district news
ವಯಸ್ಸಿಗೆ ಬಂದ ಮಗಳು ಮನೆಯಲ್ಲಿದ್ದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಎಂದು ತಿಳಿದ ಪೋಷಕರು ಊರಲ್ಲಿ ಸಾಲ ಸೋಲ ಮಾಡಿ ವರನ ಕಡೆಯವರು ಕೇಳಿದಷ್ಟು ವರದಕ್ಷಣೆ ಕೊಟ್ಟು ಮದುವೆ ಮಾಡುತ್ತಾರೆ. ಆದರೆ ಪ್ರತಿಯೊಂದಕ್ಕೂ ಒಂದು ಇತಿ ಮಿತಿ ಅಂತ ಇರುವ ಹಾಗೆ ಸಾಲ ಮಾಡುವುದಕ್ಕೆ ಎಂದು ಹಂತ ಇರುತ್ತದೆ.ನಾವು ಮಾಡುವ ಸಾಲ ನಮ್ಮನ್ನೆ ತೀರಿ ಹೋಗುವ ಹಾಗೆ ಮಾಡಬಾರದು.ಇದೆ ರೀತಿ ಸಾಲ ಮಾಡಿದ ದಂಪತಿಗಳು ತಮ್ಮ ಜೀವಕ್ಕೆ ತಾವೆ ಕುತ್ತು ತಂದುಕೊಂಡಿದ್ದಾರೆ.
ಹೌದು ಸ್ನೇಹಿತರೆ ಹಾವೇರಿ ಜಿಲ್ಲೆ ಗ್ರಾಮವೊಂದರಲ್ಲ್ಇ ಮನೆಯಲ್ಲಿ ಬೆಳೆದು ನಿಂತ ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿ ಕೊಡಬೇಕು ಎನ್ನುವ ಆಲೋಚನೆಯಿಂದ ಊರಲ್ಲಿ ಸಾಲ ಮಾಡಿ ಮಗಳ ಮದುವೆಯನ್ನು 25 ಲಕ್ದಷ ಖರ್ಚು ಮಾಡಿ ಮಗಳ ಮದುವೆಯನ್ನು ದಸರಾ ಹಬ್ಬದ ತರ ಮಾಡಿಕೊಟ್ಟರು . ಮೊದಲು ಎಲ್ಲವೂ ಚೆನ್ನಾಗಿಯೆ ಇತ್ತು ಆದರೆ ದಿನಗಳೇದಂತೆ ಮಾಡಿರುವ ಸಾಲದ ಬಾಧೆ ಜಾಸ್ತಿಯಾಗುತ್ತಾ ಬಂತು.. ದುಡಿದದ್ದೂ ಜೀವನ ನಿರ್ವಹಣೆಗೆ ಸರಿಹೋಯಿತು ಇನ್ನು ಸಾಲ ಮತ್ತು ಅದಕ್ಕೆ ಆಗುವ ಬಡ್ಡಿ ತೀರಿಸಬೇಕೆಂದರೆ ದೂರದ ಮಾತು. ಸಾಲವನ್ನ ತೀರಿಸಲು ಅಶಕ್ತರಾದಾಗ ಗಂಡ ಹನುಮಂತೇಗೌಡ ತಾಯಿ ಲಲಿತಾ ಹಾಗೂ ಮಗಳು ನೇತ್ರಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೊದಲು ತಂದೆ ತಾಯಿ ಸಾಲ ತೀರಿಸಲು ಆಗುತ್ತುಲ್ಲವಲ್ಲ ಎಂದು ನೇಣಿಗೆ ಶರಣಾಗಿದ್ದಾರೆ. ನಂತ್ರ ಮಗಳು ನೇತ್ರ ನನ್ನ ಮದುವೆ ಮಾಡುವ ಸಲುವಾಗಿ ನನ್ನ ಪೋಷಕರು ಸಾಲ ಮಾಡಿಕೋಡಿದ್ದರು ನನ್ನ್ಂದಾಗಿ ಅವರು ಸಾಯುವಂತಾಯಿತು ಎಂದು ತಿಳಿದು ಮಗಳು ಸಹ ಆತ್ಮಹತ್ಯೆ ಮಾಡುಕೊಂಡಿದ್ದಾಳೆ.
ಈ ಪ್ರಕರಣ ಜಿಲ್ಲೆಯ ಸವಣೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಾವುದರಿಂದ ಸ್ನಾನ ಮಾಡಿದ್ರೆ ಉತ್ತಮ..? ಆರೋಗ್ಯಕ್ಕೂ ಸ್ನಾನಕ್ಕೂ ಇದೆ ನಂಟು..