ಬೆಂಗಳೂರು ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಾತನಾಡಿರುವ ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡಿದ್ದು, ವಿವಾದಾತ್ಮಕ ಹೇಳಿಕೆಯನ್ನ ಪೋಸ್ಟ್ ಮಾಡಿದವರನ್ನ ಪತ್ತೆ ಹಚ್ಚಲಾಗುತ್ತದೆ. ಆದರೆ ಸಾರ್ವಜನಿಕರು ಕಾನೂನನ್ನ ಕೈಗೆತ್ತಿಕೊಳ್ಳಬಾರದು. ತಾಳ್ಮೆ ಶಾಂತಿಯನ್ನ ಸೌಹಾರ್ದತೆಯನ್ನ ಕಾಪಾಡಬೇಕು. ಒಮ್ಮೆಲೆ ಇಷ್ಟು ಜನ ಸಂಘಟಿತರಾಗಿ ಬರೋದು ಸಾಧ್ಯವಿಲ್ಲ. ಇದರ ಹಿನ್ನೆಲೆಯನ್ನು ನೋಡಬೇಕಿದೆ. ವ್ಯವಸ್ಥಿತವಾಗಿ ಮಾಡಲು ಹೊರಟಿರುವವರನ್ನ ಪೊಲೀಸ್ ಇಲಾಖೆ ಪತ್ತೆಹಚ್ಚುತ್ತಿದೆ ಎಂದಿದ್ದಾರೆ.

ಅಲ್ಲದೇ, ಎಸ್ ಡಿ ಪಿ ಐ ಬ್ಯಾನ್ ಮಾಡುವ ವಿಚಾರದ ಬಗ್ಗೆ ಮಾತನಾಡಿ ಡಿಸಿಎಂ, ಎಸ್ ಡಿ ಪಿ ಐ ಸಂಘಟನೆಯನ್ನು ಬೆಳೆಸಿದವರು, ಯಾರು ರಕ್ಷಣೆ ಕೊಟ್ಟವರು ಯಾವ ಪಕ್ಷ ಅಂತಾ ಗೊತ್ತಿದೆ. ಹಿಂದಿನ ಹಲವು ಘಟನೆಯಲ್ಲಿ ಎಸ್ ಡಿ ಪಿ ಐ ಪಾತ್ರ ಎಲ್ಲರಿಗೂ ಗೊತ್ತಿದೆ. ಪಿಎಫ್ ಐ, ಎಸ್ ಡಿ ಪಿ ಐ ಯಾವ ರೀತಿ ನಾಡಿನಲ್ಲಿ ತೀವ್ರವಾದಿಗಳನ್ನ ಬೆಳೆಸುವಂತದ್ದು, ಸೌಹಾರ್ದತೆಯನ್ನು ಕದಡುವಂತಹದ್ದು. ಟಾರ್ಗೆಟಿಂಗ್ ಕಿಲ್ಲಿಂಗ್ ಮಾಡುವಂತಹದ್ದು ಮಾಡಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕೆಲಸ ಸರ್ಕಾರ ಮಾಡುತಿದೆ. ಯಾವ ಸಂಘಟನೆಯನ್ನ ಇದರಿಂದ ತಪ್ಪಿಸಿಕೊಳ್ಳಲು ಬಿಡಲ್ಲ. ಎಸ್ ಡಿ ಪಿ ಐ ಯನ್ನು ಬ್ಯಾನ್ ಮಾಡಲು ನಾನೂ ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.
ಮೃತರು ಅಮಾಯಕರು ಎಂದು ಹೇಳಿಕೆ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್, ಇಂಥಹ ಹೇಳಿಕೆ ಕೊಡುವಲ್ಲಿ ಪ್ರತಿಪಕ್ಷಗಳು ಮುಂಚೂಣಿಯಲ್ಲಿದೆ. ಪ್ರತಿಪಕ್ಷದ ನಾಯಕರು ಜಾಗೃತ ವಹಿಸಿ ಹೇಳಿಕೆ ಕೊಡೋದು ಒಳ್ಳೆಯದು. ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಹೇಳಿಕೆ ಕೊಡಬೇಕು. ಇಂಥಹ ಸಮಾಜ ಘಾತುಕ ಕೃತ್ಯದಲ್ಲಿ ತೊಡಗಿರುವ ಯಾವುದೇ ಸಂಘಟನೆಯಾಗಿರಲಿ ಸರ್ಕಾರ ಬಿಡಲ್ಲ. ಅವರು ಕೈ ತಪ್ಪಿಸಿಕೊಳ್ಳಲು ಆಗಲ್ಲ. ಸಂಘಟನೆ ವಿರುದ್ಧ ಬ್ಯಾನ್ ಮಾಡುವುದೋ…ಅಥವಾ ಬೇರೆ ಕ್ರಮನೋ ಎಲ್ಲವನೂ ಮಾಡುತ್ತೇವೆ ಎಂದಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




