Thursday, July 25, 2024

Latest Posts

‘ಕೊನೆಯ 20 ನಿಮಿಷ ರಿಷಬ್ ಮೈಮೇಲೆ ದೈವ ಬಂದಿತ್ತು…’

- Advertisement -

ಈಗ ಎಲ್ಲೆಲ್ಲೂ ಕಾಂತಾರ ಸಿನಿಮಾದ್ದೇ ಹವಾ. ಸ್ಯಾಂಡಲ್‌ವುಡ್ ಸಿನಿಮಾ ದೇಶದೆಲ್ಲೆಡೆ ಸಖತ್ ಸದ್ದು ಮಾಡುತ್ತಿದ್ದು, ಅಷ್ಟು ಕಷ್ಟ ಪಟ್ಟಿದ್ದಕ್ಕೂ ರಿಷಬ್ ಶೆಟ್ಟಿಗೆ ಅತ್ಯುತ್ತಮ ಗೆಲುವು ಸಿಕ್ಕಿದೆ. ಈ ಸಿನಿಮಾದ ಮೂಲಕ ಎಷ್ಟೋ ಜನ ಇವತ್ತಿನಿಂದ ರಿಷಬ್ ಶೆಟ್ಟಿ ನನ್ನ ಫೇವರಿಟ್ ಹೀರೋ ಎಂದಿದ್ದಾರೆ. ಇಂಥ ಸೂಪರ್ ಹಿಟ್ ಸಿನಿಮಾ ಬಗ್ಗೆ ನಟ ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ.

ನಾನು ಪ್ರಿಮೀಯರ್ ಶೋ ನೋಡಿಯಾದ ಮೇಲೆ, ಸುಧಾರಿಸಿಕೊಳ್ಳುವುದಕ್ಕೆ ಅರ್ಧ ಗಂಟೆ ತೆಗೆದುಕೊಂಡೆ. ಸಾಮಾನ್ಯವಾಗಿ ಶೂಟಿಂಗ್ ಮುಗಿದ ಮೇಲೆ ನಾವು ಮೊದಲೇ ಸಿನಿಮಾ ನೋಡಿರ್ತೀವಿ. ಆದ್ರೆ ಈ ಸಿನಿಮಾವನ್ನು ರಿಷಬ್ ಥಿಯೇಟರ್‌ಗೆ ಬಂದು ನೋಡಿ ಅಂತಾ ಹೇಳಿದ್ರು. ಹಾಗಾಗಿ ಪ್ರಿಮಿಯರ್ ಶೋ ನೋಡಿದ್ದು.

ಆಟೋಗೆ ದುಡ್ಡಿಲ್ಲದಿದ್ದಾಗ ನಿರಂಜನ್ ಏನ್ ಮಾಡಿದ್ರು ಗೊತ್ತಾ..?- ದೇಶಪಾಂಡೆ ಲೈಫ್ ಸ್ಟೋರಿ..

ದಕ್ಷಿಣ ಕನ್ನಡದ ಪದ್ಧತಿಗಳ ಬಗ್ಗೆ ಸಿನಿಮಾ ಆಗಿರುವುದರಿಂದ, ಏನಾದ್ರೂ ಮಿಸ್ಟೇಕ್ ಆಗಿರಬಹುದಾ ಅಂತಾ ನಾನು ತಿಳಿದುಕೊಂಡಿದ್ದೆ. ಆದ್ರೆ ರಿಷಭ್ ಯಾರ ಭಾವನೆಗೂ ಧಕ್ಕೆ ಬರದಂತೆ, ಉತ್ತಮವಾಗಿ ಡೈರೆಕ್ಷನ್ ಮಾಡಿದ್ದಾರೆ. ಕಥೆ ಕೊಂಡೊಯ್ದಿದ್ದಾರೆ. ನಮ್ಮ ಸಿನಿಮಾವನ್ನು ನಾವೇ ಹೊಗಳಿಕೊಳ್ಳಬಾರದು. ಆದ್ರೆ ಈ ಸಿನಿಮಾ ನೋಡಿ ಹೊಗಳದೇ ಇರಲು ಸಾಧ್ಯವಾಗುತ್ತಿಲ್ಲ.

‘ಕಾಂತಾರ’ ಮೆಚ್ಚಿದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್

ಇನ್ನು ಲಾಸ್ಟ್ ಅರ್ಧ ಗಂಟೆ ನನ್ನ ಗೆಳೆಯ ರಿಷಬ್ ಶೆಟ್ಟಿ, ರಿಷಬ್ ಶೆಟ್ಟಿಯಾಗಿರಲಿಲ್ಲ. ಅವನ ಮೇಲೆ ದೈವ ಬಂದಿತ್ತು. ಅವನು ದೈವದ ಪ್ರೇರಣೆಯಿಂದಲೇ ಆ ಪಾತ್ರವನ್ನು ನಿಭಾಯಿಸಲು ಸಾಧ್ಯವಾಯಿತು. ಅಷ್ಟು ಚಂದವಾಗಿ ನಟಿಸಿದ್ದಾನೆ. ಪಂಜುರ್ಲಿ ದೈವದ ಆಶೀರ್ವಾದದಿಂದಲೇ ನನಗೆ ಈ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ರಿಷಬ್‌ಗೆ ಮತ್ತು ನಮ್ಮನ್ನು ಸಪೋರ್ಟ್ ಮಾಡಿದ ನಿಮ್ಮೆಲ್ಲರಿಗೂ ಥ್ಯಾಂಕ್ಯೂ ಎಂದಿದ್ದಾರೆ ಪ್ರಮೋದ್ ಶೆಟ್ಟಿ.

- Advertisement -

Latest Posts

Don't Miss