Sunday, December 22, 2024

Latest Posts

Dasara Fest : ಸರಳವಾಗಿ ಮೈಸೂರು ದಸರಾ ಮಾಡುತ್ತಂತೆ ಸರ್ಕಾರ..!

- Advertisement -

Mysore News : ಬರದ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಜೊತೆಗೆ ಹಂಪಿ ಉತ್ಸವವನ್ನು ಕೂಡ ಮುಂದೂಡಿದೆ. ಸರ್ಕಾರದ ಈ ನಿರ್ಧಾರಕ್ಕೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿಕಾರಿದ್ದಾರೆ.

ಬೇರೆ ಎಲ್ಲದಕ್ಕೂ ಕೋಟಿ ಕೋಟಿ ಖರ್ಚು,ಹಿಂದೂಗಳ ಹಬ್ಬಗಳು ಹಾಗೂ ಉತ್ಸವಗಳು ಮಾತ್ರ ಸರಳವಾಗಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವ್ರು, ಈ ಬಾರಿ ಸರಳ ದಸರಾ. ಈ ಬಾರಿ ಹಂಪಿ ಉತ್ಸವ ಇಲ್ಲ ಎಂದು ಸರ್ಕಾರ ನಿರ್ಧರಿಸಿದೆ.

ಆದರೆ, ನಿಯಮಗಳನ್ನು ಗಾಳಿಗೆ ತೂರಿ ಮಂತ್ರಿ ಮಂಡಲಕ್ಕೆ ಹೊಸ ಕಾರುಗಳ ಖರೀದಿ. ವಕ್ಫ್ ಹಾಗು ಹಾಜ್ ಭವನಗಳಿಗೆ ಕೋಟಿ ಕೋಟಿ ಅನುದಾನ. ರಾಜೀವ್ ಗಾಂಧೀ ಪುತ್ಥಳಿಗಾಗಿ ಕೋಟಿ ಕೋಟಿ ಖರ್ಚು. ಗ್ಯಾರಂಟಿ ಯೋಜನೆ ಕಾರ್ಯಕ್ರಮಗಳಿಗೆ ಕೋಟಿ ಕೋಟಿ ಖರ್ಚು ಮಾಡುತ್ತಿರುವುದನ್ನು ಪ್ರಸ್ತಾಪಿಸಿ, ಹಿಂದೂಗಳ ಹಬ್ಬಗಳು ಹಾಗು ಉತ್ಸವಗಳು ಮಾತ್ರ ಸರಳವಾಗಿ ಎಂದು ಹೇಳಿದ್ದಾರೆ.

ಇಲ್ಲಿದೆ ಕಂಪ್ಲೀಟ್ ವೀಡಿಯೋ ………………..

 

- Advertisement -

Latest Posts

Don't Miss