Wednesday, August 6, 2025

Latest Posts

ಏರೋಸ್ಪೇಸ್ ಕಾರಿಡಾರ್, ಎಫ್ಎಂಸಿಜಿ ಬಗ್ಗೆ ಶೀಘ್ರವೇ ನಿರ್ಧಾರ: ಸಚಿವ ಎಂ.ಬಿ.ಪಾಟೀಲ್

- Advertisement -

Hubli News: ಹುಬ್ಬಳ್ಳಿ: ಏರೋಸ್ಪೇಸ್ ಕಾರಿಡಾರ್ ಬಗ್ಗೆ ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದೇವೆ. ರಾಜ್ಯದಲ್ಲಿ ಎರಡು ಕಡೆ ಏರೋಸ್ಪೇಸ್ ಕಾರಿಡಾರ್ ಕೇಳಿದ್ದೇವೆ. ಬೆಂಗಳೂರು ಚಿಕ್ಕಬಳ್ಳಾಪುರದಲ್ಲಿ ಒಂದು, ಹುಬ್ಬಳ್ಳಿ-ಧಾರವಾಡ ಬೆಳಗಾವಿ ಯಲ್ಲಿ ಒಂದು ಕಡೆ ಕೇಳಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳೋದಾಗಿ ರಕ್ಷಣಾ ಸಚಿವ ರಾಜನಾಥಸಿಂಗ್ ಹೇಳಿದ್ದಾರೆ. ಮೋದಿ ಬರ್ತಿದ್ದಾರೆ ಬರಲಿ ಸ್ವಾಗತ ಮಾಡುತ್ತೇವೆ ಎಂದರು.

ಎಫ್.ಎಮ್.ಸಿ.ಜಿ ಕ್ಲಸ್ಟರ್ ಹಾಗೂ ಏರೋಸ್ಪೇಸ್ ಕಾರಿಡಾರ್ ಜಮೀನಿನ ಬಗ್ಗೆ ಸರ್ಕಾರ ದರವನ್ನು ನಿಗದಿ ಮಾಡಿರುವ ಸಂದರ್ಭದಲ್ಲಿ ರೈತರು ಕೋರ್ಟ್ ಗೆ ಹೋಗಿರುತ್ತಾರೆ. ಈ ನಿಟ್ಟಿನಲ್ಲಿ ಬಹುತೇಕ ಲ್ಯಾಂಡ್ ರೇಟ್ ಜಾಸ್ತಿಯಾಗಿರುತ್ತದೆ ಎಂದು ಅವರು ಹೇಳಿದರು.

- Advertisement -

Latest Posts

Don't Miss