ ಮಗನಿಗೆ ನಟನೆ ಕಡೆ ಆಸಕ್ತಿ. ಅಪ್ಪನನ್ನು ವಿರೋಧಿಸಿ ನೀನಾಸಂ ಸೇರಿದ್ರಂತೆ ದರ್ಶನ್. ಮುಂದೆ ಆಗಿದ್ದೆಲ್ಲಾ ಸಾಧನೆ.
ಇದೀಗ ದರ್ಶನ್ ಸಾರಥಿ ಸಿನಿಮಾಗೆ ಈಗ 11ರ ಸಂಭ್ರಮ. ಸಂಕಷ್ಟದಲ್ಲಿದ್ದ ದರ್ಶನ್ ನಟಿಸಿದ್ದ ಈ ಸಿನಿಮಾವನ್ನು ಅಭಿಮಾನಿಗಳು ಬಾಕ್ಸಾಫಿಸ್ನಲ್ಲಿ ಮೆರೆಸಿದ್ದರು. ಹಾಡುಗಳು, ಕತೆ, ಮೇಕಿಂಗ್ ಎಲ್ಲ ವಿಷಯದಲ್ಲೂ ಈ ಸಿನಿಮಾ ಪ್ರೇಕ್ಷಕರ ಮನಸೂರೆ ಮಾಡಿತ್ತು.
ಶ್ರಮಪಟ್ಟು ನಾಯಕನಾಗಿ ಮಿಂಚಿದ ದರ್ಶನ್ ಅವರ ಸಿನಿ ಜೀವನಕ್ಕೆ ಸಾರಥಿ ಸಿನಿಮಾ ಒಂದು ರೀತಿ ಹೊಸ ತಿರುವನ್ನೇ ಕೊಟ್ಟಿತ್ತು. ಹೌದು, ವೈಯಕ್ತಿಕ ಹಾಗೂ ಸಿನಿ ಜೀವನದಲ್ಲೂ ಸಾಕಷ್ಟು ಸಮಸ್ಯೆಗಳಿಂದಾಗಿ ಕುಗ್ಗಿ ಹೋಗಿದ್ದರು ದರ್ಶನ್. ಇನ್ನೇನು ದರ್ಶನ್ ಅವರ ಸಿನಿ ಜೀವನ ಮುಗಿದೇ ಹೋಯಿತು ಎಂದು ಮಾತನಾಡಿಕೊಳ್ಳುವ ವೇಳೆಗೆ ತೆರೆಕಂಡಿದ್ದುಈ ಸಾರಥಿ ಸಿನಿಮಾ. ಬಾಕ್ಸಾಫಿಸ್ನಲ್ಲಿ ದರ್ಶನ್ ಅವರಿಗೆ ದೊಡ್ಡ ಯಶಸ್ಸು ತಂದುಕೊಡುವುದರೊಂದಿಗೆ ದೊಡ್ಡ ಮಟ್ಟದಲ್ಲೇ ಕಲೆಕ್ಷನ್ ಮಾಡಿತ್ತು. 2011ರಲ್ಲಿ ಅಕ್ಟೋಬರ್ 1 ರಂದು ಇದೇ ದಿನದಂದು ಸಾರಥಿ ಸಿನಿಮಾ ರಿಲೀಸ್ ಆಗಿತ್ತು.
ಸರಿಯಾಗಿ ಹತ್ತು ವರ್ಷಗಳ ಹಿಂದೆ ದಿನಕರ್ ಮತ್ತು ದರ್ಶನ್ ತೂಗುದೀಪ ಅವರ ಅತ್ಯಂತ ಯಶಸ್ವಿ ಸಹಯೋಗದ ‘ಸಾರಥಿ’ತೆರೆ ಕಂಡಿತ್ತು. 2008 ರ ಹೀಸ್ಟ್ ಥ್ರಿಲ್ಲರ್ ‘ನವಗ್ರಹ’ದ ನಂತರ ಇದು ಸಹೋದರರ ಜೊತೆಗಿನ ಎರಡನೇ ಚಿತ್ರವಾಗಿದೆ, ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ದಚ್ಚುದು ಸಮಗ್ರ ಪಾತ್ರದ ಭಾಗವಾಗಿತ್ತು.
