Saturday, September 21, 2024

Latest Posts

ವಾರ್ನರ್ ಅಬ್ಬರಕ್ಕೆ ಮುಳುಗಿದ ಸನ್

- Advertisement -

ಡೇವಿಡ್ ವಾರ್ನರ್ ಅವರ ಸ್ಫೋಟಕ ಬ್ಯಾಟಿಂಗ್ ನೆರೆವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಸನ್ ರೈಸರ್ಸ್ ವಿರುದ್ಧ 21 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಮಂದೀಪ್ ಸಿಂಗ್ ಹಾಗೂ ವೇಗಿ ಭುವನೇಶ್ವರ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

ನಂತರ ಬಂದ ಮಿಚೆಲ್ ಮಾರ್ಷ್ 10 ರನ್ ಗಳಿಸಿದರು. ನಾಯಕ ರಿಷಭ್ ಪಂತ್ (26 ರನ್) ಬಿರುಸಿನ ಬ್ಯಾಟಿಂಗ್ ಮಾಡಿ ಶ್ರೇಯಸ್ ಗೋಪಾಲ್ಗೆ ವಿಕೆಟ್ ಒಪ್ಪಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಬಂದ ರೋವಮನ್ ಪೊವೆಲ್ ಡೇವಿಡ್ ವಾರ್ನರ್ಗೆ ಒಳ್ಳೆಯ ಸಾಥ್ ಕೊಟ್ಟರು. ಸನ್ ರೈಸರ್ಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಾರ್ನರ್ 34 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.

ರೊವಮನ್ ಪೊವೆಲ್ 30 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಡೇವಿಡ್ ವಾರ್ನರ್ ಒಟ್ಟು 58 ಎಸೆತ ಎದುರಿಸಿ 12 ಬೌಂಡರಿ 3 ಸಿಕ್ಸರ್ ನೆರೆವಿನಿಂದ ಅಜೇಯ 92 ರನ್ ಗಳಿಸಿದರು.

ರೊವಮನ್ ಪೊವೆಲ್ ಕೇವಲ 35 ಎಸೆತ ಎದುರಿಸಿ 3 ಬೌಂಡರಿ 6 ಸಿಕ್ಸರ್ ಸಿಡಿಸಿ ಒಟ್ಟು ಅಜೇಯ 67 ರನ್ ಗಳಿಸಿದರು. ಡೆಲ್ಲಿ ತಂಡ ನಿಗದಿತ 20 ಓವರ್ಗಳಲ್ಲಿ  3ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು.

208 ರನ್ ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಸನ್ ರೈಸರ್ಸ್ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ನಾಯಕ ಕೇನ್ ವಿಲಿಯ್ಸಮ್ ಅವರುಗಳ ವಿಕೆಟ್ ಕಳೆದುಕೊಂಡಿತು.

ನಂತರ ಬಂದ ರಾಹುಲ್ ತ್ರಿಪಾಠಿ 22, ಏಡಿನ್ ಮಾರ್ಕರಾಮ್ 42 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿದರು. ಶಶಾಂಕ್ ಸಿಂಗ್ 10, ಅಬೋಟ್ 7 ರನ್, ಶ್ರೇಯಸ್ ಗೋಪಾಲ್ ಅಜೇಯ 9, ಕಾರ್ತಿಕ್ ತ್ಯಾಗಿ 7, ಭುವನೇಶ್ವರ್ ಅಜೇಯ 5 ರನ್  ಗಳಿಸಿದರು. ಏಕಾಂಗಿಯಾಗಿ ಹೋರಾಡಿದ ನಿಕೊಲೊಸ್ ಪೂರಾನ್ 34 ಎಸೆತ ಎದುರಿಸಿ 2 ಬೌಂಡರಿ 6 ಸಿಕ್ಸರ್ ಸಿಡಿಸಿ ಒಟ್ಟು 62 ರನ್ ಕಲೆ ಹಾಕಿದರು.

ಡೆಲ್ಲಿ ಪರ ಖಲೀಲ್ ಅಹ್ಮದ್ 3, ಶಾರ್ದೂಲ್ ಠಾಕೂರ್ 2, ನೊರ್ಟ್ಜೆ, ಮಾರ್ಷ್, ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಡೇವಿಡ್ ವಾರ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

- Advertisement -

Latest Posts

Don't Miss