Belagavi News: ಬೆಳಗಾವಿ: ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆ, ಬೆಳಗಾವಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಪ್ರವಾಹ ಸಂತ್ರಸ್ತರಿಗೆ, ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ. ಬೆಳಗಾವಿಯ ಗೋಕಾಕ್ ತಾಲೂಕಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ, ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಡಿಸಿ, ಮಹಾರಾಷ್ಟ್ರದಲ್ಲಿ ಆಗ್ತಿರೋ ಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಬಂದಿದೆ. ಪ್ರವಾಹ ಸ್ಥಿತಿ ನಿಯಂತ್ರಿಸಲು ನಿರಂತರವಾಗಿ ಪ್ರಯತ್ನ ಮಾಡ್ತಿದ್ದೇವೆ. ಆಲಮಟ್ಟಿ ಆಣೆಕಟ್ಟುಯಿಂದ 3 ಲಕ್ಷ ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ತೀವ್ರ ಪ್ರವಾಹ ಉಂಟಾಗಬಾರದೆಂದು 80 ರಷ್ಟು ಭರ್ತಿಯಾಗಿದ್ದ ಆಲಮಟ್ಟಿ ಜಲಾಶಯವನ್ನ ಶೇಕಡಾ 58ರಷ್ಟು ತಂದು ನಿಲ್ಲಿಸಿದ್ದೇವೆ. ಇದರಿಂದ ತೀವ್ರ ಪ್ರವಾಹದ ಸ್ಥಿತಿ ತಪ್ಪಿಸಲು ಕ್ರಮಕೈಗೊಂಡಿದ್ದೇವೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಚನೆಗಳನ್ನ ನದಿ ಪಾತ್ರದ ಗ್ರಾಮಸ್ಥರು ಪಾಲಿಸಬೇಕು. ಕಾಳಜಿ ಕೇಂದ್ರದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಡಿಸಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.