Davanagere: ದಾವಣಗೆರೆ ದಕ್ಷಿಣದಲ್ಲಿ ಬದಲಾವಣೆಯ ಗಾಳಿ… ಬಿಜೆಪಿ ಪರ ಜನರ ಬೆಂಬಲ!: ಆರ್.ಅಶೋಕ್

Davanagere Political News: ದಾವಣಗೆರೆ ದಕ್ಷಿಣದಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷದವರು ಈ ಬಾರಿ ಉಪಚುನಾವಣೆ ಗೆಲ್ಲಲೇಬೇಕು ಎಂದು ಜಿದ್ದಾಜಿದ್ದಿನ ಸ್ಪರ್ಧೆಗಿಳಿದಿದೆ.

1 ಕಡೆ ಸಿಎಂ ಸಿದ್ದರಾಮಯ್ಯ ಕಳೆದೆರಡು ದಿನದಿಂದ ಉಪಚುನಾವಣಾ ಪ್ರಚಾರಕ್ಕಾಗಿ ದಾವಣಗೆರೆಯಲ್ಲೇ ಬೀಡುಬಿಟ್ಟಿದ್ದಾರೆ. ಇದೀಗ ಬಿಜೆಪಿಗರು ಕೂಡ ದಾವಣಗೆರೆ ದಕ್ಷಿಣದಲ್ಲಿ ಪ್ರಚಾರ ನಡೆಸಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ಇಂದು ಪ್ರಚಾರದಲ್ಲಿ ಪಾಲ್ಗ“ಂಡಿದ್ದರು.

ಈ ವೇಳೆ ಹದಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಬುಳ್ಳಾಪುರ, ಹೊಸನಾಯಕನಹಳ್ಳಿ ಹಾಗೂ ಹದಡಿ ಗ್ರಾಮಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ಶ್ರೀ ಶ್ರೀನಿವಾಸ ಟಿ ದಾಸಕರಿಯಪ್ಪ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಆರ್.ಅಶೋಕ್ ಮತಯಾಚನೆ ಮಾಡಿದರು.

ಜನರು ತೋರಿದ ಅಪಾರ ಆತ್ಮೀಯತೆ ಹಾಗೂ ಬೆಂಬಲ ನಮಗೆ ಇನ್ನಷ್ಟು ಉತ್ಸಾಹ ಮತ್ತು ಪ್ರೇರಣೆಯನ್ನು ನೀಡಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳಿಂದ ಬೇಸತ್ತಿರುವ ಜನತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ಬದ್ಧವಾಗಿರುವ ಭಾರತೀಯ ಜನತಾ ಪಕ್ಷದ ಬೆಂಬಲಿಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ದೃಢ ನಿರ್ಧಾರ ಮಾಡಿದ್ದಾರೆ ಎಂಬ ವಿಶ್ವಾಸ ನನಗಿದೆ.

ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಶ್ರೀ ಶ್ರೀನಿವಾಸ ಟಿ ದಾಸಕರಿಯಪ್ಪ ಅವರಿಗೆ ಆಶೀರ್ವಾದ ನೀಡಿ ಗೆಲ್ಲಿಸುವಂತೆ ದಾವಣಗೆರೆ ದಕ್ಷಿಣದ ಜನತೆಯಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಆರ್.ಅಶೋಕ್ ಹೇಳಿದ್ದಾರೆ.

About The Author