‘ಸಾರಥಿ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿತು ಮತ್ತು ದರ್ಶನ್ ಅವರ ದೊಡ್ಡ ವಾಣಿಜ್ಯ ಹಿಟ್‌ಗಳಲ್ಲಿ ಒಂದಾಗಿ ಇಂದಿಗೂ ಎತ್ತರದಲ್ಲಿದೆ. ಚಾಲೆಂಜಿಂಗ್ ಸ್ಟಾರ್ ಅವರ ಅಭಿಮಾನಿಗಳು ವಿಶೇಷವಾಗಿ ಅವರ ಆಟೋ-ರಿಕ್ಷಾ ಚಾಲಕ ಅವತಾರದಿಂದ ಮತ್ತು ಅವರ ಮತ್ತು ದೀಪಾ ಸನ್ನಿಧಿಯ ನಡುವಿನ ಆನ್-ಸ್ಕ್ರೀನ್ ಕೆಮಿಸ್ಟ್ರಿಯಿಂದ ಸಂತೋಷಪಟ್ಟರು. ಆ ಸಮಯದಲ್ಲಿ ದರ್ಶನ್ ಅವರನ್ನು ಸುತ್ತುವರಿದ ವಿವಾದಗಳ ಹೊರತಾಗಿಯೂ ಚಿತ್ರವು ಪ್ರಮುಖ ವಾಣಿಜ್ಯ ಯಶಸ್ಸನ್ನು ಸಾಧಿಸಿತು.
‘ಸಾರಥಿ’ಯ ಸಂಗೀತವು ಅದರ ಯಶಸ್ಸಿಗೆ ಮತ್ತೊಂದು ಪ್ರಮುಖ ಕೊಡುಗೆಯಾಗಿದೆ. ದರ್ಶನ್ ಅವರ ಅನೇಕ ಯಶಸ್ಸಿನ ಭಾಗವಾಗಿರುವ ವಿ.ಹರಿಕೃಷ್ಣ ಅವರು ಚಿತ್ರದ ಸಂಗೀತ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅನೇಕ ಸ್ಮರಣೀಯ ರಾಗಗಳನ್ನು ನೀಡಿದ್ದಾರೆ. ಇವರಿಬ್ಬರು ಒಟ್ಟಿಗೆ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ ಮತ್ತು ವಿ. ಹರಿಕೃಷ್ಣ ತಮ್ಮ ವೃತ್ತಿಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಿರ್ದೇಶಕರಾಗಿ ಬದಲಾಗಿದ್ದು ‘ಯಜಮಾನ’, ದರ್ಶನ್ ನಾಯಕರಾಗಿ ನಟಿಸಿದ ಒಂದು ಉತ್ತಮ ಮಾಸ್ ಎಂಟರ್‌ಟೈನರ್. ಮುಂಬರುವ ಚಿತ್ರ ‘ಕ್ರಾಂತಿ’ ದರ್ಶನ್ ಅವರ 55 ನೇ ಯೋಜನೆ ಮೂಲಕ ಮ್ಯಾಜಿಕ್ ಅನ್ನು ಪುನರಾವರ್ತಿಸಲು ಹರಿಕೃಷ್ಣ ಮತ್ತು ದರ್ಶನ್ ಇಬ್ಬರೂ ಮತ್ತೆ ಒಟ್ಟಿಗೆ ಸೇರಿದ್ದಾರೆ.
ಸಾರಥಿ ಸಿನಿಮಾ ಸೂಪರ್ ಡೂಪರ್ ಹಿಟ್ ಆದ್ಮೇಲೆ ದರ್ಶನ್ ರಾಜ್ಯಾದ್ಯಂತ ಸುತ್ತಿ ಅಭಿಮಾನಿಗಳೊಂದಿಗೆ ವಿಜಯೋತ್ಸವ ಮಾಡಿದ್ರು ಹಾಗೆ ಕ್ರಾಂತಿ ಸಿನಿಮಾಕ್ಕೆ ಇದೀಗ ಅಭಿಮಾನಿಗಳೇ ರಾಜ್ಯ ಹಾಗೂ ದೇಶದಿಂದಾಚೆಗೂ ಪ್ರಚಾರ ನೀಡುತ್ತಿರುವುದು ವಿಶೇಷ. ಸಾರಥಿ ರೀತಿಯಲ್ಲಿ ಕ್ರಾಂತಿ ಸಿನಿಮಾ ವಿಜಯೋತ್ಸವಕ್ಕೆ ಡಿ ಬಾಸ್ ರಾಜ್ಯ ಸುತ್ತುವರೆದು ಅಭಿಮಾನಿಗಳನ್ನು ಭೇಟಿಯಾಗ್ತಾರಾ ಕಾದು ನೋಡ್ಬೇಕು…
ಆಟೋಗೆ ದುಡ್ಡಿಲ್ಲದಿದ್ದಾಗ ನಿರಂಜನ್ ಏನ್ ಮಾಡಿದ್ರು ಗೊತ್ತಾ..?- ದೇಶಪಾಂಡೆ ಲೈಫ್ ಸ್ಟೋರಿ..