Hubballi : ಕೊ*ಲೆ ಆರೋಪಿಗಳಿಂದ ಚಂದ್ರಶೇಖರ ಗುರೂಜಿ ಸಂಬಂಧಿಕರಿಗೆ ಜೀವ ಬೆದರಿಕೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಉಣಕಲ ಕೆರೆಯ ಹತ್ತಿರದ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ನಡೆದ ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಆರೋಪಿಗಳು, ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ಗೂರೂಜಿ ಅವರ ಸಂಬಂಧಿಕರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಕುರಿತು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೌದು..ಆರೋಪಿಗಳಾದ ಮಹಾಂತೇಶ ಶಿರೂರು ಮತ್ತು ಮಂಜುನಾಥ ಮೆರೇವಾಡ ವಿರುದ್ಧ ಗುರೂಜಿ ಸಂಬಂಧಿಕರಾದ ಉದ್ಯಮಿ ಸಂಜಯ ಅಂಗಡಿ ಸೆಪ್ಟೆಂಬ‌ರ್ 2ರಂದು ದೂರು ನೀಡಿದ್ದಾರೆ.

2022ರ ಜುಲೈನಲ್ಲಿ ನಡೆದ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ವಿಚಾರಣೆ ಮಾಹಿತಿ ಪಡೆಯಲು, 2024ರ ಫೆ. 14ರಂದು ಸಂಜಯ ಅವರು ತಂಗಿ ಜೊತೆ ಹುಬ್ಬಳ್ಳಿ ಕೋರ್ಟ್‌ಗೆ ಬಂದಿದ್ದರು. ಆ ವೇಳೆ ಪೊಲೀಸರು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ವಿಚಾರಣೆಗೆ ಕರೆದುಕೊಂಡು ಬಂದಿದ್ದರು.

ವಾಪಸ್ಸು ಅವರನ್ನು ಕರೆದೊಯ್ಯುವಾಗ ಗುರೂಜಿ ಸಂಬಂಧಿಕರಿಗೆ ‘ನೀವು ಕೋರ್ಟ್‌ನಲ್ಲಿ ಕಂಡರೆ ಗುರೂಜಿ ತರಹ ಎತ್ತಿ ಬಿಡುತ್ತೀವಿ. ಒಂದೇ ದಿನ ಹೊರಗೆ ಬಂದರೂ ನಿಮ್ಮ ಯಾರನ್ನೂ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದೂ ಅಲ್ಲದೆ, ಸುರೇಶ ಪಲ್ಲೇದ ಮೂಲಕ ಪ್ರಕರಣ ರಾಜೀ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

About The Author