- Advertisement -
ಬೆಂಗಳೂರು: ಸರ್ಕಾರ ಬಿದ್ದು ಹೋಗಲಿದೆ ಅನ್ನೋದೆಲ್ಲಾ ಸುಳ್ಳು, ನಮ್ಮ ಸರ್ಕಾರ ಸುಭದ್ರವಾಗಿರುತ್ತೆ ಅಂತ ಡಿಸಿಎಂ ಡಾ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ,ಡಿಸಿಎಂ,ಸಚಿವರು ಜಂಟಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಫಲಿತಾಂಶ ಬಂದ ಮೇಲೆ ಸರ್ಕಾರ ಬಿದ್ದು ಹೋಗಲಿದೆ ಎಂಬ ಹೇಳಿಕೆ ಕೇಳಿಬರುತ್ತಿದೆ. ಸಿಎಂ ಆಡಳಿತದ ಬಗ್ಗೆ ಯಾವುದೇ ಅನುಮಾನ ಬೇಡ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೂಡ ಸಭೆ ನಡೆಸಿ ಈ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದ್ರು.
ಇದೇ ವೇಳೆ, ಸರ್ಕಾರ ಬದಲಾವಣೆಯಾಗಲ್ಲ, ಕುಮಾರಸ್ವಾಮಿಯವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಜನರಿಗೆ ಕೊಟ್ಟ ಭರವಸೆಯನ್ನು ನಾವು ಈಡೇರಿಸುತ್ತೇವೆ .ಯಾವುದೇ ಅನುಮಾನ ಬೇಡ ಅಂತ ಪರಮೇಶ್ವರ್ ತಿಳಿಸಿದರು.
ಮಂಡ್ಯ ಜನಕ್ಕೆ ಡಿ ಬಾಸ್ ಹೇಳಿದ್ದೇನು. ಈ ವಿಡಿಯೋ ತಪ್ಪದೇ ನೋಡಿ.
- Advertisement -